ಡಾ.ರಾಜ್ ಜೊತೆಗಿನ ಅಪರೂಪದ ಚಿತ್ರ ಹಂಚಿಕೊಂಡ ಅಪ್ಪು; ಆ ಕಾಲ ನೆನಪಾಗಿ ಪುಳಕಗೊಂಡ ಅಭಿಮಾನಿಗಳು

Puneeth Rajkumar: ಚಂದನವನದ ಖ್ಯಾತ ನಟ ಪುನೀತ್ ರಾಜಕುಮಾರ್ ತಂದೆ ಡಾ.ರಾಜಕುಮಾರ್ ಜೊತೆಗಿನ ಚಿತ್ರ ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.

ಡಾ.ರಾಜ್ ಜೊತೆಗಿನ ಅಪರೂಪದ ಚಿತ್ರ ಹಂಚಿಕೊಂಡ ಅಪ್ಪು; ಆ ಕಾಲ ನೆನಪಾಗಿ ಪುಳಕಗೊಂಡ ಅಭಿಮಾನಿಗಳು
ಡಾ.ರಾಜಕುಮಾರ್ ಜೊತೆಯಲ್ಲಿ ಪುನೀತ್ ರಾಜಕುಮಾರ್ (Credits: Puneeth Rajakumar/ Twitter)
Edited By:

Updated on: Oct 29, 2021 | 5:26 PM

ನಟ ಪುನೀತ್ ರಾಜಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಅಪರೂಪಕ್ಕೊಮ್ಮೆ ವಿಶೇಷ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ಇಂದು ತಂದೆ ಡಾ.ರಾಜಕುಮಾರ್ ಜೊತೆಗೆ ಪ್ರವಾಸ ತೆರಳಿದ್ದಾಗಿನ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. 1988ರಲ್ಲಿ ನಯಾಗರ ಫಾಲ್ಸ್​ಗೆ ಭೇಟಿ ನೀಡಿದ್ದಾಗ ತೆಗೆದ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ‘ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು’ ಎಂದು ಕ್ಯಾಪ್ಶನ್ ನೀಡಿರುವ ಪುನೀತ್, ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

ಪುನೀತ್ ಹಂಚಿಕೊಂಡಿರುವ ಚಿತ್ರ ವೈರಲ್ ಆಗಿದ್ದು, ಪುನೀತ್ ಬಾಲ್ಯ ಹಾಗೂ ರಾಜಕುಮಾರ್ ಅವರನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಾಜಕುಮಾರ್ ಕುಳಿತಿದ್ದು, ಪುನೀತ್ ಅವರತ್ತ ನೋಡುತ್ತಿದ್ದಾರೆ. ಪುನೀತ್ ಜೇಬಿನಲ್ಲಿ ಕೈ ಇಟ್ಟುಕೊಂಡು ನಿಸರ್ಗವನ್ನು ವೀಕ್ಷಿಸುತ್ತಿದ್ದಾರೆ. ತಂದೆ- ಮಗುವಿನ ಈ ಅಪರೂಪದ ಕ್ಷಣವನ್ನು ಪುನೀತ್ ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆಗಿನ ಕಾಲಕ್ಕೆ ಒಮ್ಮೆ ಹೋಗಿ ಬಂದಂತಾಯಿತು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಪುನೀತ್ ಹಂಚಿಕೊಂಡ ಪೋಸ್ಟ್:

ಪುನೀತ್ ಕೈಯಲ್ಲಿ ಸದ್ಯ ‘ಜೇಮ್ಸ್’ ಹಾಗೂ ‘ದ್ವಿತ್ವ’ ಚಿತ್ರಗಳಿವೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ಪುನೀತ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಮುಂದಿನ ವರ್ಷ ಸೆಟ್ಟೇರಲಿದೆ ಎಂದು ಇತ್ತೀಚೆಗಷ್ಟೇ ನಿರ್ದೇಶಕ ಸಂತೋಷ್ ಆನಂದರಾಮ್ ತಿಳಿಸಿದ್ದರು. ಪುನೀತ್ ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ಯುವರತ್ನ’ ಚಿತ್ರದಲ್ಲಿ. ಅದ್ದೂರಿ ಬಜೆಟ್​, ಬೃಹತ್ ತಾರಾಗಣದ ಈ ಚಿತ್ರ ಕೊರೊನಾ ಎರಡನೇ ಅಲೆಯ ಪ್ರಾರಂಭದ ಸಮಯದಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಅಭಿಮಾನಿಗಳು ಉತ್ತಮ ಸಂದೇಶ ಹೊಂದಿರುವ ಚಿತ್ರ ಎಂದು ಮೆಚ್ಚುಗೆ ಸೂಚಿಸಿದ್ದರು. ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

ಅಕ್ಟೋಬರ್ 1ರಿಂದ ಚಿತ್ರಮಂದಿರದಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ; ಷರತ್ತುಗಳು ಅನ್ವಯ

KL Rahul and Athiya Shetty: ಮುಂದುವರೆದಿದೆ ರಾಹುಲ್- ಆಥಿಯಾ ತುಂಟಾಟ; ಈ ಬಾರಿ ಏನು ಸಮಾಚಾರ?

(Puneeth Rajakumar shares rare pic with his father Dr Rajkumar when they visit to Nayagara falls in 1988)

Published On - 6:45 pm, Fri, 24 September 21