ಹಲವು ಕಂಪನಿ, ಯೋಜನೆಗಳ ರಾಯಭಾರಿಯಾಗಿದ್ದರು ಪುನೀತ್: ಇಲ್ಲಿದೆ ಅವುಗಳ ಸಂಪೂರ್ಣ ಮಾಹಿತಿ

ಕೊವಿಡ್ ಲಸಿಕೆ ಪಡೆಯುವಂತೆ ಅವರು ಸರ್ಕಾರದ ಪರವಾಗಿ ಕೇಳಿಕೊಂಡಿದ್ದಿದೆ. ಹಾಗಾದರೆ ಪುನೀತ್​ ಯಾವೆಲ್ಲ ಯೋಜನೆ ಹಾಗೂ ಬ್ರ್ಯಾಂಡ್​ಗಳಿಗೆ ಅಂಬಾಸಿಡರ್​ ಆಗಿದ್ದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹಲವು ಕಂಪನಿ, ಯೋಜನೆಗಳ ರಾಯಭಾರಿಯಾಗಿದ್ದರು ಪುನೀತ್: ಇಲ್ಲಿದೆ ಅವುಗಳ ಸಂಪೂರ್ಣ ಮಾಹಿತಿ
ಪುನೀತ್ ರಾಜಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 12, 2021 | 6:05 PM

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರಿಲ್ಲ ಎನ್ನುವ ನೋವನ್ನು ಅರಗಿಸಿಕೊಳ್ಳೋಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮಂದಿ ಪುನೀತ್​ ಹೆಸರನ್ನು ರಸ್ತೆ, ಪಾರ್ಕ್​ಗೆ ಇಡಬೇಕು ಎನ್ನುವ ಮನವಿ ಸಲ್ಲಿಕೆ ಮಾಡುತ್ತಿದ್ದಾರೆ. ಪುನೀತ್​ ನಟನೆ ಮಾತ್ರವಲ್ಲದೆ, ಹಲವು ಸರ್ಕಾರಿ ಯೋಜನೆ ಹಾಗೂ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದರು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಅವರು ಮಾಡಿದ್ದರು. ಕೊವಿಡ್ ಲಸಿಕೆ ಪಡೆಯುವಂತೆ ಅವರು ಸರ್ಕಾರದ ಪರವಾಗಿ ಕೇಳಿಕೊಂಡಿದ್ದಿದೆ. ಹಾಗಾದರೆ ಪುನೀತ್​ ಯಾವೆಲ್ಲ ಯೋಜನೆ ಹಾಗೂ ಬ್ರ್ಯಾಂಡ್​ಗಳಿಗೆ ಅಂಬಾಸಿಡರ್​ ಆಗಿದ್ದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  • ಎಲ್‌ಇಡಿ ಬಲ್ಬ್​ ಬಳಕೆಯಿಂದ ವಿದ್ಯುತ್​ ಶಕ್ತಿ ಕಡಿಮೆ ವ್ಯಯವಾಗುತ್ತದೆ. ಎಲ್​ಇಡಿ ಬಲ್ಬ್​​ಗಳ ಬಳಕೆಗೆ ಉತ್ತೇಜನ ನೀಡಿದ್ದರು ಪುನೀತ್​.
  • ‘ಚೆಲುವ ಚಾಮರಾಜನಗರ’ ಯೋಜನೆಗೂ ಪುನೀತ್​ ರಾಯಭಾರಿ ಆಗಿದ್ದರು.
  • ಕೊವಿಡ್​ ಲಸಿಕೆ ಪಡೆಯುವಂತೆ ಸರ್ಕಾರ ಆಂದೋಲನ ಆರಂಭಿಸಿದೆ. ಇದಕ್ಕೆ ಪುನೀತ್​ ರಾಯಭಾರಿ ಆಗಿದ್ದರು.
  • ನಂದಿನಿ ಹಾಲಿನ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಇದರ ಪ್ರಚಾರ ರಾಯಭಾರಿಯಾಗಿ ಪುನೀತ್​ ಕಾರ್ಯ ನಿರ್ವಹಿಸುತ್ತಿದ್ದರು.
  • ಬಿಎಂಟಿಸಿ ಬಸ್ ಆದ್ಯತಾ ಪಥದ ಬಗ್ಗೆಯೂ ಜನರಲ್ಲಿ ಪುನೀತ್​ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು.
  • ಕರ್ನಾಟಕ ಪ್ರವಾಸೋದ್ಯಮದ ಪ್ರಚಾರಕ್ಕೆ ಪುನೀತ್​ ರಾಯಭಾರಿ ಆಗಿದ್ದರು.
  • SSLC ಶಿಕ್ಷಣದ ಬಳಿಕ ಜಿಟಿಟಿಸಿ ಸೇರಿ ‘ಕೌಶಲ ಕರ್ನಾಟಕ’ಕ್ಕೆ ನೆರವಾಗಲು ಪುನೀತ್ ಜಾಗೃತಿ ಮೂಡಿಸುತ್ತಿದ್ದರು.
  • ಸಿಡಾಕ್, ಉದ್ಯಮಶೀಲತಾ ತರಬೇತಿಯ ಪ್ರಯೋಜನದ ಮನವರಿಕೆ ಮಾಡುವ ಕೆಲಸವನ್ನು ಪುನೀತ್​ ಮಾಡುತ್ತಿದ್ದರು.
  • ಗ್ರಾಮೀಣ ಯುವಜನರಿಗೆ ಸರ್ಕಾರಿ ಐಟಿಐ ಸೇರಲು ಪ್ರೋತ್ಸಾಹ ನೀಡುವ ಕೆಲಸ ಪುನೀತ್​ ಅವರಿಂದ ಆಗುತ್ತಿತ್ತು.
  • ಮತದಾನ ಜಾಗೃತಿ ಅಭಿಯಾನಕ್ಕೆ ಪುನೀತ್​ ಕೈ ಜೋಡಿಸಿದ್ದರು.
  • ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ತಯಾರಿಸಿದ ‘ದೀಪ ಸಂಜೀವಿನಿ’ ಮಣ್ಣಿನ ಹಣತೆ ಖರೀದಿಸಿ ದೀಪಾವಳಿ ಆಚರಿಸುವ ಮೂಲಕ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಮನವಿ ಮಾಡಿಕೊಂಡಿದ್ದರು ಪುನೀತ್​
  • ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ನೆರವಾಗುವ ‘ಸಂಜೀವಿನಿ’ ಯೋಜನೆ ಮಹತ್ವ ಸಾರುವ ಮೂಲಕ ಪ್ರೇರಣೆ ನೀಡುತ್ತಿದ್ದರು.

ಇದನ್ನೂ ಓದಿ: ‘ಪುನೀತ್​ ನಮನ’ ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ? ಇಲ್ಲಿದೆ ಸುದ್ದಿಗೋಷ್ಠಿ ಮಾಹಿತಿ

Published On - 5:43 pm, Fri, 12 November 21

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ