Appu Rakhi: ಹೇಗಿದೆ ನೋಡಿ ಅಪ್ಪು ರಾಖಿ; ‘ರಕ್ಷಾ ಬಂಧನ’ಕ್ಕೆ ಹೊಸ ಕಳೆ ತಂದ ‘ಪವರ್​ ಸ್ಟಾರ್’​ ಮೇಲಿನ ಅಭಿಮಾನ

Puneeth Rajkumar Rakhi: ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಇರುವ ರಾಖಿಗಳನ್ನು ತಯಾರಿಸಲಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಜನರು ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

Appu Rakhi: ಹೇಗಿದೆ ನೋಡಿ ಅಪ್ಪು ರಾಖಿ; ‘ರಕ್ಷಾ ಬಂಧನ’ಕ್ಕೆ ಹೊಸ ಕಳೆ ತಂದ ‘ಪವರ್​ ಸ್ಟಾರ್’​ ಮೇಲಿನ ಅಭಿಮಾನ
ಅಪ್ಪು ರಾಖಿ
Follow us
TV9 Web
| Updated By: ಮದನ್​ ಕುಮಾರ್​

Updated on:Aug 10, 2022 | 8:14 AM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ನಿಧನರಾಗಿ ಹಲವು ತಿಂಗಳು ಕಳೆದಿವೆ. ಎಷ್ಟೇ ಸಮಯ ಉರುಳಿದರೂ ಅವರ ಮೇಲೆ ಜನರು ಇಟ್ಟ ಅಭಿಮಾನ ಕಮ್ಮಿ ಆಗುವುದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಉದಾಹರಣೆಗಳು ಸಿಗುತ್ತಲೇ ಇವೆ. ಎಲ್ಲ ಕಡೆಗಳಲ್ಲೂ ಅಪ್ಪು ಗುಣಗಾನ ಮಾಡಲಾಗುತ್ತಿದೆ. ರಸ್ತೆಗಳಿಗೆ ಅವರ ಹೆಸರನ್ನು ಇಟ್ಟು ಗೌರವ ಸೂಚಿಸಲಾಗುತ್ತಿದೆ. ಪ್ರತಿಮೆಗಳನ್ನು ನಿರ್ಮಿಸಿ ಅಭಿಮಾನ ಮೆರೆಯಲಾಗುತ್ತಿದೆ. ಅಷ್ಟೇ ಅಲ್ಲದೇ, ಪ್ರತಿ ವಿಶೇಷ ಸಂದರ್ಭದಲ್ಲೂ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಈಗ ‘ರಕ್ಷಾ ಬಂಧನ’ (Raksha Bandhan 2022) ಹಬ್ಬದ ಸಂದರ್ಭದಲ್ಲೂ ಅದು ಮರುಕಳಿಸಿದೆ. ಮಾರುಕಟ್ಟೆಯಲ್ಲಿ ‘ಪವರ್​​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಫೋಟೋ ಇರುವ ‘ಅಪ್ಪು ರಾಖಿ’ (Appu Rakhi) ಲಭ್ಯವಾಗುತ್ತಿದೆ. ಇದನ್ನು ಖರೀದಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ.

ಆಗಸ್ಟ್​ 11ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಸಹೋದರ-ಸಹೋದರಿಯರ ನಡುವಿನ ಈ ಬಾಂಧವ್ಯದ ಹಬ್ಬಕ್ಕೆ ವಿಶೇಷ ಸ್ಥಾನ ಇದೆ. ಬಗೆಬಗೆಯ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸಿಂಪಲ್​ ರಾಖಿಯಿಂದ ದುಬಾರಿ ರಾಖಿವರೆಗೆ ಹಲವು ಡಿಸೈನ್​ಗಳು ರಾರಾಜಿಸುತ್ತವೆ. ಅವುಗಳ ಜೊತೆಗೆ ಈ ಬಾರಿ ‘ಅಪ್ಪು ರಾಖಿ’ ಕೂಡ ಜನರನ್ನು ಸೆಳೆಯುತ್ತಿದೆ.

ಕೊಪ್ಪಳ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಇರುವ ರಾಖಿಗಳನ್ನು ತಯಾರಿಸಲಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಜನರು ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಆ ಮೂಲಕ ರಕ್ಷಾ ಬಂಧನ ಹಬ್ಬಕ್ಕೆ ‘ಪವರ್​ ಸ್ಟಾರ್​’ ಅಭಿಮಾನಿಗಳಿಂದ ವಿಶೇಷ ಕಳೆ ಬರುತ್ತಿದೆ. ಸಿನಿಮಾ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳಿಂದ ಪುನೀತ್​ ಅವರು ಜನಮನ ಗೆದ್ದಿದ್ದರು. ಆ ಕಾರಣದಿಂದ ಅವರು ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ
Image
Puneeth Rajkumar Twitter: ಮರಳಿ ಬಂತು ಪುನೀತ್​ ರಾಜ್​ಕುಮಾರ್​ ಟ್ವಿಟರ್​ ಖಾತೆಯ ಬ್ಲೂ ಟಿಕ್​; ಸಂಭ್ರಮಿಸಿದ ಅಪ್ಪು ಫ್ಯಾನ್ಸ್​
Image
Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿನ ಪುನೀತ್​ ಪೋಟೋಗಳು; ‘ನಮ್ಮ ಬಾಸ್​ ಸೂಪರ್​’ ಎಂದ ಫ್ಯಾನ್ಸ್​
Image
Ashwini Puneeth Rajkumar: ಪುನೀತ್​ ರಾಜ್​ಕುಮಾರ್​ ಹಾಡಿದ ‘ಅಪರೂಪ’ದ ಸಾಂಗ್​ ರಿಲೀಸ್​ ಮಾಡಿದ ಪತ್ನಿ ಅಶ್ವಿನಿ
Image
ಪುನೀತ್​ ಪುತ್ಥಳಿ ಅನಾವರಣದ ವೇಳೆ ಬಿಕ್ಕಿ ಬಿಕ್ಕಿ ಅತ್ತ ರಾಘವೇಂದ್ರ ರಾಜ್​ಕುಮಾರ್​ ಪತ್ನಿ ಮಂಗಳಾ

ಪುನೀತ್​ ಅವರಿಗೆ ನಾಡು-ನುಡಿಯ ಮೇಲೆ ಅಪಾರ ಗೌರವ ಇತ್ತು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ದೊಡ್ಡದು. ಇದೆಲ್ಲವನ್ನೂ ಪರಿಗಣಿಸಿ, ಮರಣೋತ್ತರವಾಗಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಲಾಯಿತು. ನವೆಂಬರ್​ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುನೀತ್​ ಅವರು ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿದ್ದರು. ಕರುನಾಡಿನ ಅರಣ್ಯ ಮತ್ತು ವನ್ಯ ಜೀವಿಗಳ ಮೇಲೆ ಚಿತ್ರಿತವಾಗಿರುವ ಈ ಡಾಕ್ಯುಮೆಂಟರಿ ಅಕ್ಟೋಬರ್​ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

Published On - 8:14 am, Wed, 10 August 22

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ