ಈ ವಾರ ‘ಲಾಫಿಂಗ್ ಬುದ್ಧ’ ರಿಲೀಸ್; ಯಾವೆಲ್ಲ ಸಿನಿಮಾಗಳ ಮಧ್ಯೆ ಸ್ಪರ್ಧೆ?
‘ಲಾಫಿಂಗ್ ಬುದ್ಧ’ ಚಿತ್ರಕ್ಕಾಗಿ ಪ್ರಮೋದ್ ಶೆಟ್ಟಿ ಅವರು 30 ಕೆಜಿ ಹೆಚ್ಚಿಸಿಕೊಂಡಿದ್ದರು. ಆ ಬಳಿಕ ಅವರು ತೂಕ ಇಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಅವರ ಮಗಳು ತೇಜು ಬೆಳವಾಡಿ ನಟಿಸಿದ್ದಾರೆ. ಈ ಚಿತ್ರವನ್ನು ಖ್ಯಾತ ನಟ, ನಿರ್ದೇಶಕ ರಿಷಬ್ ನಿರ್ಮಾಣ ಮಾಡಿದ್ದಾರೆ ಅನ್ನೋದು ವಿಶೇಷ.
ಈ ಶುಕ್ರವಾರ ಹಲವು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಈ ಮೊದಲು ರಿಲೀಸ್ ಆದ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’, ‘ಸ್ತ್ರೀ 2’ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಇವುಗಳ ಜೊತೆ ‘ಲಾಫಿಂಗ್ ಬುದ್ಧ’ ಹಾಗೂ ‘ಪೆಪೆ’ ಸಿನಿಮಾ ಸ್ಪರ್ಧೆ ಮಾಡಲಿವೆ. ಈ ವಾರ (ಆಗಸ್ಟ್ 30) ಸಿನಿಮಾಗಳು ರಿಲೀಸ್ ಗಲಿವೆ. ‘ಲಾಫಿಂಗ್ ಬುದ್ಧ’ ಪ್ರಮೋದ್ ಶೆಟ್ಟಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ದಿಗಂತ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಪೆಪೆ’ ಚಿತ್ರಕ್ಕೆ ವಿನಯ್ ರಾಜ್ಕುಮಾರ್ ಹೀರೋ. ಈ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ.
ಲಾಫಿಂಗ್ ಬುದ್ಧ
ಪಾತ್ರವರ್ಗ: ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ಸುಂದರ್ ರಾಜ್, ದಿಗಂತ್ ಮಂಚಾಲೆ
ನಿರ್ದೇಶನ: ಭರತ್ ರಾಜ್
ನಿರ್ಮಾಣ: ರಿಷಬ್ ಶೆಟ್ಟಿ
ಸಂಗೀತ ಸಂಯೋಜನೆ: ವಿಷ್ಣು ವಿಜಯ್
ಪ್ರಮೋದ್ ಶೆಟ್ಟಿ ಅವರು ಅತಿಥಿ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ‘ಲಾಫಿಂಗ್ ಬುದ್ಧ’ ಸಿನಿಮಾ ಮೂಲಕ ಹೀರೋ ಆಗಿ ಮಿಂಚಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರ ಶುಕ್ರವಾರ ಬಿಡುಗಡೆ ಆಗುತ್ತಿದೆ.
ವಿಶೇಷತೆ
ಈ ಚಿತ್ರಕ್ಕಾಗಿ ಪ್ರಮೋದ್ ಶೆಟ್ಟಿ ಅವರು 30 ಕೆಜಿ ಹೆಚ್ಚಿಸಿಕೊಂಡಿದ್ದರು. ಆ ಬಳಿಕ ಅವರು ತೂಕ ಇಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಅವರ ಮಗಳು ತೇಜು ಬೆಳವಾಡಿ ನಟಿಸಿದ್ದಾರೆ. ಈ ಚಿತ್ರವನ್ನು ಖ್ಯಾತ ನಟ, ನಿರ್ದೇಶಕ ರಿಷಬ್ ನಿರ್ಮಾಣ ಮಾಡಿದ್ದಾರೆ ಅನ್ನೋದು ವಿಶೇಷ.
ಪೆಪೆ
ಪಾತ್ರವರ್ಗ: ವಿನಯ್ ರಾಜ್ಕುಮಾರ್, ಮಯೂರ್ ಪಟೇಲ್, ಕಾಜಲ್ ಕುಂದರ್, ಮೇದಿನಿ ಕೆಳಮನೆ, ಯಶ್ ಪಟೇಲ್.
ನಿರ್ದೇಶನ: ಶ್ರೀಲೇಶ್ ನಾಯರ್
ನಿರ್ಮಾಣ: ಉದಯ್ ಶಂಕರ್, ಶ್ರೀರಾಮ್ ಕೋಲಾರ್
ವಿನಯ್ ರಾಜ್ಕುಮಾರ್ ಅವರು ‘ಪೆಪೆ’ ಚಿತ್ರದಲ್ಲಿ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾಗೆ ‘A’ ಪ್ರಮಾಣಪತ್ರ ನೀಡಲಾಗಿದೆ. ಈ ಚಿತ್ರ ಆಗಸ್ಟ್ 30ರಂದು ತೆರೆ ಕಾಣುತ್ತಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ಹೀಗೆ ಇರೋದು ಏಕೆ? ವಿವರಿಸಿದ ಪ್ರಮೋದ್ ಶೆಟ್ಟಿ
ಇವುಗಳ ಜೊತೆಗೆ ತೆಲುಗಿನ ನಾನಿ ನಟನೆಯ ‘ಸೂರ್ಯನ ಶನಿವಾರ’ (ಸರಿಪೋಧ ಶನಿವಾರಂ) ಸಿನಿಮಾ ರಿಲೀಸ್ ಆಗಲಿದೆ. ತೆಕುಗಿನ ‘ಅಹೋ ವಿಕ್ರಮಾರ್ಕ’ ಕೂಡ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ದರ್ಶನ್ ನಟನೆಯ ‘ಕರಿಯಾ’ ಸಿನಿಮಾ ಕೂಡ ರೀ-ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:32 pm, Thu, 29 August 24