Prithviraj Sukumaran: ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್​ಗೆ ಖಡಕ್ ಪಾತ್ರ; ಹುಟ್ಟುಹಬ್ಬದ ದಿನವೇ ಫಸ್ಟ್ ಲುಕ್ ರಿಲೀಸ್​

| Updated By: ಮದನ್​ ಕುಮಾರ್​

Updated on: Oct 16, 2022 | 9:44 PM

Salaar | Hombale Films: ಪೃಥ್ವಿರಾಜ್ ಸುಕುಮಾರನ್​ ಅವರು ‘ಸಲಾರ್​’ ಚಿತ್ರತಂಡಕ್ಕೆ ಎಂಟ್ರಿ ನೀಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಜನ್ಮದಿನದ ಪ್ರಯುಕ್ತ ಅವರ ಫಸ್ಟ್​ಲುಕ್​ ಬಿಡುಗಡೆ ಆಗಿದೆ.

Prithviraj Sukumaran: ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್​ಗೆ ಖಡಕ್ ಪಾತ್ರ; ಹುಟ್ಟುಹಬ್ಬದ ದಿನವೇ ಫಸ್ಟ್ ಲುಕ್ ರಿಲೀಸ್​
ಪೃಥ್ವಿರಾಜ್ ಸುಕುಮಾರನ್
Follow us on

‘ಹೊಂಬಾಳೆ ಫಿಲ್ಮ್ಸ್​’ (Hombale Films) ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಎಲ್ಲ ಸಿನಿಮಾಗಳ ಮೇಲೆ ಜನರಿಗೆ ಸಖತ್​ ನಿರೀಕ್ಷೆ ಇದೆ. ವಿಜಯ್ ಕಿರಗಂದೂರು ಅವರು ಒಂದಕ್ಕಿಂತ ಮತ್ತೊಂದು ಭಿನ್ನ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಸಿದ್ಧ ಆಗುತ್ತಿರುವ ‘ಸಲಾರ್​’ (Salaar) ಚಿತ್ರದ ಮೇಲೆ ಕೂಡ ಸಾಕಷ್ಟು ಕ್ರೇಜ್​ ಇದೆ. ಈ ಸಿನಿಮಾಗೆ ಪ್ರಭಾಸ್​ ಹೀರೋ. ಜೊತೆಗೆ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ (Prithviraj Sukumaran) ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರದ ಫಸ್ಟ್​ ಲುಕ್​ ಅನಾವರಣ ಮಾಡಲಾಗಿದೆ.

ಬಹುಭಾಷೆಯಲ್ಲಿ ನಟ/ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರು ಫೇಮಸ್​ ಆಗಿದ್ದಾರೆ. ಅವರು ‘ಸಲಾರ್​’ ತಂಡಕ್ಕೆ ಎಂಟ್ರಿ ನೀಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಇಂದು (ಅ.16) ಅವರ ಜನ್ಮದಿನ. ಆ ಪ್ರಯುಕ್ತ ಫಸ್ಟ್​ಲುಕ್​ ಅನಾವರಣ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ‘ಸಲಾರ್​’ ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್​ ಈ ಪೋಸ್ಟರ್​ ಮೂಲಕ ಕಾಣಿಸಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ
Dhoomam: ‘ಧೂಮಂ’ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ ‘ಹೊಂಬಾಳೆ ಫಿಲ್ಮ್​’; ಇಲ್ಲಿದೆ ಫೋಟೋ ಗ್ಯಾಲರಿ
Kichcha Sudeep: ‘ಹೊಂಬಾಳೆ ಫಿಲ್ಮ್ಸ್​’ ಜತೆ ಕಿಚ್ಚ ಸುದೀಪ್​ ಸಿನಿಮಾ? ಅಚ್ಚರಿ ಹುಟ್ಟುಹಾಕಿದೆ ಈ ಫೋಟೋ
Prabhas: ‘ಸಲಾರ್​’ ನೋಡಲು ಇನ್ನೂ 1 ವರ್ಷ ಕಾಯಬೇಕು; ರಿಲೀಸ್​ ಡೇಟ್​ ತಿಳಿಸಿದ ‘ಹೊಂಬಾಳೆ ಫಿಲ್ಮ್ಸ್​’
‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​

‘ಸಲಾರ್​’ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ನಂತರ ಅವರ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್​ ಅಭಿನಯಿಸುತ್ತಿದ್ದಾರೆ. ಮಧು ಗುರುಸ್ವಾಮಿ, ಜಗಪತಿ ಬಾಬು, ಈಶ್ವರಿ ರಾವ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ಪೃಥ್ವಿರಾಜ್ ಕಾಂಬಿನೇಷನ್​ ಎಂದರೆ ಬಾಕ್ಸ್​ ಆಫೀಸ್​ ಲೂಟಿ ಆಗುವುದು ಗ್ಯಾರಂಟಿ ಎನ್ನುವ ನಿರೀಕ್ಷೆ ಅಭಿಮಾನಿಗಳಿಗೆ ಇದೆ. ಪೃಥ್ವಿರಾಜ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಪ್ರಶಾಂತ್ ನೀಲ್ ಮಾತಾಡಿದ್ದಾರೆ. ‘ಪೃಥ್ವಿರಾಜ್ ಪಾತ್ರವು ಸ್ನೇಹಿತ ಮತ್ತು ಶತ್ರುವನ್ನು ಆಳವಾಗಿ ಬಿಂಬಿಸುತ್ತದೆ. ಈ ಪಾತ್ರ ಪ್ರಭಾಸ್ ಪಾತ್ರಕ್ಕೆ ಸಮನಾಗಿದೆ. ನಾವು ಬಯಸಿದ ರೀತಿಯಲ್ಲಿ ಈ ಪಾತ್ರವನ್ನು ಪೃಥ್ವಿರಾಜ್‌ ಮಾತ್ರ ಮಾಡಲು ಸಾಧ್ಯ. ಇದು ಹೊಸ ಅಲೆಯನ್ನು ಸೃಷ್ಟಿಸಲಿದೆ. ಈ ಹೊಸ ಅವತಾರದಲ್ಲಿ ಅಭಿಮಾನಿಗಳಿಗೆ ಅವರು ಇಷ್ಟವಾಗಲಿದ್ದಾರೆ’ ಎಂದು ಪ್ರಶಾಂತ್​ ನೀಲ್​ ಹೇಳಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ರೀತಿಯೇ ‘ಸಲಾರ್​’ ಕೂಡ ಪ್ಯಾನ್​ ಇಂಡಿಯಾ ಸಿನಿಮಾ. 2023ರ ಸೆಪ್ಟೆಂಬರ್ 28ರಂದು ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಶೇಕಡ 50 ಭಾಗ ಶೂಟಿಂಗ್​ ಮುಕ್ತಾಯ ಆಗಿದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದ್ರದ ಮಧ್ಯದಲ್ಲಿ 20 ನಿಮಿಷಗಳ ಚೇಸಿಂಗ್ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ, ಡಾರ್ಕ್ ಸೆಂಟ್ರಿಕ್ ಥೀಮ್ (ಡಿಸಿಟಿ) ತಂತ್ರಜ್ಞಾನವನ್ನು ಚಿತ್ರೀಕರಣಕ್ಕೆ ಬಳಸಲಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಈ ಸಿನಿಮಾದ ಬಜೆಟ್​ 400 ಕೋಟಿ ರೂಪಾಯಿಗೂ ಹೆಚ್ಚಾಗಲಿದೆ. ಫೈಟಿಂಗ್​ ಸನ್ನಿವೇಶಗಳು ಬಹಳ ಅದ್ದೂರಿಯಾಗಿ ಮೂಡಿಬರುತ್ತಿವೆ. ಇಂದು ಬಿಡುಗಡೆ ಆಗಿರುವ ಪೃಥ್ವಿರಾಜ್​ ಸುಕುಮಾರನ್​ ಅವರ ಫಸ್ಟ್​ಲುಕ್​ ಪೋಸ್ಟರ್​ ಸಖತ್​ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.