Pranitha Marriage: ಉದ್ಯಮಿ ಜೊತೆ ಪ್ರಣಿತಾ ಗುಟ್ಟಾಗಿ ಮದುವೆ ಆಗಿದ್ದೇಕೆ? ಅಸಲಿ ಕಾರಣ ತಿಳಿಸಿದ ನಟಿ

Pranitha Subhash Marriage Photo: ನಟಿ ಪ್ರಣಿತಾ ಸುಭಾಷ್​ ಅವರ ಮದುವೆ ಫೋಟೋಗಳು ವೈರಲ್​ ಆಗಿವೆ. ಹೀಗೆ ಅವರು ಏಕಾಏಕಿ ಮದುವೆ ಆಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಉಂಟು ಮಾಡಿರುವುದು ನಿಜ. ಸಿಂಪಲ್​ ಆಗಿ ಮದುವೆ ಆಗಿದ್ದಕ್ಕೆ ಪ್ರಣಿತಾ ಕಾರಣ ನೀಡಿದ್ದಾರೆ.

Pranitha Marriage: ಉದ್ಯಮಿ ಜೊತೆ ಪ್ರಣಿತಾ ಗುಟ್ಟಾಗಿ ಮದುವೆ ಆಗಿದ್ದೇಕೆ? ಅಸಲಿ ಕಾರಣ ತಿಳಿಸಿದ ನಟಿ
ಉದ್ಯಮಿ ನಿತಿನ್​ ರಾಜು ಜೊತೆ ಪ್ರಣಿತಾ ಸುಭಾಷ್​ ಮದುವೆ
Edited By:

Updated on: May 31, 2021 | 4:53 PM

ಸೆಲೆಬ್ರಿಟಿಗಳ ಮದುವೆ ಎಂದರೆ ಕೊಂಚ ಅದ್ದೂರಿಯಾಗಿ ಇರುತ್ತದೆ. ಅತಿಥಿಗಳ ಸಂಖ್ಯೆಯೂ ದೊಡ್ಡದಿರುತ್ತದೆ. ಭರ್ಜರಿ ಪ್ರಚಾರ ಪಡೆದುಕೊಳ್ಳುವುದು ಕೂಡ ವಾಡಿಕೆ. ಆದರೆ ನಟಿ ಪ್ರಣಿತಾ ಸುಭಾಷ್​​ ಮದುವೆ ವಿಚಾರದಲ್ಲಿ ಹಾಗಾಗಿಲ್ಲ. ಭಾನುವಾರ (ಮೇ 30) ಬೆಂಗಳೂರಿನ ಹೊರ ವಯಲದಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಉದ್ಯಮಿ ನಿತಿನ್​ ರಾಜು ಎಂಬುವವರ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಪ್ರಣಿತಾ ಯಾರಿಗೂ ಹೇಳಿದೆ ಈ ರೀತಿ ಮದುವೆ ಆಗಿದ್ದು ಯಾಕೆ? ಈ ಬಗ್ಗೆ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಅದ್ದೂರಿಯಾಗಿ ಮದುವೆ ಆಗಬೇಕು ಎಂಬುದೇ ನಮ್ಮ ಆಸೆ ಕೂಡ ಆಗಿತ್ತು. ಆದರೆ ಕೊರೊನಾ ವೈರಸ್​ನಿಂದ ಅದು ಸಾಧ್ಯವಾಗಿಲ್ಲ. ನಾವು ಈ ರೀತಿ ಸಿಂಪಲ್​ ಆಗಿ ಮದುವೆ ಆಗಿದ್ದಕ್ಕೆ ಕೊವಿಡ್​ ಪರಿಸ್ಥಿತಿ ಮಾತ್ರ ಕಾರಣ. ಬೇರೆ ಏನೂ ಇಲ್ಲ. ಬೆಂಗಳೂರಿನ ಹೊರವಲಯದಲ್ಲಿ ಈ ವೀಕೆಂಡ್​ ಮದುವೆ ನಡೆಯಿತು. ನಮ್ಮದು ಲವ್​ ಕಮ್​ ಅರೇಂಜ್​ ಮ್ಯಾರೇಜ್​ ಎನ್ನಬಹುದು’ ಎಂದು ಪ್ರಣಿತಾ ಸುಭಾಸ್​ ಟಿವಿ9 ಜೊತೆ ಮಾತನಾಡಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ರೆಸಾರ್ಟ್​ವೊಂದರಲ್ಲಿ ಅವರ ಮದುವೆ ನಡೆದಿದೆ.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸಿರುವ ಪ್ರಣಿತಾ ಹೀಗೆ ಏಕಾಏಕಿ ಮದುವೆ ಆಗಿದ್ದರಿಂದ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಅವರು ಯಾವುದೇ ಮಾಹಿತಿ ನೀಡುವ ಮೊದಲೇ ಅವರ ಮದುವೆ ಫೋಟೋಗಳು ವೈರಲ್​ ಆಗತೊಡಗಿದವು. ಈ ಗಡಿಬಿಡಿ ಮದುವೆಯ ಹಿಂದಿನ ಕಾರಣ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವ ಆಗಿತ್ತು. ಆದರೆ ಈಗ ಸ್ವತಃ ಪ್ರಣಿತಾ ಅವರೇ ಪ್ರತಿಕ್ರಿಯೆ ನೀಡಿರುವುದರಿಂದ ಎಲ್ಲ ಅನುಮಾನಗಳಿಗೆ ತೆರೆ ಎಳೆದಂತಾಗಿದೆ.

2010ರಲ್ಲಿ ದರ್ಶನ್​ ಜೊತೆ ‘ಪೊರ್ಕಿ’ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪ್ರಣಿತಾ ಕಾಲಿಟ್ಟರು. ಚೊಚ್ಚಲ ಚಿತ್ರದಲ್ಲಿಯೇ ದರ್ಶನ್​ಗೆ ನಾಯಕಿಯಾಗುವ ಅವಕಾಶ ಸಿಕ್ಕಿದ್ದರಿಂದ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತ್ತು. ನಂತರ ತಮಿಳು ಮತ್ತು ತೆಲುಗಿನಲ್ಲಿಯೂ ಅವರು ಗುರುತಿಸಿಕೊಂಡರು. ಭೀಮ ತೀರದಲ್ಲಿ, ಬ್ರಹ್ಮ, ಮಾಸ್​ ಲೀಡರ್​ ಮುಂತಾದ ಸಿನಿಮಾಗಳಲ್ಲಿ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡರು. ನಟನೆ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕೆಲಸಗಳಲ್ಲೂ ಪ್ರಣಿತಾ ತೊಡಗಿಕೊಂಡಿದ್ದಾರೆ. ಆ ಮೂಲಕ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ವಿಷ್ಣುವರ್ಧನ್​ ಓದಿದ ಕನ್ನಡ ಮಾಧ್ಯಮ ಶಾಲೆ ಉಳಿಸಲು ಪಣತೊಟ್ಟ ನಟಿ ಪ್ರಣಿತಾ ಸುಭಾಷ್​

ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮೃತಪಟ್ಟ ವಧು, ಅದೇ ಮುಹೂರ್ತದಲ್ಲಿ ಅವಳ ತಂಗಿಗೆ ತಾಳಿ ಕಟ್ಟಿದ ವರ!

Published On - 3:36 pm, Mon, 31 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us