ಅಪ್ಪು ಚಿತ್ರದಲ್ಲಿರೋ ಈ ಎರಡು ಡೈಲಾಗ್ ‘ರಾಜಕುಮಾರ’ ಸಿನಿಮಾದಲ್ಲೂ ಇದೆ; ನೆನಪಿದೆಯಾ?

| Updated By: ರಾಜೇಶ್ ದುಗ್ಗುಮನೆ

Updated on: Mar 17, 2025 | 8:30 AM

ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು, ಅವರ ಮೊದಲ ಚಿತ್ರವಾದ ‘ಅಪ್ಪು’ ಮತ್ತು ಅವರ ಮತ್ತೊಂದು ಸೂಪರ್ ಹಿಟ್ ಚಿತ್ರ ‘ರಾಜಕುಮಾರ’ ಚಿತ್ರಗಳ ನಡುವಿನ ಆಸಕ್ತಿಕರ ಲಿಂಕ್ ಬಗ್ಗೆ ಇಲ್ಲಿ ಹೇಳಲಾಗಿದೆ. ‘ಅಪ್ಪು’ ಚಿತ್ರದ ಎರಡು ಸಂಭಾಷಣೆಗಳು "ರಾಜಕುಮಾರ" ಚಿತ್ರದಲ್ಲೂ ಬಳಸಲ್ಪಟ್ಟಿವೆ ಎಂಬುದು ಕುತೂಹಲಕಾರಿ ಸಂಗತಿ.

ಅಪ್ಪು ಚಿತ್ರದಲ್ಲಿರೋ ಈ ಎರಡು ಡೈಲಾಗ್ ‘ರಾಜಕುಮಾರ’ ಸಿನಿಮಾದಲ್ಲೂ ಇದೆ; ನೆನಪಿದೆಯಾ?
ಅಪ್ಪು ಸಿನಿಮಾ-ರಾಜಕುಮಾರ
Follow us on

ಪುನೀತ್ ರಾಜ್​ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅವರು ಇಂದು ನಮ್ಮ ಜೊತೆ ಇರಬೇಕಿತ್ತು ಎಂದು ಫ್ಯಾನ್ಸ್ ಈಗಲೂ ಅಂದುಕೊಳ್ಳುತ್ತಾ ಇದ್ದಾರೆ. ಆದರೆ, ನಡೆದ ಘಟನೆಯನ್ನು ತಡೆಯಲು ಸಾಧ್ಯವಿಲ್ಲ. ಹಿಂದಿರುಗಿ ಹೋಗಿ ಎಲ್ಲವನ್ನು ಸರಿ ಮಾಡಲು ಸಾಧ್ಯವಿಲ್ಲ. ಅವರ ಬರ್ತ್​ಡೇ ಪ್ರಯುಕ್ತ ಸಾಮಾಜಿಕ ಕೆಲಸ ಮಾಡಲಾಗುತ್ತಿದೆ. ಅವರ ಜನ್ಮದಿನದ ಪ್ರಯುಕ್ತ ಪುನೀತ್ ನಟನೆಯ ‘ಅಪ್ಪು’ ಸಿನಿಮಾ (Appu Movie) ರೀ-ರಿಲೀಸ್ ಕಂಡಿದೆ. ಈ ಚಿತ್ರದ ಎರಡು ಡೈಲಾಗ್​ನ ‘ರಾಜಕುಮಾರ’ ಸಿನಿಮಾದಲ್ಲೂ ಬಳಕೆ ಮಾಡಲಾಗಿತ್ತು. ಇದಕ್ಕೆ ಕಾರಣವೂ ಇದೆ ಎನ್ನಲಾಗಿದೆ.

‘ಅಪ್ಪು’ ಸಿನಿಮಾ 2002ರಲ್ಲಿ ತೆರೆಗೆ ಬಂತು. ಇದು ಪುನೀತ್ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ಇದಾಗಿದೆ. ಈ ಕಾರಣಕ್ಕೆ ಅಭಿಮಾನಿಗಳ ಪಾಲಿಗೆ ಈ ಸಿನಿಮಾ ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಪುನೀತ್ ರಾಜ್​ಕುಮಾರ್ ಅವರ ಈ ಚಿತ್ರದ ಎರಡು ಡೈಲಾಗ್​ನ ರಾಜಕುಮಾರ ಸಿನಿಮಾದಲ್ಲೂ ಬಳಕೆ ಮಾಡಲಾಗಿದೆ.

ಇದನ್ನೂ ಓದಿ
ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಭಿಮಾನ
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಪುನೀತ್ ಕಪ್ಪಿದ್ದಾರೆ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದ ರಾಜ್​ಕುಮಾರ್
ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್, ಕಾರಣ?

‘ನೂರು ಹೊಡದ್ರೆ ನಾನು ಒಂದಾದ್ರೂ ಹೊಡೀತಿನಿ..’ ಎಂಬ ‘ಅಪ್ಪು’ ಸಿನಿಮಾ ಡೈಲಾಗ್​ನ ‘ನೀನು ನೂರು ಸಲ ಹೊಡೆದ್ರೂ, ನೂರು ಸಲ ಹೊಡೆಯೋದು ನಾನೆ’ ಎದು ‘ರಾಜಕುಮಾರ’ದಲ್ಲಿ ಬದಲಾಯಿಸಲಾಗಿದೆ. ‘ನಾನು ಹೊಡೆದ್ರೆ ಪೇಪರ್​ನಲ್ಲಿ ಅದೇ ಹೆಡ್​ಲೈನ್’ ಎಂಬ ಡೈಲಾಗ್ ಎರಡೂ ಸಿನಿಮಾದಲ್ಲಿ ಇದೆ. ಈ ಎರಡೂ ಡೈಲಾಗ್​ನ ಸಂತೋಷ್ ಆನಂದ್​ರಾಮ್ ಅವರು ಉದ್ದೇಶಪೂರ್ವಕವಾಗಿ ‘ರಾಜಕುಮಾರ’ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಪುನೀತ್​ ರಾಜ್​ಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಅವರ ನಟನೆಯ ‘ರಾಜಕುಮಾರ’ ಸಿನಿಮಾ ಕೂಡ ಅವರ ಯಶಸ್ವಿ ಚಿತ್ರಗಳಲ್ಲಿ ಒಂದು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ‘ಅಪ್ಪು’ ಸಿನಿಮಾ ನೆನಪಿಗಾಗಿ ಈ ಡೈಲಾಗ್ ಬಳಕೆ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಪ್ಪು ಮೇಲಿನ ಅಭಿಮಾನ

ಪುನೀತ್ ರಾಜ್​ಕುಮಾರ್ ಅವರು ಇಂದು ಬದುಕಿದ್ದರೆ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರು ನಮ್ಮ ಜೊತೆ ಇಲ್ಲ. ಇದು ಅವರ ಅಭಿಮಾನಿಗಳಿಗೆ ಹಾಗೂ ಫ್ಯಾನ್ಸ್ ಸಾಕಷ್ಟು ನೊಂದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.