ಮತ್ತೊಮ್ಮೆ ಬರ್ತಿದೆ ‘ಧಮ್​’ ಸಿನಿಮಾ; ಅಂದು ಸುದೀಪ್​, ಇಂದು ಹೊಸಬರು

Dhum Kannada Movie: ‘ಧಮ್​’ ಸಿನಿಮಾಗೆ ಶ್ರೀಜಿತ್ ಹೀರೋ ಆಗಿದ್ದಾರೆ. ಅವರ ಜೊತೆ ನಟಿ ಎರೀನ್​ ಅಧಿಕಾರಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟ್ರೇಲರ್​ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.

ಮತ್ತೊಮ್ಮೆ ಬರ್ತಿದೆ ‘ಧಮ್​’ ಸಿನಿಮಾ; ಅಂದು ಸುದೀಪ್​, ಇಂದು ಹೊಸಬರು
ಶ್ರೀಜಿತ್, ಎರೀನ್ ಅಧಿಕಾರಿ
TV9kannada Web Team

| Edited By: Madan Kumar

Aug 11, 2022 | 7:15 AM

2002ರಲ್ಲಿ ಕಿಚ್ಚ ಸುದೀಪ್ (Kichcha Sudeep)​ ನಟನೆಯ ‘ಧಮ್​’ ಸಿನಿಮಾ ನೋಡಿ ಅಭಿಮಾನಿಗಳು ಎಂಜಾಯ್​ ಮಾಡಿದ್ದರು. ಈಗ ಮತ್ತೆ ಅದೇ ಹೆಸರಿನಲ್ಲಿ ಇನ್ನೊಂದು ಸಿನಿಮಾ ಬರುತ್ತಿದೆ. ಆದರೆ ಈ ಚಿತ್ರಕ್ಕೆ ಸುದೀಪ್​ ಹೀರೋ ಅಲ್ಲ. ಬದಲಿಗೆ ಹೊಸಬರ ತಂಡ ಈ ಸಿನಿಮಾ ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರತಿಭಾವಂತ ನಟ ಸಂಚಾರಿ ವಿಜಯ್​  (Sanchari Vijay) ಅವರು ಈ ಸಿನಿಮಾಗೆ ಹೀರೋ ಆಗಬೇಕಿತ್ತು. ಆದರೆ ಅವರ ನಿಧನದಿಂದ ಅದು ಸಾಧ್ಯವಾಗಲಿಲ್ಲ. ಈಗ ಈ ಹೊಸ ‘ಧಮ್​’ ಸಿನಿಮಾಗೆ ಶ್ರೀಜಿತ್​ ಅವರು ನಾಯಕನಾಗಿ ನಟಿಸಿದ್ದಾರೆ. ವಿಆರ್​ಆರ್​ ಅವರು ನಿರ್ದೇಶನ ಮಾಡಿದ್ದಾರೆ. ಶ್ರೀಜಿತ್​ಗೆ ಜೋಡಿಯಾಗಿ ಎರೀನ್​ ಅಧಿಕಾರಿ ನಟಿಸಿದ್ದಾರೆ. ಟ್ರೇಲರ್​ ಮತ್ತು ಹಾಡುಗಳ ಮೂಲಕ ‘ಧಮ್​’ ಸಿನಿಮಾ (Dhum Kannada Movie) ಗಮನ ಸೆಳೆಯುತ್ತಿದೆ. ಸಿನಿಮಾ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

‘ಧಮ್​’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಹಾಗೂ ನಟ, ನಿರ್ದೇಶಕ ರವಿಕಿರಣ್ ಮುಖ್ಯ ಅತಿಥಿಗಳಾಗಿ ಬಂದು ಶುಭ ಹಾರೈಸಿದ್ದಾರೆ. ‘ವಿಆರ್​ಆರ್ ಅವರಂತಹ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಖುಷಿ ಇದೆ. ನಾನು ಈ ಮೊದಲು ‘ರಂಗ್ ಬಿ ರಂಗಿ’ ಚಿತ್ರದಲ್ಲಿ ಹೀರೋ ಆಗಿದ್ದೆ. ಇದು ನನ್ನ 2ನೇ ಸಿನಿಮಾ. ಆಕ್ಷನ್, ಥ್ರಿಲ್ಲರ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳು ನಮ್ಮ ಸಿನಿಮಾದಲ್ಲಿ ಇವೆ’ ಎಂದು ಶ್ರೀಜಿತ್​ ಹೇಳಿದ್ದಾರೆ.

‘ಧಮ್​’ ಚಿತ್ರದ ನಾಯಕಿ ಎರೀನ್ ಅಧಿಕಾರಿ ಮೂಲತಃ ಬಂಗಾಳದವರು. ಬಂಗಾಳಿ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಚಿತ್ರ. ಈ ಸಿನಿಮಾ ಕನ್ನಡ ಮತ್ತು ತಮಿಳಿನಲ್ಲಿ ಮೂಡಿಬರುತ್ತಿದೆ. ಶಯ್ಯಾಜಿ ಶಿಂಧೆ, ರವಿಕಾಳೆ, ನಾಗೇಶ್ವರ ರಾವ್, ಗುರುಚಂದ್ರನ್  ಮುಂತಾದವರು ನಟಿಸಿದ್ದಾರೆ. ರಿಹಾನ್ ಅಹಮದ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜೀವ ವರ್ಷಿಣಿ ಸಂಗೀತ ನೀಡಿದ್ದಾರೆ.

‘ನಾನು ಬಾಲನಟನಾಗಿ ‘ಹಾತಿ ಮೇರೆ ಸಾತಿ’ ಸೇರಿದಂತೆ ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹದಿನಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ತಾಯಿ ಮೈಸೂರಿನವರು‌. ಅವರಿಗೆ ನಾನು ಕನ್ನಡ ಚಿತ್ರವೊಂದಕ್ಕೆ ನಿರ್ದೇಶನ ಮಾಡಬೇಕು ಎಂಬ ಆಸೆಯಿತ್ತು. ಅದು ‘ಧಮ್​’ ಮೂಲಕ ಈಡೇರಿದೆ’ ಎಂದು ನಿರ್ದೇಶಕ ವಿಆರ್​ಆರ್​ ಹೇಳಿದ್ದಾರೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada