ಪೊಲೀಸ್ ಠಾಣೆಗಳಲ್ಲಿ ರಾಜಿ ಸಂಧಾನ ಮಾಡಬಾರದು: ಸ್ನೇಹಿತ್​ ಪುಂಡಾಟ ಕೇಸ್​ ಬಗ್ಗೆ ಕಮಲ್​ ಪಂತ್​ ಪ್ರತಿಕ್ರಿಯೆ

| Updated By: ಮದನ್​ ಕುಮಾರ್​

Updated on: Oct 26, 2021 | 4:19 PM

ಸೌಂದರ್ಯ ಜಗದೀಶ್ ಕುಟುಂಬದವರ ಹಲ್ಲೆ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ಆ ಬಗ್ಗೆ ಕಮಲ್ ಪಂತ್​ ಪ್ರತಿಕ್ರಿಯೆ ನೀಡಿದ್ದಾರೆ.

ಪೊಲೀಸ್ ಠಾಣೆಗಳಲ್ಲಿ ರಾಜಿ ಸಂಧಾನ ಮಾಡಬಾರದು: ಸ್ನೇಹಿತ್​ ಪುಂಡಾಟ ಕೇಸ್​ ಬಗ್ಗೆ ಕಮಲ್​ ಪಂತ್​ ಪ್ರತಿಕ್ರಿಯೆ
ಸ್ನೇಹಿತ್​, ಕಮಲ್​ ಪಂತ್​
Follow us on

ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್​ ಮನೆಯ ಕೆಲಸದವರ ಮೇಲೆ ಹಲ್ಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ ಸ್ಯಾಂಡಲ್​ವುಡ್​ ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್. ಘಟನೆ ನಡೆದು ಮೂರು ದಿನ ಕಳೆದರೂ ಇನ್ನೂಅವರ ಬಂಧನ ಆಗಿಲ್ಲ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವುದು ಯಾಕೆ ತಡವಾಗುತ್ತಿದೆ ಎಂಬ ಬಗ್ಗೆ ಅನುಮಾನ ಮೂಡಿದೆ. ಹಲ್ಲೆ ನಡೆದಿರುವುದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷಿ ಒದಗಿಸುತ್ತಿವೆ. ಈ ನಡುವೆ ರಾಜಿ ಸಂಧಾನ ಮಾಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆ ಬಗ್ಗೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಪ್ರತಿಕ್ರಿಯೆ ನೀಡಿದ್ದಾರೆ.

ಸೌಂದರ್ಯ ಜಗದೀಶ್ ಕುಟುಂಬದವರ ಹಲ್ಲೆ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಮಲ್ ಪಂತ್ ಹೇಳಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆಗಳಲ್ಲಿ ರಾಜಿ ಸಂಧಾನದ ಕೆಲಸ ನಡೆಯಬಾರದು. ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುಬೇಕು ಎಂದು ಅವರು ಖಡಕ್​ ಸೂಚನೆ ನೀಡಿದ್ದಾರೆ. ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಸೌಂದರ್ಯ ಜಗದೀಶ್ ಅವರ ಮನೆಯಲ್ಲಿ ಎಸಿಪಿ ವೆಂಕಟೇಶ್ ನಾಯ್ಡು ಪರಿಶೀಲನೆ ನಡೆಸಿದ್ದಾರೆ. ಸೆಕ್ಯೂರಿಟಿ ಗಾರ್ಡ್​ನನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನೆಲೆ:

ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಅವರ ಮನೆಗೆ ನುಗ್ಗಿ ಸ್ನೇಹಿತ್​ ಮತ್ತು ಅವರ 10 ಜನ ಬೌನ್ಸರ್ಸ್​ ಹಲ್ಲೆ ಮಾಡಿದ್ದರು. ಶನಿವಾರ (ಅ.23) ನಡೆದ ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕ್ಷುಲ್ಲಕ ವಿಚಾರಕ್ಕೆ ರಜತ್​ ಮನೆಯ ಕೆಲಸದವರ ಮೇಲೆ ಸ್ನೇಹಿತ್​ ಮತ್ತು ಅವರ ಬೌನ್ಸರ್​ಗಳು ದರ್ಪ ತೋರಿದ್ದರು. ಹೈ ಪ್ರೊಫೈಲ್​ ಕೇಸ್​ ಆದ ಕಾರಣ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಈವರೆಗೂ ಆರೋಪಿಗಳ ಬಂಧನ ಯಾಕೆ ಆಗಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ.

ಸ್ನೇಹಿತ್​ ವರ್ತನೆಯಿಂದ ಸ್ಥಳೀಯರಿಗೆ ಕಿರಿಕಿರಿ:

‘ಇವರು ಬೌನ್ಸರ್​​ಗಳಲ್ಲ, ಗೂಂಡಾಗಳು’ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ‘ಆ ಹುಡುಗ (ಸ್ನೇಹಿತ್​) ಹೊರಗಡೆ ಬಂದ್ರೆ ಹಿಂದೆ ಮುಂದೆ ಕಾರು ಬರುತ್ತೆ. ರಸ್ತೆಯಲ್ಲಿ ಬರುವ ದ್ವಿಚಕ್ರ ವಾಹನ ಸವಾರರ ಮೇಲೆ ಹಲ್ಲೆ ಮಾಡ್ತಾರೆ. ದೊಡ್ಡವರು ಚಿಕ್ಕವರೆಂದು ನೋಡದೇ ಬಾಯಿಗೆ ಬಂದಂತೆ ಬೈತಾರೆ. ಅವರ ಕಾರು ಬರಬೇಕಾದ್ರೆ ರೋಡ್ ಕ್ಲಿಯರ್ ಮಾಡಿಕೊಡಬೇಕು. ಸಿನಿಮಾದಲ್ಲಿ ವಿಲನ್ ಬಂದಂಗೆ ಬರ್ತಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ:

ಪೊಲೀಸರು ಬಂದಾಗ ಸೌಂದರ್ಯ ಜಗದೀಶ್​ ಮನೆಯಲ್ಲಿ ಹೈಡ್ರಾಮಾ; ಕೆಲ ಹೊತ್ತು ಬಾಗಿಲು ತೆರೆಯದ ಕುಟುಂಬಸ್ಥರು

ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್​ ಪುಂಡಾಟ ಕೇಸ್​ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್​ ನಟ?

Published On - 3:25 pm, Tue, 26 October 21