ಒಂದೇ ಬಾರಿ ಐದು ಸಿನಿಮಾ ಘೋಷಿಸಿದ ಆರ್ ಚಂದ್ರು: ಸಿನಿಮಾಗಳ ಹೆಸರೇನು?

| Updated By: ರಾಜೇಶ್ ದುಗ್ಗುಮನೆ

Updated on: Jan 24, 2024 | 9:31 AM

R Chandru: ನಿರ್ದೇಶಕ ಆರ್ ಚಂದ್ರು, ತಮ್ಮದೇ ಆದ ಆರ್​ಸಿ ಸ್ಟುಡಿಯೋ ಪ್ರಾರಂಭ ಮಾಡಿದ್ದು ಒಟ್ಟಿಗೆ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಟೈಟಲ್ ಬಿಡುಗಡೆ ಮಾಡಿದ್ದಾರೆ.

ಒಂದೇ ಬಾರಿ ಐದು ಸಿನಿಮಾ ಘೋಷಿಸಿದ ಆರ್ ಚಂದ್ರು: ಸಿನಿಮಾಗಳ ಹೆಸರೇನು?
ಆರ್ ಚಂದ್ರು
Follow us on

ಕಬ್ಜ’ (Kabza) ಸಿನಿಮಾ ಮೂಲಕ ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ದೊಡ್ಡ ಗೆಲುವು ಸಂಪಾದಿಸಿರುವ ಆರ್ ಚಂದ್ರು ಇದೀಗ ದೊಡ್ಡ ಪ್ರಾಜೆಕ್ಟ್​ಗೆ ಕೈ ಹಾಕಿದ್ದಾರೆ. ಎಲ್ಲರೂ ಆಶ್ಚರ್ಯಪಡುವಂತೆ ಒಂದೇ ಬಾರಿ ಬರೋಬ್ಬರಿ ಐದು ಸಿನಿಮಾಗಳನ್ನು ತಮ್ಮ ಸಂಸ್ಥೆಯಿಂದ ಘೋಷಣೆ ಮಾಡಿದ್ದಾರೆ. ಇಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿನಿಮಾಗಳಿಗೆ ಚಾಲನೆ ನೀಡಿದ್ದಾರೆ.

ಚಂದ್ರು ಅವರ ಆರ್​ಸಿ ಪ್ರೊಡಕ್ಷನ್ ಸಂಸ್ಥೆಯಿಂದ ಐದು ಸಿನಿಮಾಗಳ ಘೋಷಣೆ ಆಗಿದೆ. ‘ಡಾಗ್’, ‘ಫಾದರ್’, ‘ಪಿಓಕೆ’, ‘ಶ್ರೀ ರಾಮ ಬಾಣಂ’, ‘ಕಬ್ಜ 2’ ಸಿನಿಮಾಗಳನ್ನು ಆರ್ ಚಂದ್ರು ಇಂದು (ಜನವರಿ 23) ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತ್ರವೇ ಅಲ್ಲದೆ ಬಾಲಿವುಡ್ ನಿರ್ಮಾಪಕ ಆನಂದ್ ಪಂಡೀತ್, ರಿಯಲ್ ಸ್ಟಾರ್ ಉಪೇಂದ್ರ, ಡಾರ್ಲಿಂಗ್ ಕೃಷ್ಣ, ಫಿಲಂ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ಹೆಚ್ ಎಂ ರೇವಣ್ಣ, ನಿರ್ಮಾಪಕ ಜಾಕ್ ಮಂಜು ಅವರುಗಳು ಹಾಜರಿದ್ದು ಚಂದ್ರು ಅವರ ಪ್ರಯತ್ನಕ್ಕೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ:Kabzaa 2: ಕಬ್ಜ 2 ಗೆ ಆರ್ ಚಂದ್ರು ಮಗನೇ ಹೀರೋ! ಇದೇನಿದು ಉಪ್ಪಿ ಹೇಳಿದ ಹೊಸ ಸುದ್ದಿ

ಐದು ಸಿನಿಮಾಗಳಲ್ಲಿ ಎಲ್ಲವನ್ನೂ ಆರ್ ಚಂದ್ರ ನಿರ್ದೇಶನ ಮಾಡುತ್ತಿಲ್ಲ. ಕೆಲವು ಹೊಸ ನಿರ್ದೇಶಕರಿಗೆ, ಹೊಸ ನಟರಿಗೆ ತಮ್ಮ ಈ ಸಿನಿಮಾಗಳಲ್ಲಿ ಅವಕಾಶ ನೀಡಲಿದ್ದಾರೆ. ‘ಕಬ್ಜ’ ಸಿನಿಮಾಕ್ಕೆ ಸಹ ನಿರ್ಮಾಪಕ ಆಗಿದ್ದ ಆರ್ ಚಂದ್ರು ಈ ಸಿನಿಮಾಗಳ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕ ಆಗಲಿದ್ದಾರೆ. ‘ಕಬ್ಜ’ ಸಿನಿಮಾಕ್ಕೆ ಮುಂಚೆಯೂ ಅವರು ತಮ್ಮದೇ ನಿರ್ದೇಶನದ ಕೆಲ ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿ ಜವಾಬ್ದಾರಿ ನಿಭಾಯಿಸಿದ್ದರು.

(ಸುದ್ದಿ ಅಪ್​ಡೇಟ್ ಆಗಲಿದೆ)

 

Published On - 8:59 pm, Tue, 23 January 24