ಅಶ್ಲೀಲ ಕಮೆಂಟ್ ಹಾಕಿದವರಿಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದೇಕೆ? ಪ್ರಿಯಾಂಕಾ ತಿಮ್ಮೇಶ್ ಕೊಟ್ರು ಉತ್ತರ 

ಪ್ರಿಯಾಂಕಾ ತಿಮ್ಮೇಶ್ ಹಂಚಿಕೊಂಡಿರುವ ಡ್ಯಾನ್ಸ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಅನೇಕರು ನೆಗೆಟಿವ್ ಕಮೆಂಟ್ ಹಾಕಿದ್ದಾರೆ. ಆದರೆ, ಪ್ರಿಯಾಂಕಾ ಇದಕ್ಕೆ ತಲೆಕೆಡಿಸಿಕೊಂಡಿಲ್ಲ.

ಅಶ್ಲೀಲ ಕಮೆಂಟ್ ಹಾಕಿದವರಿಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದೇಕೆ? ಪ್ರಿಯಾಂಕಾ ತಿಮ್ಮೇಶ್ ಕೊಟ್ರು ಉತ್ತರ 
ಪ್ರಿಯಾಂಕಾ ತಿಮ್ಮೇಶ್
Follow us
ರಾಜೇಶ್ ದುಗ್ಗುಮನೆ
|

Updated on: Feb 24, 2023 | 3:59 PM

ನಟಿ ಪ್ರಿಯಾಂಕಾ ತಿಮ್ಮೇಶ್ (Priyanka Timmesh) ಅವರು ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಭಾಗಿ ಆಗಿ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ಪ್ರಿಯಾಂಕಾ ತಿಮ್ಮೇಶ್ ಅವರು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರು ಹಂಚಿಕೊಂಡಿರುವ ವಿಡಿಯೋ. ಪ್ರಿಯಾಂಕಾ ತಿಮ್ಮೇಶ್ ಹಂಚಿಕೊಂಡಿರುವ ಡ್ಯಾನ್ಸ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಅನೇಕರು ನೆಗೆಟಿವ್ ಕಮೆಂಟ್ ಹಾಕಿದ್ದಾರೆ. ಆದರೆ, ಪ್ರಿಯಾಂಕಾ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಪಾಸಿಟಿವ್ ಆಗಿ ಉತ್ತರಿಸಿದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆಗೆ ಪ್ರಿಯಾಂಕಾ ತಿಮ್ಮೇಶ್ ಅವರು ಟಿವಿ9 ಕನ್ನಡ ಡಿಜಿಟಿಲ್ ಜೊತೆ ಮಾತನಾಡಿದ್ದಾರೆ.

‘ನೆಗೆಟಿವ್ ಕಮೆಂಟ್​​ಗಳಿಗೆ ನಾವು ಖಾರವಾಗಿ ಉತ್ತರಿಸಬಹುದು. ಆದರೆ, ಅದರಿಂದ ಸಮಯ ವ್ಯರ್ಥ. ನಮ್ಮ ಇಡೀ ದಿನ ಹಾಳಾಗುತ್ತದೆ. ಬಂದ ಕಮೆಂಟ್​ಗಳಿಗೆ ಬೈಯ್ಯುತ್ತಾ ಹೋದರೆ ನಾನು ಈ ಪೋಸ್ಟ್​ನ ಹಾಕಬಾರದಿತ್ತೇನೋ ಎಂದು ಅನಿಸಿಬಿಡಬಹುದು. ನಮಗೆ ನಾವೇ ನೆಗೆಟಿವ್ ಅನಿಸಿಬಿಡುತ್ತದೆ. ಮಾನ-ಮರ್ಯಾದಿ ಇಲ್ಲ ಎಂದವರಿಗೂ ನಾನು ಪಾಸಿಟಿವ್ ಆಗೇ ಉತ್ತರ ನೀಡಿದ್ದೀನಿ. ಕಮೆಂಟ್ ಮಾಡಿದವರಿಗೆ ನಾನು ಈ ರೀತಿ ಕಮೆಂಟ್ ಮಾಡಬಾರದಿತ್ತು ಎಂದು ಒಮ್ಮೆ ಅನಿಸಬಹುದು’ ಎಂದು ಪ್ರಿಯಾಂಕಾ ತಿಮ್ಮೇಶ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ನನಗೆ ಮೆಸೇಜ್ ಮಾಡುವ ಎಲ್ಲರಿಗೂ ನಾನು ಉತ್ತರ ಕೊಡ್ತೀನಿ. ಆದರೆ, ಈ ವಿಡಿಯೋಗೆ ಮಾತ್ರ ಸಾಕಷ್ಟು ನೆಗೆಟಿವ್ ಕಮೆಂಟ್​ಗಳು ಬಂದಿದ್ದವು. ತುಂಬಾ ನೆಗೆಟಿವ್ ಬಂದಾಗ ನಾನು ಬೈಯ್ಯೋದಕ್ಕಿಂತ ನನಗೆ ಏನನ್ನಿಸಿತೋ ಅದನ್ನು ಹಾಕಿದೆ. ಕೆಲ ಕಮೆಂಟ್​ಗಳನ್ನು ನಾನು ಡಿಲೀಟ್ ಮಾಡಿದೆ. ಆ ಕಮೆಂಟ್​ಗಳನ್ನು ನೋಡಿ ಬೇರೆಯವರಿಗೆ ಅಸಹ್ಯ ಆಗಬಾರದು ಅನ್ನೋದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ ಪ್ರಿಯಾಂಕಾ.

‘ನಾನು ಇನ್​ಸ್ಟಾಗ್ರಾಮ್ ಬಳಕೆ ಮಾಡೋಕೆ ಕಾರಣ ಇದೆ. ನನಗೆ ಕೆಲವು ಇಷ್ಟದ ವಿಚಾರಗಳಿವೆ. ಅದಕ್ಕೆ ತಕ್ಕಂತೆ ವಿಡಿಯೋಗಳು, ಟಿಪ್ಸ್​ಗಳು ಸಿಗುತ್ತವೆ. ಅವುಗಳನ್ನು ನಾನು ಸೇವ್ ಮಾಡಿಕೊಳ್ಳುತ್ತೇನೆ. ಮುಖ್ಯವಾಗಿ ರಿಲ್ಯಾಕ್ಸ್ ಸಿಗುತ್ತದೆ’ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ತಿಮ್ಮೇಶ್​ ಮದುವೆ ಆಗೋದು ಯಾವಾಗ? ಉತ್ತರ ಕೊಟ್ಟ ಬಿಗ್​ ಬಾಸ್​ ಸ್ಪರ್ಧಿ

‘ಕೆಲವರು ಕಮೆಂಟ್ ನೋಡೋಕೆ ಅಂತಾನೇ ಬರ್ತಾರೆ. ಬಹುಶಃ ಈ ವಿಚಾರ ತಿಳಿದೇ ಈ ರೀತಿ ಕಮೆಂಟ್ ಮಾಡುತ್ತಾರೆ ಅನಿಸುತ್ತದೆ. ಅಂದಹಾಗೆ, ಈ ರೀತಿಯ ಕಮೆಂಟ್ ಮಾಡುವ ಅಕೌಂಟ್​ಗಳನ್ನು ನೇರವಾಗಿ ಪ್ರಶ್ನಿಸೋಣ ಎಂದರೆ ಅವರ ಖಾತೆ ನಕಲಿಯೋ ಅಥವಾ ನಿಜವಾದ ಖಾತೆಯೋ ಗೊತ್ತಿಲ್ಲ. ಇವರಿಗೆ ಏನು ಅಂತ ಕೇಳೋದು? ನನಗೆ ಫೇಮಸ್ ಆಗಬೇಕು ಅಂದರೆ ನಿತ್ಯ ಬಿಕಿನಿ ಫೋಟವೇ ಹಾಕುತ್ತಿದ್ದೆ. ನನ್ನ ಮನಸ್ಸಿಗೆ ಖುಷಿ ನೀಡೋದನ್ನು ಮಾತ್ರ ಮಾಡ್ತೀನಿ’ ಎಂದು ಅವರು ಹೇಳಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್ ಅವರು ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ.