‘ಪ್ರೇಮದ ಊರಲಿ’: ಬುಕ್​​ ಮೈ ಶೋನಲ್ಲಿ ಗಂಟೆಗೆ ಸಾವಿರಾರು ಟಿಕೆಟ್ ಮಾರಾಟ

ಕಡಿಮೆ ಬಜೆಟ್ಟಿನ ‘ಪ್ರೇಮದ ಊರಲಿ’ ಸಿನಿಮಾ ಒಂದು ಇಷ್ಟು ದೊಡ್ಡ ಗಳಿಕೆಯನ್ನು ಮಾಡುತ್ತಿರುವುದು ಸಹಜವಾಗಿಯೇ ದೇಶದಾದ್ಯಂತ ಸಿನಿಮಾ ಕರ್ಮಿಗಳ ಗಮನವನ್ನು ಸೆಳೆದಿದೆ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಏರುತ್ತಲೇ ಸಾಗುತ್ತಿದ್ದು, ಬುಕ್​​ ಮೈ ಶೋನಲ್ಲಂತೂ ಪ್ರತಿ ಗಂಟೆಗೆ ಸಾವಿರಾರು ಟಿಕೆಟ್​​ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ.

‘ಪ್ರೇಮದ ಊರಲಿ’: ಬುಕ್​​ ಮೈ ಶೋನಲ್ಲಿ ಗಂಟೆಗೆ ಸಾವಿರಾರು ಟಿಕೆಟ್ ಮಾರಾಟ
Premada Oorali Movie

Updated on: Oct 10, 2026 | 7:03 PM

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ
  • ಬುಕ್​ ಮೈ ಶೋನಲ್ಲಿ ದಾಖಲೆ ಬರೆಯುತ್ತಿರುವ ಸಿನಿಮಾ
  • ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ‘ಪ್ರೇಮದ ಊರಲಿ’ ಸಿನಿಮಾ ಎಬ್ಬಿಸಿದೆ. ಭರ್ಜರಿ ಯಶಸ್ಸನ್ನು ಸಿನಿಮಾ ನೋಡುತ್ತಿದ್ದು, ಬಿಡುಗಡೆ ಆದ ಮೂರನೇ ವಾರವೂ ಸಹ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ಕಡಿಮೆ ಬಜೆಟ್ಟಿನ ಸಿನಿಮಾ ಒಂದು ಇಷ್ಟು ದೊಡ್ಡ ಗಳಿಕೆಯನ್ನು ಮಾಡುತ್ತಿರುವುದು ಸಹಜವಾಗಿಯೇ ದೇಶದಾದ್ಯಂತ ಸಿನಿಮಾ ಕರ್ಮಿಗಳ ಗಮನವನ್ನು ಸೆಳೆದಿದೆ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಏರುತ್ತಲೇ ಸಾಗುತ್ತಿದ್ದು, ಬುಕ್​​ ಮೈ ಶೋನಲ್ಲಂತೂ ಪ್ರತಿ ಗಂಟೆಗೆ ಸಾವಿರಾರು ಟಿಕೆಟ್​​ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ.

ಬುಕ್‌ಮೈಶೋ ಸೇರಿದಂತೆ ಪ್ರಮುಖ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾಕ್ಕೆ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ. ಟಿಕೆಟ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತಿದೆ. ಕೇವಲ ಆನ್‌ಲೈನ್ ಮೂಲಕವೇ ಪ್ರತಿ ಗಂಟೆಗೆ 15,000ಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗುತ್ತಿರುವುದು ಚಿತ್ರದ ಬೇಡಿಕೆ ಹಾಗೂ ಜನಪ್ರಿಯತೆಗೆ ಸಾಕ್ಷಿಯಾಗಿದೆ. ವೀಕೆಂಡ್‌ಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮುಂದೆ ‘ಹೌಸ್‌ಫುಲ್’ ಬೋರ್ಡ್‌ಗಳು ರಾರಾಜಿಸುತ್ತಿದ್ದು, ಮುಂಗಡ ಬುಕಿಂಗ್ ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗುತ್ತಿವೆ.

ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕಿರುವ ಅತ್ಯುತ್ತಮ ‘ವರ್​ಡ್ ಆಫ್ ಮೌತ್’ ಪ್ರಚಾರವೇ ಈ ಯಶಸ್ಸಿಗೆ ಪ್ರಮುಖ ಕಾರಣ. ಸಿನಿಮಾ ಈಗಾಗಲೇ ಕರ್ನಾಟಕದಲ್ಲಿ 40 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ತೆಲುಗಿನಲ್ಲಿ ಸಹ ಇತ್ತೀಚೆಗಷ್ಟೆ ಇದೇ ಸಿನಿಮಾ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಮಾತ್ರವಲ್ಲದೆ, ಅಲ್ಲಿ ಸ್ಟಾರ್ ನಟ ನಾನಿಯ ಭಾರಿ ಬಜೆಟ್ ಸಿನಿಮಾ ‘ದಿ ಪ್ಯಾರಡೈಸ್’ ಅನ್ನು ಸಹ ಟಿಕೆಟ್ ಮಾರಾಟದಲ್ಲಿ ಹಿಂದಿಕ್ಕಿದೆ.

ಇದನ್ನೂ ಓದಿ:‘ಪ್ರೇಮದ ಊರಲಿ’ ಚಿತ್ರ 15 ದಿನಕ್ಕೆ ಬರೋಬ್ಬರಿ 39 ಕೋಟಿ ರೂಪಾಯಿ ಗಳಿಕೆ

‘ಪ್ರೇಮದ ಊರಲಿ’ ಸಿನಿಮಾ ಸರಳವಾದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಪ್ರೀತಿ, ಕುಟುಂಬ, ಹಾಸ್ಯ, ಆಕ್ಷನ್ ಎಲ್ಲವೂ ಜೊತೆಯಾಗಿದೆ. ಸಿನಿಮಾ ಅನ್ನು ಮನೋಜ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ರಂಗಾಯಣ ರಘು, ಶ್ರೀರಾಮ್, ರಮಿಕಾ, ತಪಸ್ವಿನಿ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Sat, 10 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us