ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ

ರೇಣುಕಾಸ್ವಾಮಿ ಕೊಲೆ‌ ಕೇಸ್​ನಲ್ಲಿ ಜೈಲು ಸೇರಿರೋ ದರ್ಶನ್ ಅವರಿಗೆ ಈ ಹಿಂದೆ ರಾಜಾತಿಥ್ಯ ಸಿಕ್ಕಿತ್ತು. ಅದೇ ರಾಜಾತಿಥ್ಯ ಬಗ್ಗೆ ಒಂದು ಕೇಸ್ ಕೂಡ ಆಗಿತ್ತು. ಆದರೆ ಆ ಪ್ರಕರಣದ ಚಾರ್ಜ್ ಶೀಟ್ ಮಾತ್ರ ಇನ್ನೂ ಕೋರ್ಟ್​​ಗೆ ಸಲ್ಲಿಕೆಯಾಗಿಲ್ಲ. ಕೇವಲ ದರ್ಶನ್ ಕೇಸ್ ಅಲ್ಲ ಇನ್ನೂ ಹತ್ತಾರು ಕೇಸ್​​ಗಳ‌ ಕಥೆಯೂ ಹೀಗೆ ಆಗಿದೆ..

ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ
Darshan

Updated on: Nov 14, 2025 | 8:24 PM

ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ (Darshan) ಜೈಲಿನಲ್ಲಿದ್ದಾಗ ಸಿಗರೇಟ್ ಹಿಡಿದು ಟೀ ಕುಡಿಯುತ್ತಾ ಕೂತಿದ್ದ ಫೋಟೋ ವೈರಲ್ ಆಗಿತ್ತು. ಈ ಒಂದು‌ ಕೇಸ್ ಸಂಬಂಧಿಸಿದಂತೆ ಒಟ್ಟು ಮೂರು FIR ದಾಖಲಾಗಿತ್ತು. ಆದರೆ ಆ ವಿಚಾರಗಳನ್ನು ಇದೀಗ ಪೊಲೀಸರು ಮರೆತಿದ್ದಾರಾ ಎಂಬಾ ಪ್ರಶ್ನೆ ಮೂಡುತ್ತಿದೆ. ಯಾಕಂದ್ರೆ ಕೇಸ್ ದಾಖಲಾಗಿ ವರ್ಷ ಕಳೆದರೂ ಇನ್ನು ಯಾವುದಕ್ಕು ಸಹ ಚಾರ್ಜ್ ಶೀಟ್ ಮಾತ್ರ ಸಲ್ಲಿಕೆಯಾಗಿಲ್ಲ.

ಹೌದು, 2024ರ ಸೆಪ್ಟೆಂಬರ್​ನಲ್ಲಿ ಪರಪ್ಪನ ಜೈಲಿನಲ್ಲಿ‌ ದರ್ಶನ್ ರಾಜಾತಿಥ್ಯ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಇದರಿಂದ ದರ್ಶನ್​ಗೆ ಬೇರೆ ಜೈಲಿಗೆ ಸಹ ಶಿಫ್ಟ್ ಮಾಡಲಾಗಿ ಮೂರು ಕೇಸ್ ದಾಖಲು ಮಾಡಲಾಗಿ ಒಂದೊಂದು ಕೇಸ್​ಗಳನ್ನ ತನಿಖೆ ಹೊಣೆಯನ್ನ ಮೂವರು ಎಸಿಪಿಗಳಿಗೆ ನೀಡಲಾಗಿತ್ತು. ಈ ತನಿಖೆ ಆರಂಭಿಸಿದ 6 ತಿಂಗಳ ಬಳಿಕ ಜೈಲಾಧಿಕಾರಿಗಳ ವಿಚಾರಣೆ ಕೂಡ ನಡೆಸಲಾಯ್ತು. ಆದರೆ ಯಾವುದೇ ಪ್ರಕರಣದ ಅಂತಿಮ ವರದಿ ಕೂಡ ಕೋರ್ಟ್​ಗೆ ಸಲ್ಲಿಕೆಯಾಗದೆ ಇನ್ನೂ ಪರಿಶೀಲನೆ ಹಂತದಲ್ಲಿದೆ‌.

ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲಿನಲ್ಲಿ ಎಲ್ಲವೂ ಹಾಗೆ ಇದೆ. ದರ್ಶನ್ ಕೇಸ್ ಆದ ನಂತರ ಇದುವರೆಗೆ ಜೈಲಿನಲ್ಲಿ ಮೊಬೈಲ್ ಬಳಕೆ, ಡ್ರಗ್ಸ್, ಮಾರಾಕಸ್ತ್ರ ಪತ್ತೆ ಸೇರಿದಂತೆ 30ಕ್ಕೂ ಹೆಚ್ಚು ಕೇಸ್ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದ್ದವು. ಆದರೆ ಇದರಲ್ಲಿ ಇನ್ನೂ 27 ಕೇಸ್​ಗಳ ಅಂತಿಮ ವರದಿ ಕೋರ್ಟ್​ಗೆ ಸಲ್ಲಿಸುವುದು ಬಾಕಿ ಇದೆ. ಅಂತಿಮ ಪರಿಶೀಲನೆ, CDR ಡಿಟೇಲ್ಸ್ ಬಾಕಿ ಅಂತ ಅನೇಕ ನೆಪಗಳಿಂದ ಕೇಸ್​ಗಳ ಸ್ಥಿತಿ ಹೀಗಾಗಿದೆ‌. ಇಷ್ಟರ ಮಧ್ಯೆ ವಾರದಿಂದ ಮತ್ತೆ ನಾಲ್ಕು ಕೇಸ್ ದಾಖಲಾಗಿದೆ. ಆದರೆ ಹಳೇ ಕೇಸ್ ಸ್ಥಿತಿಯೇ ಹೀಗಾಗಿರುವಾಗ ಹೊಸ ಕೇಸ್ ಸ್ಥಿತಿ ಏನಾಗುತ್ತೋ ಕಾದು ನೋಡಬೇಕು.

ಇದನ್ನೂ ಓದಿ: ದರ್ಶನ್ ಆಪ್ತ ಧನ್ವೀರ್ ಮೇಲೆ ಅನುಮಾನ; ಕರೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು

ರೇಣುಕಾಸ್ವಾಮಿ ಕೇಸ್ ಅಪ್​ಡೇಟ್:

ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಪ್ರಮುಖ ಘಟ್ಟಕ್ಕೆ ಬಂದಿದೆ. ಈಗಾಗಲೇ ದೋಷಾರೋಪಣೆ ನಿಗದಿ ಆಗಿದೆ. ಆದರೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿಲ್ಲ. ಸಾಕ್ಷಿಗಳ ವಿಚಾರಣೆ ಆರಂಭಕ್ಕೆ ದಿನಾಂಕ ನಿಗದಿ ಆಗಬೇಕಿದೆ. ಬಳಿಕ ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುತ್ತದೆ. ಪೂರ್ತಿ ವಿಚಾರಣೆ ಬಳಿಕ ಅಂತಿಮ ತೀರ್ಪು ಪ್ರಕಟ ಆಗಲಿದೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us