Chiyan Vikram: ಸಿದ್ಧಗೊಳ್ಳುತ್ತಿದೆ ಮತ್ತೊಂದು ‘ಕೆಜಿಎಫ್’ ಸಿನಿಮಾ; ಚಿಯಾನ್ ವಿಕ್ರಮ್ ಹೀರೋ
ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್ ಅವರು ಚಿಯಾನ್ ವಿಕ್ರಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಕಥೆ ಕೆಜಿಎಫ್ ಬಗ್ಗೆ ಇರಲಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ (KGF) ಹಾಗೂ ‘ಕೆಜಿಎಫ್ 2’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಚಿತ್ರವನ್ನು ಭಾರತದಲ್ಲಿ ರಿಮೇಕ್ ಮಾಡೋಕೆ ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ಈ ಸಿನಿಮಾ ತೆಲುಗು, ತಮಿಳು ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಒಂದೊಮ್ಮೆ ರಿಮೇಕ್ ಮಾಡುವ ಸಾಹಸಕ್ಕೆ ಮುಂದಾದರೂ ಅದು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಾಣೋದು ಅನುಮಾನವೇ. ಹೀಗಿರುವಾಗಲೇ ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ‘ಕೆಜಿಎಫ್’ನ ಮತ್ತೊಮ್ಮೆ ಸೃಷ್ಟಿ ಮಾಡಲು ಹೊರಟಿದ್ದಾರೆ. ಹಾಗಂತ ಇದು ರಿಮೇಕ್ ಅಲ್ಲ, ಸ್ವಮೇಕ್. ಅಷ್ಟಕ್ಕೂ ಏನಿದು ವಿಚಾರ? ಈ ಸ್ಟೋರಿ ಓದಿ.
ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್ ಅವರು ಚಿಯಾನ್ ವಿಕ್ರಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಕಳೆದ ಅಕ್ಟೋಬರ್ನಲ್ಲೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರಕ್ಕೆ ‘ತಂಗಲಾನ್’ ಎನ್ನುವ ಶೀರ್ಷಿಕೆ ಕೂಡ ಫೈನಲ್ ಆಗಿದೆ. ವಿಶೇಷ ಎಂದರೆ ಈ ಚಿತ್ರದ ಶೂಟಿಂಗ್ ಕೋಲಾರ ಚಿನ್ನದ ಗಣಿಯಲ್ಲಿ ನಡೆಯಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ಗೆ ಅಚ್ಚರಿ ಆಗಿದೆ. ಅಂದಹಾಗೆ ಇದು ನೈಜ ಘಟನೆ ಆಧಾರಿತ ಸಿನಿಮಾ ಅನ್ನೋದು ವಿಶೇಷ.
‘ಕೆಜಿಎಫ್’ ಸಿನಿಮಾದ ಶೂಟಿಂಗ್ ನಡೆದಿದ್ದು ಕೋಲಾರ ಚಿನ್ನದ ಗಣಿಯಲ್ಲಿ. ಪ್ರಶಾಂತ್ ನೀಲ್ ಹೆಣೆದಿದ್ದ ಕಥೆ ಸಂಪೂರ್ಣವಾಗಿ ಕಾಲ್ಪನಿಕವಾಗಿತ್ತು. ಜನರಿಗೆ ಈ ಸಿನಿಮಾ ಸಾಕಷ್ಟು ಮನರಂಜನೆ ನೀಡಿತ್ತು. ವಿಶೇಷ ಎಂದರೆ ಪಾ ರಂಜಿತ್ ಅವರು ನೈಜ ಘಟನೆ ಹೇಳಲಿದ್ದಾರೆ. ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ ಕೆಜಿಎಫ್ ಗಣಿಯನ್ನು ಹೇಗೆ ಬಳಕೆ ಮಾಡಲಾಗುತ್ತಿತ್ತು, ಜನರಿಂದ ಯಾವ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು ಎಂಬುದನ್ನು ಅವರು ಹೇಳಲಿದ್ದಾರಂತೆ.
ಪಾ ರಂಜಿತ್ ಅವರಿಗೆ ಚಿತ್ರರಂಗದಲ್ಲಿ ದಶಕಗಳ ಅನುಭವ ಇದೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ, ಹಂಚಿಕೆದಾರನಾಗಿ ಗುರುತಿಸಿಕೊಂಡಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’, ‘ಕಾಲ’ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ನೈಜ ಘಟನೆ ಆಧರಿಸಿ ಸಿನಿಮಾ ಮಾಡುತ್ತಿರುವುದರಿಂದ ನಿರ್ದೇಶಕರಿಗೆ ಹೆಚ್ಚಿನ ಸಮಯಾವಕಾಶದ ಅವಶ್ಯಕತೆ ಇದೆ.
ಇದನ್ನೂ ಓದಿ: ನಾನಿ ನಟನೆಯ ‘ದಸರಾ’ ತಂಡಕ್ಕೆ ಬಂಪರ್ ಗಿಫ್ಟ್; ಸಿಕ್ತು ಬಿಎಂಡಬ್ಲ್ಯೂ ಕಾರ್, ಚಿನ್ನದ ನಾಣ್ಯ
ಪಾ ರಂಜಿತ್ ಅವರು ‘ತಂಗಲಾನ್’ ಚಿತ್ರವನ್ನು ಹೇಗೆ ಕಟ್ಟಿಕೊಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಮೇಕಿಂಗ್ ವಿಚಾರದಲ್ಲಿ ಈ ಚಿತ್ರ ‘ಕೆಜಿಎಫ್’ ರೀತಿಯಲ್ಲೇ ಇರಲಿದೆಯೇ ಎನ್ನುವ ಕುತೂಹಲ ಮೂಡಿದೆ. ಸದ್ಯ ಈ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ವಿಕ್ರಮ್ ಪಾತ್ರದ ಬಗ್ಗೆಯೂ ಸಾಕಷ್ಟು ಕುತೂಹಲ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ