‘ಯುಐ’ ಚಿತ್ರಕ್ಕೆ ಬೇರೆ ಬೇರೆ ಥಿಯೇಟರ್​ನಲ್ಲಿ ಡಿಫರೆಂಟ್ ಕ್ಲೈಮ್ಯಾಕ್ಸ್? ಸ್ಪಷ್ಟನೆ ನೀಡಿದ ಉಪೇಂದ್ರ

ಉಪೇಂದ್ರ ಅವರ ನಟನೆಯ ‘ಯುಐ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಈ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಉಪೇಂದ್ರ ಅವರ ಸಿನಿಮಾದಲ್ಲಿ ಏನೆಲ್ಲ ಇರಬಹುದು ಎಂದು ಊಹಿಸಿಕೊಂಡು ತಲೆಕೆರೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಿತ್ರದ ಬಗ್ಗೆ ವದಂತಿ ಹಬ್ಬಿಸಿದ್ದರು.

‘ಯುಐ’ ಚಿತ್ರಕ್ಕೆ ಬೇರೆ ಬೇರೆ ಥಿಯೇಟರ್​ನಲ್ಲಿ ಡಿಫರೆಂಟ್ ಕ್ಲೈಮ್ಯಾಕ್ಸ್? ಸ್ಪಷ್ಟನೆ ನೀಡಿದ ಉಪೇಂದ್ರ
ಉಪೇಂದ್ರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 18, 2024 | 9:01 AM

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಈ ವಾರವರೇ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಭಿನ್ನವಾಗಿ ಬರಲಿದೆ ಎಂಬ ಸ್ಪಷ್ಟ ಚಿತ್ರಣ ಅಭಿಮಾನಿಗಳಿಗೆ ಸಿಕ್ಕಿದೆ. ಹೀಗಿರುವಾಗಲೇ ‘ಯುಐ’ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಸಾಕಷ್ಟು ವದಂತಿ ಹಬ್ಬಿತ್ತು. ಇದಕ್ಕೆ ಉಪೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಇದನ್ನು ಒಪ್ಪಿಕೊಂಡ್ರಾ? ಅಥವಾ ಅಲ್ಲಗಳೆದರಾ ಎಂಬ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.

ಉಪೇಂದ್ರ ಅವರ ನಟನೆಯ ‘ಯುಐ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಈ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಉಪೇಂದ್ರ ಅವರ ಸಿನಿಮಾದಲ್ಲಿ ಏನೆಲ್ಲ ಇರಬಹುದು ಎಂದು ಊಹಿಸಿಕೊಂಡು ತಲೆಕೆರೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಿತ್ರದ ಬಗ್ಗೆ ವದಂತಿ ಹಬ್ಬಿಸಿದ್ದರು.

‘ಯಐ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್ ಇರಲಿದ್ದು, ಒಂದೊಂದು ಥಿಯೇಟರ್​ನಲ್ಲಿ ಒಂದೊಂದು ಕ್ಲೈಮ್ಯಾಕ್ಸ್ ಬಿತ್ತರ ಆಗಲಿದೆ. ಪ್ರೇಕ್ಷಕರಿಗೆ ಬೇರೆ ಬೇರೆಯದೇ ಆದ ಕ್ಲೈಮ್ಯಾಕ್ಸ್ ನೋಡ ಸಿಗಲಿದೆ’ ಎನ್ನುವ ವದಂತಿ ಇತ್ತು. ಇದು ಅಸಾಧ್ಯ ಎಂಬ ಮಾತನ್ನು ಉಪೇಂದ್ರ ಹೇಳಿದ್ದಾರೆ.

‘ಎರಡು ಕ್ಲೈಮ್ಯಾಕ್ಸ್ ಎಂಬ ವಿಚಾರದಲ್ಲಿ ಯಾವುದೇ ಸತ್ಯ ಇಲ್ಲ. ಸಿನಿಮಾಗೆ ಒಂದೇ ಕ್ಲೈಮ್ಯಾಕ್ಸ್ ಇದೆ. ಕಂಟೆಂಟ್ ಉತ್ತಮವಾಗಿದೆ. ಹೀಗಾಗಿ, ನೀವು ಸಿನಿಮಾನ ಎರಡು ಬಾರಿ ನೋಡಬೇಕು ಎಂದನಿಸುತ್ತದೆ’ ಎಂದು ಉಪೇಂದ್ರ ಹೇಳಿದ್ದಾರೆ. ಉಪ್ಪಿ ಯಾವಾಗಲೂ ಭಿನ್ನ ಸಿನಿಮಾಗಳನ್ನು ಮಾಡುತ್ತಾರೆ. ಈ ಕಾರಣಕ್ಕೆ ಇದು ನಿಜ ಇದ್ದರೂ ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ.

ಓಪನಿಂಗ್ ದೃಶ್ಯ ಹೇಗಿರುತ್ತದೆ ಎಂಬ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದಾರೆ. ‘ಓಪನಿಂಗ್ ದೃಶ್ಯವೇ ಪ್ರೇಕ್ಷಕರಿಗೆ ಶಾಕಿಂಗ್ ಆಗಿರಲಿದೆ’ ಎಂದು ಉಪೇಂದ್ರ ಭವಿಷ್ಯ ನುಡಿದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಓಪನಿಂಗ್ ಯಾವ ರೀತಿಯಲ್ಲಿ ಇರಬಹುದು ಎಂಬ ಕುತೂಹಲ ಜೋರಾಗಿದೆ.

ಇದನ್ನೂ ಓದಿ: ಜೈಲಿಂದ ಹೊರಬಂದ ಅಲ್ಲು ಅರ್ಜುನ್ ಅನ್ನು ಭೇಟಿಯಾದ ನಟ ಉಪೇಂದ್ರ

‘ಯುಐ’ ಸಿನಿಮಾ ಪ್ರಚಾರಕ್ಕಾಗಿ ಉಪೇಂದ್ರ ಅವರು ನಾನಾ ಕಡೆಗಳಿಗೆ ತೆರಳುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಪರಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲಿನವರಿಗೂ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:53 am, Wed, 18 December 24

ಜಪ ಮಾಲೆಯಲ್ಲಿನ 108 ಮಣಿಗಳ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
ಜಪ ಮಾಲೆಯಲ್ಲಿನ 108 ಮಣಿಗಳ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ
Daily Horoscope: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ
ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್
ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ