AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಸ್ಟರ್​ ಮೂಲಕ ಕುತೂಹಲ ಮೂಡಿಸಿದ ಹೊಸಬರ ‘ಆರ್​.ಪಿ’ ಸಿನಿಮಾ

‘ಆರ್​.ಪಿ.’ ಸಿನಿಮಾವನ್ನು ಕನ್ನಡ ಮಾತ್ರವಲ್ಲೇ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧಪಡಿಸಲು ಚಿತ್ರತಂಡ ನಿರ್ಧರಿಸಿದೆ. ಬಹುತೇಕ ಹೊಸಬರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಪೋಸ್ಟರ್ ಮತ್ತು ಟೈಟಲ್ ಟೀಸರ್​ ಬಿಡುಗಡೆ ಆಗಿದೆ. ಯುವರಾಜ್ ಎಸ್. ಅವರು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.

ಪೋಸ್ಟರ್​ ಮೂಲಕ ಕುತೂಹಲ ಮೂಡಿಸಿದ ಹೊಸಬರ ‘ಆರ್​.ಪಿ’ ಸಿನಿಮಾ
‘ಆರ್​.ಪಿ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Nov 18, 2024 | 11:04 PM

Share

ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ತಂಡಗಳು ಎಂಟ್ರಿ ನೀಡುತ್ತಲೇ ಇವೆ. ಹೊಸಬರ ಸಿನಿಮಾ ಎಂದರೆ ಏನಾದರೂ ಹೊಸತನ ಇರಬಹುದು ಎಂಬ ನಂಬಿಕೆ ಕೂಡ ಪ್ರೇಕ್ಷಕರಿಗೆ ಇರುತ್ತದೆ. ಈಗ ಹೊಸ ತಂಡವೊಂದು ಟೈಟಲ್​ ಟೀಸರ್ ಮತ್ತು ಪೋಸ್ಟರ್​ ಮೂಲಕ ಪರಿಚಯಗೊಂಡಿದೆ. ಈ ಸಿನಿಮಾ ಹೆಸರು ‘ಆರ್​.ಪಿ’. ಬಹುತೇಕ ಹೊಸ ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಶೀರ್ಷಿಕೆಗೆ ‘ಬ್ಲಾಕ್ ಆ್ಯಂಡ್ ವೈಟ್’ ಎಂಬ ಟ್ಯಾಗ್​ ಲೈನ್ ಇದೆ. ಸಿನಿಮಾದ ಪೋಸ್ಟರ್ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ‘ಆರ್​.ಪಿ’ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಯಿತು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ.

ಮಧುಸೂದನಾನಂದಪುರಿ ಪೀಠಾಧಿಕಾರಿ ಡಾ. ಆಚಾರ್ಯ ಮಹಾಮಂಡಲೇಶ್ವರ ಅವರು ‘ಆರ್​.ಪಿ’ ಸಿನಿಮಾದ ಟೈಟಲ್ ಟೀಸರ್‌ ಲೋಕಾರ್ಪಣೆ ಮಾಡಿದರು. ಬಳಿಕ ಅವರು ಚಿತ್ರತಂಡಕ್ಕೆ ಆಶೀರ್ವಾದ ಮಾಡಿದರು. ಗರುಡ, ಶಿವನ ಪಾದ, ತ್ರಿಶೂಲ ಮುಂತಾದ ದೃಶ್ಯಗಳು ಟೈಟಲ್​ ಟೀಸರ್​ನಲ್ಲಿ ಕಾಣಿಸಿವೆ. ಆ ಮೂಲಕ ಪ್ರೇಕ್ಷಕರಿಗೆ ಕೌತುಕ ಮೂಡಿಸಿದೆ. ಹೊಸಬರ ಪ್ರಯತ್ನ ಹೇಗಿರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

‘ಆರ್​.ಪಿ’ ಸಿನಿಮಾ ತಂಡ

‘ಡಿಎಲ್ ಗ್ರೂಪ್ಸ್’ ಹಾಗೂ ‘ಕಬ್ಬಾಳಮ್ಮ ಕ್ರಿಯೇಶನ್’ ಮೂಲಕ ಈ ಸಿನಿಮಾ ಸಿನಿಮಾ ಆಗುತ್ತಿದೆ. ಯುವರಾಜ್ ಎಸ್. ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಬರೆದ್ದಾರೆ. ಅಷ್ಟೇ ಅಲ್ಲದೇ, ಬಂಡವಾಳ ಹೂಡುವುದರ ಜೊತೆಗೆ ಒಂದು ಪಾತ್ರವನ್ನೂ ನಿಭಾಯಿಸಿದ್ದಾರೆ. ನಿರ್ದೇಶನದಲ್ಲಿ ಅವರಿಗೆ ನೃತ್ಯ ಸಂಯೋಜಕ ರಾಜ್ ದೇವ್ ಅವರು ಸಹಕಾರಿಯಾಗಿ ಆಗುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ‘ಭಜರಂಗಿ’ ಹರ್ಷ; ಟೈಗರ್ ಶ್ರಾಫ್ ಚಿತ್ರದ ಖಡಕ್ ಪೋಸ್ಟರ್ ರಿಲೀಸ್

‘ಆರ್​.ಪಿ’ ಸಿನಿಮಾದ ನಿರ್ಮಾಣದಲ್ಲಿ ಶೀಲಾ ನಾಯ್ಡು, ರಘು ಡಿ, ಬಿ. ನಾಗೇಶ್, ಅನಿಲ್ ಗೌಡ, ಜಿ. ಲಿಂಗೇಶ್, ರಾಘವೇಂದ್ರ ಪ್ರಸಾದ್, ದೇವರಾಜು, ಶ್ರೀನಿವಾಸುಲು ಅವರು ಸಾಥ್ ನೀಡಿದ್ದಾರೆ. ಶ್ರೀನಿವಾಸ್ ಎನ್.ಪಿ, ಕಲ್ಪನಾ ಆರ್. ಕೂಡ ಸಹ ನಿರ್ಮಾಪಕರಾಗಿದ್ದಾರೆ. ‘ಪ್ರಕೃತಿ ನಾಶವಾಗುತ್ತಿದ್ದರೂ ಅದನ್ನು ನಾವು ಮರೆಯುತ್ತಿದ್ದೇವೆ. ಇದು ಶುರುವಾಗುವುದು ಹಗಲಲ್ಲಿ. ರಾತ್ರಿ ಇದಕ್ಕೆ ವಿರುದ್ಧವಾಗಿ ಕೆಟ್ಟದು ನಡೆಯುತ್ತದೆ’ ಎಂದು ಕಥೆಯ ಬಗ್ಗೆ ಚಿತ್ರತಂಡದವರು ಹಿಂಟ್ ನೀಡಿದ್ದಾರೆ. ಈ ಸಿನಿಮಾಗೆ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ಬಾಲ ನಟರಾದ ನಿಖಿಲ್ ಆರ್. ಹಾಗೂ ದಕ್ಷಿತ್‌ ಗೌಡ ಆಯ್ಕೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​