‘ಪ್ರಜ್ವಲ್​ ದೇವರಾಜ್​ ಇನ್ನಿಲ್ಲ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಕುಟುಂಬಸ್ಥರು ಗರಂ

|

Updated on: May 30, 2024 | 2:56 PM

ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಜ್ವಲ್​ ದೇವರಾಜ್​ ಅವರ ಬಗ್ಗೆ ಫೇಕ್​ ನ್ಯೂಸ್​ ಹರಡಿದೆ. ಪ್ರಜ್ವಲ್​ ನಿಧನರಾಗಿದ್ದಾರೆ ಎಂದು ಕಿಡಿಗೇಡಿಗಳು ಫೋಟೋ ವೈರಲ್​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಜ್ವಲ್​ ದೇವರಾಜ್​ ಅವರ ಆಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವದಂತಿ ಹಬ್ಬಿಸಿದವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲು ಕುಟುಂಬದವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

‘ಪ್ರಜ್ವಲ್​ ದೇವರಾಜ್​ ಇನ್ನಿಲ್ಲ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಕುಟುಂಬಸ್ಥರು ಗರಂ
ಪ್ರಜ್ವಲ್​ ದೇವರಾಜ್​, ಫೇಕ್​ ನ್ಯೂಸ್​ ಫೋಟೋ
Follow us on

ನಟ ಪ್ರಜ್ವಲ್​ ದೇವರಾಜ್​ (Prajwal Devaraj) ಅವರು ಆರೋಗ್ಯವಾಗಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಸೋಶಿಯಲ್​ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಟನ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಫೇಕ್​ ನ್ಯೂಸ್ (Prajwal Devaraj Death Hoax)​ ಹರಡಲಾಗಿದೆ. ‘ಪ್ರಜ್ವಲ್​ ದೇವರಾಜ್​ ಇನ್ನಿಲ್ಲ. ಓಂ ಶಾಂತಿ’ ಎಂಬ ಕ್ಯಾಪ್ಷನ್​ನೊಂದಿಗೆ ಪ್ರಜ್ವಲ್​ ದೇವರಾಜ್​ ಅವರ ಫೋಟೋವನ್ನು ವೈರಲ್​ ಮಾಡಲಾಗಿದೆ. ಇದು ಅವರ ಕುಟುಂಬದವರ ಗಮನಕ್ಕೂ ಬಂದಿದೆ. ಸುಳ್ಳು ಸುದ್ದಿಯ ಬಗ್ಗೆ ಪ್ರಜ್ವಲ್​ ದೇವರಾಜ್​ ಕುಟುಂಬದವರು (Prajwal Devaraj Family) ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರಜ್ವಲ್ ದೇವರಾಜ್ ಕ್ಷೇಮವಾಗಿ ಇದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಪ್ರಜ್ವಲ್ ಅವರ ಪೋಟೋಗಳನ್ನು ದುರ್ಬಳಕೆ ಮಾಡಲಾಗಿದೆ. ಆರೋಗ್ಯವಂತ ನಟನ ಬಗ್ಗೆ ಈ ರೀತಿಯ ವದಂತಿಗಳು ಸಲ್ಲದು. ಇದರಿಂದ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಆತಂಕ ಉಂಟಾಗುತ್ತದೆ’ ಎಂದು ಪ್ರಜ್ವಲ್​ ಅವರ ಆಪ್ತರು ಹೇಳಿದ್ದಾರೆ.

ಇದನ್ನೂ ಓದಿ: ಯಕ್ಷಗಾನದ ವೇಷ ಧರಿಸಿದ ಪ್ರಜ್ವಲ್ ದೇವರಾಜ್​; ‘ಕರಾವಳಿ’ ಹೊಸ ಪೋಸ್ಟರ್​

ಕಿಡಿಗೇಡಿಗಳ ಈ ಕೃತ್ಯದ ವಿರುದ್ಧ ಕುಟುಂಬದವರು ಬೇಸರ ವ್ಯಕ್ತಪಡಿಸಿರುವುದು ಮಾತ್ರವಲ್ಲದೇ ಕಾನೂನಿನ ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು ನೀಡಲು ಕುಟುಂಬದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ‘ಪ್ರಜ್ವಲ್ ದೇವರಾಜ್ ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಹಲವು ಪ್ರಾಜೆಕ್ಟ್​ಗಳಲ್ಲಿ ಪ್ರಜ್ವಲ್​ ದೇವರಾಜ್​ ಅವರು ಬ್ಯುಸಿ ಆಗಿದ್ದಾರೆ. ‘ಕರಾವಳಿ’, ‘ಮಾಫಿಯಾ’, ‘ಗಣ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ. ‘ಕರಾವಳಿ’ ಸಿನಿಮಾದಲ್ಲಿ ಅವರ ಗೆಟಪ್​ ತುಂಬ ಡಿಫರೆಂಟ್​ ಆಗಿರಲಿದೆ. ಈ ಸಿನಿಮಾದ ಪೋಸ್ಟರ್​ಗಳು ಈಗಾಗಲೇ ಗಮನ ಸೆಳೆದಿವೆ. ಗುರುದತ್ ಗಾಣಿಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:39 pm, Thu, 30 May 24