ಹಿಂದಿಯಲ್ಲಿ 3ನೇ ದಿನವೂ ‘ಕಾಂತಾರ’ ಹೌಸ್​ಫುಲ್​; ಅಚ್ಚರಿ ಮೂಡಿಸುತ್ತಿದೆ ಬಾಕ್ಸ್​ ಆಫೀಸ್​ ನಂಬರ್​

Kantara | Box Office Collection: ‘ಕಾಂತಾರ’ ಚಿತ್ರ ಹಿಂದಿಯಲ್ಲಿ ಮೊದಲ ದಿನ 1.27 ಕೋಟಿ ರೂಪಾಯಿ ಗಳಿಸಿತ್ತು. 2ನೇ ದಿನ 2.75 ಕೋಟಿ ರೂಪಾಯಿಗೆ ಏರಿಕೆ ಆಯಿತು. ಭಾನುವಾರ ಕೂಡ ಭರ್ಜರಿ ಕಲೆಕ್ಷನ್​ ಆಗಿದೆ.

ಹಿಂದಿಯಲ್ಲಿ 3ನೇ ದಿನವೂ ‘ಕಾಂತಾರ’ ಹೌಸ್​ಫುಲ್​; ಅಚ್ಚರಿ ಮೂಡಿಸುತ್ತಿದೆ ಬಾಕ್ಸ್​ ಆಫೀಸ್​ ನಂಬರ್​
ರಿಷಬ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on:Oct 17, 2022 | 9:39 AM

ದೇಶಾದ್ಯಂತ ಇರುವ ಸಿನಿಪ್ರಿಯರು ‘ಕಾಂತಾರ’ ಸಿನಿಮಾ (Kantara) ಬಗ್ಗೆ ಮಾತನಾಡುತ್ತಿದ್ದಾರೆ. ಈ ಚಿತ್ರ ಸೃಷ್ಟಿ ಮಾಡಿರುವ ಹೈಪ್​ ಅಷ್ಟಿಷ್ಟಲ್ಲ. ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಈ ಚಿತ್ರ ಧೂಳೆಬ್ಬಿಸುತ್ತಿದೆ. ರಿಷಬ್​ ಶೆಟ್ಟಿ (Rishab Shetty) ನಟನೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಸೆ.30ರಂದು ಕನ್ನಡದಲ್ಲಿ ಮಾತ್ರ ‘ಕಾಂತಾರ’ ಬಿಡುಗಡೆ ಆಗಿತ್ತು. ಎಲ್ಲೆಡೆಯಿಂದ ಉತ್ತಮ ವಿಮರ್ಶೆ ಸಿಕ್ಕಿದ್ದರಿಂದ ಬೇರೆ ಭಾಷೆಗಳಿಗೂ ಡಬ್​ ಮಾಡಿ ಅ.14ರಂದು ರಿಲೀಸ್​ ಮಾಡಲಾಯ್ತು. ಮುಂಬೈನಲ್ಲಿ ಸತತ ಮೂರು ದಿನ ಅನೇಕ ಶೋಗಳು ಹೌಸ್​ಫುಲ್​ ಆಗಿವೆ. 3ನೇ ದಿನವಾದ ಭಾನುವಾರ (ಅ.16) ಜನರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ‘ಕಾಂತಾರ’ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ (Kantara Box Office Collection) ನೋಡಿ ಬಾಲಿವುಡ್​ ಮಂದಿ ಕೂಡ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ನಲ್ಲಿ ‘ಕಾಂತಾರ’ ಸಿನಿಮಾ ಮೂಡಿಬಂದಿದೆ. ಆರಂಭದಲ್ಲಿ ಈ ಚಿತ್ರವನ್ನು ಹಲವು ಭಾಷೆಗಳಿಗೆ ಡಬ್​ ಮಾಡಿ ರಿಲೀಸ್​ ಮಾಡುವ ಆಲೋಚನೆ ಇರಲಿಲ್ಲ. ಆದರೆ, ಕರ್ನಾಟಕದಲ್ಲಿ ಬ್ಲಾಕ್​ ಬಸ್ಟರ್​ ಹಿಟ್​ ಆಗಿದ್ದರಿಂದ ಬೇರೆ ಭಾಷೆಗಳಿಂದಲೂ ಡಿಮ್ಯಾಂಡ್​ ಬಂತು. ಅದರಲ್ಲೂ ಹಿಂದಿ ಪ್ರೇಕ್ಷಕರು ಈ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ತೋರಿಸಿದರು.

ಇದನ್ನೂ ಓದಿ
Image
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Image
Sapthami Gowda: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿತು ನಟಿ ಸಪ್ತಮಿ ಗೌಡ ಡಿಮ್ಯಾಂಡ್​
Image
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​
Image
Rishab Shetty: ಐಎಂಡಿಬಿಯಲ್ಲಿ ಗಮ್ಮತ್​ ರೇಟಿಂಗ್​ ಪಡೆದ ‘ಕಾಂತಾರ’; ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ರಿಷಬ್​ ಸಿನಿಮಾ

ಹಿಂದಿಯಲ್ಲಿ ಮೊದಲ ದಿನ ಕಲೆಕ್ಷನ್​ ಆಗಿದ್ದು 1.27 ಕೋಟಿ ರೂಪಾಯಿ. ಎರಡನೇ ದಿನ 2.75 ಕೋಟಿ ರೂಪಾಯಿಗೆ ಏರಿಕೆ ಆಯಿತು. ಭಾನುವಾರ ಕೂಡ ಭರ್ಜರಿ ಕಲೆಕ್ಷನ್​ ಆಗಿದ್ದು, ಅಧಿಕೃತ ಲೆಕ್ಕ ಎಷ್ಟು ಎಂಬುದು ಸದ್ಯದಲ್ಲೇ ರಿವೀಲ್​ ಆಗಲಿದೆ. ಸಲ್ಮಾನ್​ ಖಾನ್​ ಮತ್ತು ಚಿರಂಜೀವಿ ನಟಿಸಿದ್ದ ‘ಗಾಡ್​ ಫಾದರ್​’ ಚಿತ್ರ ಕೂಡ ಹಿಂದಿಗೆ ಡಬ್​ ಆಗಿತ್ತು. ಹಿಂದಿ ವರ್ಷನ್​ನಲ್ಲಿ ಆ ಸಿನಿಮಾ ಒಟ್ಟಾರೆ ಗಳಿಸಿದ್ದು 9.03 ಕೋಟಿ ರೂಪಾಯಿ ಮಾತ್ರ. ಆ ಕಲೆಕ್ಷನ್​ ಅನ್ನು ‘ಕಾಂತಾರ’ ಸಿನಿಮಾ ಅನಾಯಾಸವಾಗಿ ಹಿಂದಿಕ್ಕಲಿದೆ.

ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ ಅಬ್ಬರ ಮುಂದುವರಿದಿದೆ. ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟರೂ ಕೂಡ ಹಲವು ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಎಷ್ಟೋ ಜನರು ಟಿಕೆಟ್​ ಸಿಕ್ಕಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಈ ಪರಿ ಯಶಸ್ಸು ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ.

ಈ ಸಿನಿಮಾದಿಂದ ರಿಷಬ್​ ಶೆಟ್ಟಿ ಅವರಿಗೆ ದೇಶಾದ್ಯಂತ ಡಿಮ್ಯಾಂಡ್​ ಹೆಚ್ಚಿದೆ. ಅಚ್ಯುತ್​ ಕುಮಾರ್​, ಕಿಶೋರ್​, ಸಪ್ತಮಿ ಗೌಡ, ಮಾನಸಿ ಸುಧೀರ್​ ಮುಂತಾದವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ‘ಹೊಂಬಾಳೆ ಫಿಲ್ಮ್ಸ್​’ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:39 am, Mon, 17 October 22

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು