‘ಪೆದ್ದಿ’ ಸಿನಿಮಾನಲ್ಲಿ ಶಿವಣ್ಣ ಖಡಕ್ ಲುಕ್, ಪಾತ್ರದ ಹೆಸರೇನು?
Peddi Telugu movie: ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಶಿವರಾಜ್ ಕುಮಾರ್ ನಟನೆಯ ತೆಲುಗು ಸಿನಿಮಾ ‘ಪೆದ್ದಿ’ ಚಿತ್ರತಂಡ ಶಿವಣ್ಣನ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾದ ನಾಯಕ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಅವರುಗಳು ಶಿವಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಶಿವರಾಜ್ ಕುಮಾರ್ (Shiva Rajkumar) ಹುಟ್ಟುಹಬ್ಬ ಇಂದು (ಜುಲೈ 12). ಅಭಿಮಾನಿಗಳು, ಅವರ ಕುಟುಂಬದವರು ಇಂದು ಶಿವಣ್ಣನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹಲವಾರು ಮಂದಿ ನಟ-ನಟಿಯರು ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಶಿವರಾಜ್ ಕುಮಾರ್ ನಟಿಸುತ್ತಿರುವ ಸಿನಿಮಾಗಳ ತಂಡದವರು ಸಹ ಶಿವಣ್ಣನ ಹೊಸ ಲುಕ್, ಪೋಸ್ಟರ್ ಇನ್ನಿತರೆಗಳನ್ನು ಬಿಡುಗಡೆ ಮಾಡಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಕನ್ನಡ, ತೆಲುಗು ಹಾಗೂ ತಮಿಳಿನ ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದು, ರಾಮ್ ಚರಣ್ ತೇಜ, ಜಾನ್ಹವಿ ಕಪೂರ್ ನಟಿಸುತ್ತಿರುವ ‘ಪೆದ್ದಿ’ ಹೆಸರಿನ ಭಾರಿ ಬಜೆಟ್ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ‘ಪೆದ್ದಿ’ ಚಿತ್ರತಂಡ ಶಿವಣ್ಣನ ಹುಟ್ಟುಹಬ್ಬಕ್ಕೆ ಅವರ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ನಟ ರಾಮ್ ಚರಣ್ ಸೇರಿದಂತೆ ‘ಪೆದ್ದಿ’ ಚಿತ್ರತಂಡ ಇತರರು ಸಹ ಶಿವಣ್ಣನ ಹುಟ್ಟುಹಬ್ಬಕ್ಕೆ ವಿಷ್ ಮಾಡಿದ್ದಾರೆ.
‘ಪೆದ್ದಿ’ ಸಿನಿಮಾದ ಶಿವಣ್ಣನ ಲುಕ್ ಬಿಡುಗಡೆ ಆಗಿದ್ದು, ಶಿವಣ್ಣ ರಾಯಲಸೀಮ ಫ್ರ್ಯಾಕ್ಷನಿಸ್ಟ್ ರೀತಿ ಕಾಣುತ್ತಿದ್ದಾರೆ. ಕಿವಿಗೆ ಓಲೆಗಳು, ಮೀಸೆ, ಸಣ್ಣ ಗಡ್ಡ ಬಿಟ್ಟು ಸಖತ್ ಖಡಕ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಿನಿಮಾನಲ್ಲಿ ಶಿವಣ್ಣನ ಪಾತ್ರದ ಹೆಸರು ಸಹ ಅಷ್ಟೆ ಖಡಕ್ ಆಗಿದೆ. ಪಾತ್ರದ ಹೆಸರು ‘ಗೌರ್ನಾಯ್ಡು’. ಶಿವಣ್ಣ ಲುಕ್ ಪೋಸ್ಟರ್ ಹಂಚಿಕೊಂಡಿರುವ ನಟ ರಾಮ್ ಚರಣ್ ತೇಜ, ‘ಶಿವಣ್ಣ ಅವರೇ ನಿಮಗೆ ಹುಟ್ಟುಹಬ್ಬದ ಶುಭಾಶಯ. ‘ಗೌರ್ ನಾಯ್ಡು’ ಪಾತ್ರವನ್ನು ಜನ ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ, ಸಂಭ್ರಮಿಸುತ್ತಾರೆ. ನಿಮ್ಮ ಜೊತೆಗೆ ತೆರೆ ಹಂಚಿಕೊಳ್ಳಲು ಅದೃಷ್ಟ ಮಾಡಿದ್ದೆ’ ಎಂದಿದ್ದಾರೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಘೋಷಣೆಯಾದ ಸಿನಿಮಾಗಳ್ಯಾವುವು?
‘ಪೆದ್ದಿ’ ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು ಸನಾ ಟ್ವೀಟ್ ಮಾಡಿ, ‘ನನ್ನ ಪ್ರೀತಿಯ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಂಥಹಾ ಲೆಜೆಂಡರಿ, ವಿನಯವಂತ, ಧನಾತ್ಮಕ ವ್ಯಕ್ತಿಯ ಜೊತೆಗೆ ಕೆಲಸ ಮಾಡುತ್ತಿರುವುದು ನಿಜಕ್ಕೂ ನನ್ನ ಪಾಲಿಗೆ ಅದೃಷ್ಟ. ನೀವು ಸೆಟ್ನಲ್ಲಿ ಇದ್ದರೆ ಅದೇ ನಮಗೆ ಸ್ಪೂರ್ತಿ ನೀಡುತ್ತಿರುತ್ತದೆ. ನಿಮಗೆ ಆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ’ ಎಂದಿದ್ದಾರೆ.
‘ಪೆದ್ದಿ’ ಸಿನಿಮಾವು ಹಳ್ಳಿಗಾಡಿನ ಕತೆಯನ್ನು ಒಳಗೊಂಡಿದ್ದು, ಹಳ್ಳಿಯಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಯ ಸುತ್ತ ಕತೆ ಸುತ್ತುತ್ತದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ. ಸಿನಿಮಾನಲ್ಲಿ ರಾಮ್ ಚರಣ್, ಜಾನ್ಹವಿ ಕಪೂರ್, ಶಿವರಾಜ್ ಕುಮಾರ್, ತ್ರಿಷಾ, ವಿಜಯ್ ಸೇತುಪತಿ, ದಿವ್ಯೇಂದು, ಜಗಪತಿ ಬಾಬು ಇನ್ನೂ ಕೆಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




