ಫೆ.2ಕ್ಕೆ ಬರ್ತಾನೆ ‘ಸಪ್ಲೆಯರ್ ಶಂಕರ’; ಟೀಸರ್​ ಮೂಲಕ ಕೌತುಕ ಮೂಡಿಸಿದ ನಿಶ್ಚಿತ್ ಕರೋಡಿ

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಒಬ್ಬ ಬಾರ್ ಸಪ್ಲೆಯರ್ ಹುಡುಗನ ಸುತ್ತ ನಡೆಯುವ ಕಥೆಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ನಿಶ್ಚಿತ್ ಕರೋಡಿ ಅವರು ಸಪ್ಲೆಯರ್ ಶಂಕರನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ನಾಯಕಿ ಆಗಿದ್ದಾರೆ. ಫೆ.2ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

ಫೆ.2ಕ್ಕೆ ಬರ್ತಾನೆ ‘ಸಪ್ಲೆಯರ್ ಶಂಕರ’; ಟೀಸರ್​ ಮೂಲಕ ಕೌತುಕ ಮೂಡಿಸಿದ ನಿಶ್ಚಿತ್ ಕರೋಡಿ
ನಿಶ್ಚಿತ್​ ಕರೋಡಿ

Updated on: Jan 03, 2024 | 6:53 PM

2024ರಲ್ಲಿ ಬಿಡುಗಡೆ ಆಗಲು ಅನೇಕ ಸಿನಿಮಾಗಳು ಸಿದ್ಧವಾಗಿವೆ. ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಲಾಭ ಆಗಲಿದೆ ಎಂಬ ನಂಬಿಕೆಯೊಂದಿಗೆ ಹಲವು ಚಿತ್ರತಂಡಗಳು ಸಕ್ರಿಯವಾಗಿವೆ. ರಿಲೀಸ್​ ಡೇಟ್​ ಅನೌನ್ಸ್​ ಮಾಡುವ ಮೂಲಕ ತಮ್ಮ ಆಗಮನವನ್ನು ಖಚಿತಪಡಿಸಲಾಗುತ್ತಿದೆ. ಆ ಸಾಲಿನಲ್ಲಿ ನಿಶ್ಚಿತ್ ಕರೋಡಿ (Nischith Korodi) ಅಭಿನಯದ ‘ಸಪ್ಲೆಯರ್​ ಶಂಕರ’ ಸಿನಿಮಾ ಕೂಡ ಇದೆ. ಟೀಸರ್​ ಮೂಲಕ ಭಾರಿ ಕೌತುಕ ಮೂಡಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ‘ಸಪ್ಲೆಯರ್​ ಶಂಕರ’ (Supplier Shankara) ಚಿತ್ರ ಫೆಬ್ರವರಿ 2ರಂದು ತೆರೆಕಾಣಲಿದೆ.

ಹಲವು ಕಾರಣಗಳಿಂದ ‘ಸಪ್ಲೆಯರ್​ ಶಂಕರ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಟೀಸರ್ ತುಂಬ ರಗಡ್​ ಆಗಿ ಮೂಡಿಬಂದಿದೆ. ‘ತ್ರಿನೇತ್ರ ಫಿಲ್ಮ್ಸ್​’ ಸಂಸ್ಥೆಯ ಮೂಲಕ ಎಂ. ಚಂದ್ರಶೇಖರ್ ಮತ್ತು ಎಂ. ನಾಗೇಂದ್ರ ಸಿಂಗ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಂಜಿತ್​ ಸಿಂಗ್ ರಜಪೂತ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ‘ಕ್ಯಾಪ್ಟನ್ ಮಿಲ್ಲರ್’ ಹಾಡು ಬಿಡುಗಡೆ: ಈರಪ್ಪನ ನೆನೆಯುತ ಧನುಶ್ ಜೊತೆ ಶಿವಣ್ಣನ ಕುಣಿತ

ಈ ಹಿಂದೆ ‘ಗಂಟು ಮೂಟೆ’, ‘ಟಾಮ್ ಆ್ಯಂಡ್​ ಜರ್ರಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ನಿಶ್ಚಿತ್ ಕರೋಡಿ ಅವರಿಗೆ ‘ಸಪ್ಲೆಯರ್​ ಶಂಕರ್​’ ಒಂದು ಡಿಫರೆಂಟ್​ ಸಿನಿಮಾ ಆಗಲಿದೆ. ‘ಆನಂದ್ ಆಡಿಯೋ’ ಮೂಲಕ ಈ ಸಿನಿಮಾದ ಹೊಸ ಟೀಸರ್ ಮತ್ತು ಪೋಸ್ಟರ್ ರಿಲೀಸ್​ ಮಾಡಿ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಸತೀಶ್ ಕುಮಾರ್ ಅವರ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಅವರ ಸಂಕಲನ ಮತ್ತು ಬಾಲಾಜಿ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ‘ರಂಗಸಮುದ್ರ’ ಟ್ರೈಲರ್ ಬಿಡುಗಡೆ, ಅಪ್ಪು ನಟಿಸಬೇಕಿದ್ದ ಸಿನಿಮಾ ಇದು

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಒಬ್ಬ ಬಾರ್ ಸಪ್ಲೆಯರ್ ಹುಡುಗನ ಸುತ್ತ ನಡೆಯುವ ಕಥೆಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ ಇದು.

Supplier Shankara -Teaser | Nischith Korodi | Deepika Aradhya | Ranjith Singh Rajput | RB Bharath

ನಿಶ್ಚಿತ್ ಕರೋಡಿ ಅವರು ಸಪ್ಲೆಯರ್ ಶಂಕರನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ದೀಪಿಕಾ ಆರಾಧ್ಯ ಜೋಡಿ ಆಗಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಪಡೀಲ್ ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us