‘ಬಾನದಾರಿಯಲ್ಲಿ’ (Baanadariyalli) ಪಯಣಿಸಲು ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸಿದ್ಧರಾಗಿದ್ದಾರೆ. ಅರೇ ಇದೇನು ಎಂದು ಯೋಚಿಸಬೇಡಿ. ಇದು ಗೋಲ್ಡನ್ ಸ್ಟಾರ್ ಹೊಸ ಸಿನಿಮಾ. ವಿಶೇಷವೆಂದರೆ ಈ ಚಿತ್ರದ ಮೂಲಕ ಕನ್ನಡದ ಸೂಪರ್ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ. ಹೌದು, ನಿರ್ದೇಶಕ ಪ್ರೀತಂ ಗುಬ್ಬಿ (Preetham Gubbi) ಹಾಗೂ ಗಣೇಶ್ ಈ ಹಿಂದೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಗಣೇಶ್ ವೃತ್ತಿಜೀವನದ ಅತ್ಯಂತ ಯಶಸ್ವಿ ಚಿತ್ರ ‘ಮುಂಗಾರು ಮಳೆ’ಗೆ ಕತೆ ಬರೆದಿದ್ದವರು ಪ್ರೀತಂ ಗುಬ್ಬಿ. ನಂತರ ನಿರ್ದೇಶಕ- ನಟ ಕಾಂಬಿನೇಷನ್ನಲ್ಲಿ ಗುರುತಿಸಿಕೊಂಡ ಪ್ರೀತಂ- ಗಣೇಶ್, ‘ಮಳೆಯಲಿ ಜೊತೆಯಲಿ’, ‘ದಿಲ್ ರಂಗೀಲಾ’ ಹಾಗೂ 99’ ಚಿತ್ರಗಳಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಆ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ‘99’ ನಂತರ ಪ್ರೀತಂ ಗುಬ್ಬಿ ಯಾವುದೇ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. ಇದೀಗ ‘ಬಾನದಾರಿಯಲ್ಲಿ’ ಮೂಲಕ ಈರ್ವರೂ ಹೊಸ ಪಯಣ ಆರಂಭಿಸಲಿದ್ದಾರೆ.
ಮೇನಲ್ಲಿ ಸೆಟ್ಟೇರಲಿರುವ ‘ಬಾನ ದಾರಿಯಲ್ಲಿ’ ಚಿತ್ರದ ಶೀರ್ಷಿಕೆಯೇ ಕುತೂಹಲ ಹುಟ್ಟಿಸುವಂತಿದೆ. ಪುನೀತ್ ರಾಜ್ಕುಮಾರ್ ಹಾಡಿದ್ದ ಈ ಗೀತೆ ಜನರ ಮನಸ್ಸಿನಲ್ಲಿ ಅಜರಾಮರವಾಗಿದೆ. ಚಿತ್ರಕ್ಕೆ ಈ ಶೀರ್ಷಿಕೆಯು ಸೂಕ್ತವಾಗಿರುವುದರಿಂದ ಹಾಡಿನ ಮೊದಲ ಪದವನ್ನೇ ಟೈಟಲ್ ಆಗಿ ಇಡಲಾಗಿದೆ. ಚಿತ್ರಕ್ಕೆ ‘ನೋಡು ಎಂಥ ಚಂದ’ ಎಂಬ ಟ್ಯಾಗ್ ಲೈನ್ ಕೂಡ ಇದೆ.
ಮೇನಲ್ಲಿ ಚಿತ್ರ ಸೆಟ್ಟೇರಲಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಮೊದಲ ಪೋಸ್ಟರ್ಅನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಸಂಭ್ರಮ ಹಂಚಿಕೊಂಡಿದೆ. ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಟ್ವೀಟ್ ಮಾಡಿರುವ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್, ‘ಹರೆಯದ ಹೃದಯಗಳೇ ಹರಸಿ’ ಎಂದು ಕೋರಿಕೊಂಡಿದ್ದಾರೆ.
ರೊಮ್ಯಾಂಟಿಕ್ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಪ್ರೀತಂ ಗುಬ್ಬಿ ಈ ಚಿತ್ರದಲ್ಲಿ ಪ್ರೀತಿಯ ಜತೆಗೆ ಅಡ್ವೆಂಚರ್ ಕತೆಯನ್ನೂ ಹೇಳಲಿದ್ದಾರೆ. ವಿಶೇಷವೆಂದರೆ ಬೆಂಗಳೂರು, ಚೆನ್ನೈ ಜತೆಗೆ ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯಲಿದೆ. ಪೋಸ್ಟರ್ನಲ್ಲಿ ಆಫ್ರಿಕನ್ನರಿರುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.
ಗಣೇಶ್ ಟ್ವೀಟ್ ಇಲ್ಲಿದೆ:
As promised,here’s the title of our film
*ಬಾನದಾರಿಯಲ್ಲಿ*
ನೋಡು ಎಂಥ ಚಂದ…
⭐️✨?☀️?⚡️ಯುಗಾದಿ ಹಬ್ಬದ ಶುಭಾಶಯಗಳು …
???
ಹರೆಯದ ಹೃದಯಗಳೇ ಹರಸಿ ❤️?❤️
#movietitle launch
@preethamgubbi pic.twitter.com/I8b5hAXKut— Ganesh (@Official_Ganesh) April 2, 2022
ಚಿತ್ರತಂಡದಲ್ಲಿ ಖ್ಯಾತನಾಮರು:
‘ಬಾನದಾರಿಯಲ್ಲಿ’ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಬಡವ ರಾಸ್ಕಲ್’ ಸೇರಿದಂತೆ ಹಲವು ಖ್ಯಾತ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪ್ರೀತ ಜಯರಾಂ ಈ ಚಿತ್ರದಲ್ಲಿ ಛಾಯಾಗ್ರಹಣ ಮಾಡಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನದ ಹೊಣೆ ಹೊತ್ತಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾ ಬಳಗದ ಆಯ್ಕೆ ನಡೆಯುತ್ತಿದೆ.
ಇದನ್ನೂ ಓದಿ:
ಸೌತ್ ಸಿನಿಮಾ ಬಗ್ಗೆ ಹಗುರಾಗಿ ಮಾತಾಡಿದ್ದ ಜಾನ್ ಅಬ್ರಾಹಂ; ‘ಆರ್ಆರ್ಆರ್’ ಎದುರಲ್ಲಿ ಹೀನಾಯ ಸೋಲು