ಕೊರೊನಾ ವೈರಸ್ (Coronavirus) ಹಾವಳಿಯಿಂದಾಗಿ ಅನೇಕ ಸಂಭ್ರಮಾಚರಣೆಗಳಿಗೆ ಬ್ರೇಕ್ ಬಿದ್ದಿದೆ. ಕೊವಿಡ್ ನಿಯಮಾವಳಿಗಳನ್ನು ಪಾಲಿಸುತ್ತ ಹುಟ್ಟುಹಬ್ಬದಂತಹ ಸೆಲೆಬ್ರೇಷನ್ ಮಾಡುವುದು ಕಷ್ಟಸಾಧ್ಯ. ಅಲ್ಲದೇ, ಕೊರೊನಾ ಹರಡುವ ಭೀತಿ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಿರುವುದು ಅತ್ಯಗತ್ಯ. ಅದೇ ಕಾರಣದಿಂದ ನಟ-ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಈ ಬಾರಿ ತಮ್ಮ ಬರ್ತ್ಡೇ ಆಚರಿಸಿಕೊಳ್ಳುತ್ತಿಲ್ಲ. ಅದನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜ.22ರಂದು ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ(Nikhil Kumaraswamy Birthday) . ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ನಿಖಿಲ್ ಸಕ್ರಿಯರಾಗಿರುವ ಕಾರಣ ಅವರ ಜನ್ಮದಿನವನ್ನು ಸಂಭ್ರಮಿಸಲು ಅನೇಕ ಜನರು ಒಂದೆಡೆ ಸೇರುತ್ತಾರೆ. ಆದರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬರ್ತ್ಡೇ ಆಚರಿಸಿಕೊಳ್ಳದಿರಲು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನಿರ್ಧರಿಸಿದ್ದಾರೆ. ಅದರ ಜೊತೆಗೆ ಅಭಿಮಾನಿಗಳಲ್ಲಿ ಒಂದು ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ.
ಹುಟ್ಟುಹಬ್ಬಕ್ಕಿಂತ ಒಂದು ದಿನ ಮುಂಚಿತವಾಗಿ, ಅಂದರೆ ಜ.21ರಂದು ನಿಖಿಲ್ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ‘ಕೊವಿಡ್ ಸಂಕಷ್ಟದ ಸಮಯದಲ್ಲಿ ಅದ್ದೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಕೊವಿಡ್ ಸಂಕಷ್ಟದಲ್ಲಿ ಇರುವವರಿಗೆ ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವಿದ್ದಲ್ಲಿಂದಲೇ ನನಗೆ ಹರಸಿ. ಒಂದು ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿ’ ಎಂದು ನಿಖಿಲ್ ಮನವಿ ಮಾಡಿಕೊಂಡಿದ್ದಾರೆ.
ನಿಖಿಲ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕವೇ ಎಲ್ಲರೂ ಮುಂಚಿತವಾಗಿ ವಿಶ್ ಮಾಡುತ್ತಿದ್ದಾರೆ. ಬರ್ತ್ಡೇ ಪ್ರಯುಕ್ತ ಅಭಿಮಾನಿಗಳಿಗೆ ಹೊಸ ಗಿಫ್ಟ್ ಸಿಗಲಿದೆ. ಏನದು? ನಿಖಿಲ್ ಕುಮಾರಸ್ವಾಮಿ ನಟಿಸಲಿರುವ ಹೊಸ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಈಗಾಗಲೇ ‘ರೈಡರ್’, ‘ಜಾಗ್ವಾರ್’ ಮುಂತಾದ ಸಿನಿಮಾಗಳ ಮೂಲಕ ನಿಖಿಲ್ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅವರ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಇದು ಅವರ 5ನೇ ಸಿನಿಮಾ ಆಗಿರಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಶೀರ್ಷಿಕೆ ಏನು? ನಿಖಿಲ್ ಅವರ ಲುಕ್ ಹೇಗಿರಲಿದೆ ಎಂಬುದಕ್ಕೆ ನಾಳೆ (ಜ.22) ಉತ್ತರ ಸಿಗಲಿದೆ. ಅದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಈ ಸಿನಿಮಾಗೆ ಶೂಟಿಂಗ್ ಶುರುವಾಗಿದೆ. ಮಂಜು ಅಥರ್ವ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ:
‘ರೈಡರ್’ ಚಿತ್ರ ನೋಡಿ ಜನ ಹೇಗೆ ಕಮೆಂಟ್ ಮಾಡಿದಾರೆ? ಅಸಲಿ ವಿಚಾರ ತೆರೆದಿಟ್ಟ ನಿಖಿಲ್
‘ಚಿತ್ರರಂಗಕ್ಕೆ ಪುನೀತ್ ರೀತಿಯ ನಟ ಬೇಕು; ನಿಖಿಲ್ ಹೆಚ್ಚು ಸಿನಿಮಾ ಮಾಡಲಿ’: ಎಚ್.ಡಿ. ಕುಮಾರಸ್ವಾಮಿ