
ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ದೇಶಾದ್ಯಂತ ಅವರ ಖ್ಯಾತಿ ಹಬ್ಬಿದೆ. ಪರಭಾಷೆಯ ಸ್ಟಾರ್ ಕಲಾವಿದರ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಪರಿ ಹವಾ ಮಾಡಿರುವ ಪ್ರಶಾಂತ್ ನೀಲ್ ಅವರಿಗೆ ಇಂದು (ಜೂನ್ 4) ಜನ್ಮದಿನದ ಸಂಭ್ರಮ. ಅವರ ಬರ್ತ್ಡೇ (Prashanth Neel Birthday) ಪಾರ್ಟಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ವಿಜಯ್ ಕಿರಗಂದೂರು, ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಟ ಯಶ್ ಸೇರಿದಂತೆ ಅನೇಕರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ. ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬಕ್ಕಾಗಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ (Prabhas) ಅವರು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದಾರೆ ಎಂಬುದು ವಿಶೇಷ. ಸದ್ಯ ಬರ್ತ್ಡೇ ಸೆಲೆಬ್ರೇಷನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಎಲ್ಲರೂ ಪ್ರಶಾಂತ್ ನೀಲ್ ಅವರಿಗೆ ಶುಭ ಕೋರುತ್ತಿದ್ದಾರೆ.
‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಹಿಟ್ ಆದಾಗಲೇ ಪ್ರಶಾಂತ್ ನೀಲ್ ಮೇಲೆ ಪರಭಾಷೆ ಮಂದಿ ಕಣ್ಣಿಟ್ಟರು. ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡುವ ಅವಕಾಶ ಅವರಿಗೆ ಸಿಕ್ಕಿತು. ಈ ಚಿತ್ರದಿಂದಾಗಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಡುವೆ ಸಖತ್ ಆತ್ಮೀಯತೆ ಬೆಳೆದಿದೆ. ತಮ್ಮ ಸಿನಿಮಾದ ನಿರ್ದೇಶಕನ ಬರ್ತ್ಡೇ ಮಾಡಲು ಅವರು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದಾರೆ. ಈ ವಿಷಯವನ್ನು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗೆ 50 ಡೇಸ್ ಸಂಭ್ರಮ:
ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬದ ಸಲುವಾಗಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತಂಡದವರು ಒಂದೆಡೆ ಸೇರಿದ್ದಾರೆ. ಈ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ನಿರ್ದೇಶಕರ ಬರ್ತ್ಡೇ ಸೆಲೆಬ್ರೇಷನ್ ಜೊತೆಯಲ್ಲಿ ‘ಕೆಜಿಎಫ್ 2’ ಚಿತ್ರದ 50 ಡೇಸ್ ಸಂಭ್ರಮವನ್ನೂ ಆಚರಿಸಲಾಗಿದೆ. ವಿಶೇಷವಾದ ಕೇಕ್ ಕತ್ತರಿಸುವ ಮೂಲಕ ಖುಷಿ ಹಂಚಲಾಗಿದೆ. ಈ ಕಾರಣದಿಂದ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬ ಸ್ಪೆಷಲ್ ಎನಿಸಿದೆ. ಸದ್ಯ ಅವರ ಕೈಯಲ್ಲಿ ಮಹತ್ವದ ಪ್ರಾಜೆಕ್ಟ್ಗಳಿಗೆ. ಜ್ಯೂ. ಎನ್ಟಿಆರ್ ನಟನೆಯ ಹೊಸ ಚಿತ್ರಕ್ಕೆ ಅವರು ನಿರ್ದೇಶನ ಮಾಡಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:27 am, Sat, 4 June 22