
ಪುನೀತ್ ರಾಜ್‌ಕುಮಾರ್ ಜನ್ಮದಿನದ (ಮಾರ್ಚ್ 17) ಪ್ರಯುಕ್ತ ಅವರ ಕುರಿತಂತೆ ಹಲವು ವಿಚಾರಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಪುನೀತ್ ಅವರ ಹೆಸರಿನ ಬಗ್ಗೆಯೂ ಚರ್ಚೆಗಳು ನಡೆದಿವೆ. ಪುನೀತ್ (Puneeth Rajkumar) ಅವರ ಮೊದಲ ಹೆಸರು ಲೋಹಿತ್ ಎಂದಾಗಿತ್ತು. 10 ವರ್ಷಗಳ ಕಾಲ ಈ ಹೆಸರು ಚಾಲ್ತಿಯಲ್ಲಿ ಇತ್ತು. ಆ ಬಳಿಕ ಈ ಹೆಸರನ್ನು ಪುನೀತ್ ಎಂದು ರಾಜ್‌ಕುಮಾರ್ ಬದಲಿಸಿದ್ದರು. ಲೋಹಿತ್ ಎಂಬ ಹೆಸರಿನ ಬಗ್ಗೆ ಇದ್ದ ಭಯವೇ ಹೆಸರು ಬದಲಿಸಲು ಮುಖ್ಯ ಕಾರಣ ಎನ್ನುವ ವಿಚಾರ ರಿವೀಲ್ ಆಗಿದೆ.
ರಾಜ್‌ಕುಮಾರ್ ಅವರಿಗೆ ಪುನೀತ್ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅವರಿಗೆ ಹಸರು ಇಡಬೇಕು ಎಂದಾಗ ಲೋಹಿತ್ ಎಂಬ ಹೆಸರು ಅವರಿಗೆ ನೆನಪಿಗೆ ಬಂತು. ಇದಕ್ಕೆ ಕಾರಣ ಆಗಿದ್ದು ‘ಸತ್ಯ ಹರಿಶ್ಚಂದ್ರ’ ಸಿನಿಮಾ. ಸತ್ಯ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿತಾಶ್ವ (ಅಥವಾ ರೋಹಿತಾಶ್ವ). ಈ ಹೆಸರು ರಾಜ್ಕುಮಾರ್ಗೆ ತುಂಬಾನೇ ಇಷ್ಟವಾಗಿತ್ತು. ಈ ಕಾರಣಕ್ಕೆ ಲೋಹಿತ್ ಎಂದು ಹೆಸರು ಇಡಲಾಯಿತು. ಸತ್ಯ ಹರಿಶ್ಚಂದ್ರನ ಮಗ ಲೋಹಿತಾಶ್ವ ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಈ ಕಾರಣಕ್ಕೆ ರಾಜ್ಗೆ ಹೆಸರು ಬದಲಿಸಲು ಸೂಚಿಸಿದ್ದರು.
ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಬೇಕಾದ ಹಿರಿಯರೊಬ್ಬರು ಲೋಹಿತ್ ಎಂದು ಹೆಸರಿಟ್ಟ ಬಗ್ಗೆ ಪ್ರಶ್ನೆ ಮಾಡಿದ್ದರು. ಲೋಹಿತ್ ಅನ್ನೋದು ಅಲ್ಪಾಯುಷಿಗೆ ಇರುವಂತಹ ಹೆಸರು. ಹೀಗಾಗಿ ಪುನೀತ್ ಎಂದು ಬದಲಿಸಲು ಸೂಚಿಸಿದ್ದರಂತೆ. ಈ ಕಾರಣಕ್ಕೆ ಅಣ್ಣಾವ್ರು ಈ ಹೆಸರನ್ನು ಬದಲಿಸಿದ್ದರು. ಡಾ. ರಾಜ್ ಕುಟುಂಬದ ಸಂಬಂಧಿ ಕುಮಾರ್ ಬಂಗಾರಪ್ಪ ಈ ಬಗ್ಗೆ ಈ ಮೊದಲು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಪುನೀತ್ ಬಗ್ಗೆ ಹಬ್ಬಿದ್ದ ಈ ಸುಳ್ಳು ಸುದ್ದಿ ಬಗ್ಗೆ ಅವರಿಗೆ ಆಗಿತ್ತು ಭಾರೀ ಬೇಸರ
‘ಡಾ. ರಾಜ್‌ಕುಮಾರ್ ಉರುಫ್ ಎಸ್.ಪಿ. ಮುತ್ತುರಾಜ್ ಆದ ನಾನು ನನ್ನ ಮಗ ಮಾಸ್ಟರ್ ಲೋಹಿತ್ ಹೆಸರನ್ನು ಇಂದಿನಿಂದ ಅಂದರೆ ದಿನಾಂಕ 16-3-1985ರಂದು ಮಾಸ್ಟರ್ ಪುನೀತ್ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಎಸ್.ಬಿ. ಚಂದ್ರಶೇಖರ್ ಅವರ ಸಮಕ್ಷಮದಲ್ಲಿ ಪ್ರಮಾಣ ಪತ್ರ ಮಾಡಿಸಿರುತ್ತೇನೆ’ ಎಂದು ಜಾಹೀರಾತು ನೀಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.