AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾದಿಂದ ಬಂದ ಲಾಭವನ್ನು ದುಪ್ಪಟ್ಟು ಹೇಗೆ ಮಾಡುತ್ತಾರೆ ಉಮಾಪತಿ ಶ್ರೀನಿವಾಸ್?

Umapathy Shrinivas: ಉಮಾಪತಿ ಶ್ರೀನಿವಾಸ್ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾ ನಿರ್ಮಾಪಕ. ಸಿನಿಮಾದಿಂದ ಬಂದ ಲಾಭದ ಹಣವನ್ನು ಎಲ್ಲಿ ಹೂಡಿಕೆ ಮಾಡುತ್ತಾರೆ ಉಮಾಪತಿ.

ಸಿನಿಮಾದಿಂದ ಬಂದ ಲಾಭವನ್ನು ದುಪ್ಪಟ್ಟು ಹೇಗೆ ಮಾಡುತ್ತಾರೆ ಉಮಾಪತಿ ಶ್ರೀನಿವಾಸ್?
ಮಂಜುನಾಥ ಸಿ.
|

Updated on: Jan 23, 2024 | 5:12 PM

Share

ಕನ್ನಡ ಚಿತ್ರರಂಗದಲ್ಲಿ (Sandalwood) ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತವೆ. ಕನ್ನಡ ಚಿತ್ರರಂಗದ ವಾರ್ಷಿಕ ಅಂದಾಜು ವ್ಯವಹಾರ 1000 ಕೋಟಿಯನ್ನು ದಾಟುತ್ತದೆ. ಚಿತ್ರರಂಗದಲ್ಲಿ ಹಲವು ನಿರ್ಮಾಪಕರಿದ್ದಾರೆ. ಅವರಿಂದಾಗಿಯೇ ಕನ್ನಡ ಚಿತ್ರರಂಗ ವರ್ಷಕ್ಕೆ ನೂರಾರು ಸಿನಿಮಾಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವುದು. ಆದರೆ ಆ ನಿರ್ಮಾಪಕರಲ್ಲಿ ವೃತ್ತಿಪರ (ಪ್ರೊಫೆಷನಲ್) ಎಂದು ಕರೆಯಬಹುದಾದ ನಿರ್ಮಾಪಕರು ಬೆರಳೆಣಿಕೆಯಷ್ಟು ಮಾತ್ರ. ಅಂಥಹವರಲ್ಲಿ ಒಬ್ಬರು ಉಮಾಪತಿ ಶ್ರೀನಿವಾಸ್ (Umapathy Srinivas).

ಉಮಾಪತಿ ಶ್ರೀನಿವಾಸ್ ಬಹಳ ಹಳೆಯ ನಿರ್ಮಾಪಕರಲ್ಲದಿದ್ದರೂ ವ್ಯವಹಾರ ಅರಿತಿರುವ, ಜಾಣತನದಿಂದ, ನಷ್ಟವಾಗದ ರೀತಿಯಲ್ಲಿ ಸಿನಿಮಾ ಮಾಡಿಕೊಂಡು ಹೋಗುತ್ತಿರುವ ನಿರ್ಮಾಪಕ. ಆರಂಭದಲ್ಲಿ ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಮಾಡಿದ ಉಮಾಪತಿ ಶ್ರೀನಿವಾಸ್, ಅನುಭವ ಹೆಚ್ಚಾದಂತೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸುವ ಸಿನಿಮಾಗಳನ್ನೂ ಮಾಡುವತ್ತ ಗಮನ ಹರಿಸಿದ್ದಾರೆ. ಮಾತ್ರವಲ್ಲದೆ, ಚಿತ್ರರಂಗದ ಏರಿಳಿತಗಳ ಬಗ್ಗೆ ಅರಿವಿರುವ ಅವರು, ಸಿನಿಮಾದಿಂದ ಬಂದ ಹಣವನ್ನು ಹೂಡಿಕೆ ಮಾಡಿ ಡಬಲ್ ಮಾಡುವ ದಾರಿ ಕಂಡು ಕೊಂಡಿದ್ದಾರೆ. ಇದರಿಂದಾಗಿಯೇ ಉಮಾಪತಿ, ಹೆಚ್ಚು ಒತ್ತಡಕ್ಕೆ ಒಳಗಾಗದೆ ವರ್ಷಕ್ಕೆ ಎರಡು ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ.

ಇದನ್ನೂ ಓದಿ:‘ಕಾಟೇರ’ ಕತೆ ನಾನು ಮಾಡಿಸಿದ್ದೆ, ಯಾರಿಗೆ ಏನು ಧಕ್ಕಬೇಕೆಂಬುದು ನಿರ್ಧರಿತ: ಉಮಾಪತಿ ಶ್ರೀನಿವಾಸ್

ಉಮಾಪತಿ ನಿರ್ಮಾಣ ಮಾಡಿರುವ ‘ಉಪಾಧ್ಯಕ್ಷ’ ಸಿನಿಮಾ ಇದೀಗ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಚಿಕ್ಕಣ್ಣ ನಾಯಕ. ಇದು ನಾಯಕನಾಗಿ ಅವರಿಗೆ ಮೊದಲ ಸಿನಿಮಾ. ಸುದೀಪ್, ದರ್ಶನ್, ಶ್ರೀಮುರಳಿ ಅವರುಗಳ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಉಮಾಪತಿ ಈಗ ಚಿಕ್ಕಣ್ಣನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಇದು ಅವರಿಗೂ ಸಹ ಒಂದು ರೀತಿ ಹೊಸ ಪ್ರಯೋಗ. ಆದರೆ ಲೆಕ್ಕಾಚಾರ ಹಾಕಿಕೊಂಡೇ ಪ್ರಯೋಗಕ್ಕೆ ಮುಂದಾಗಿದ್ದಾರೆ ಉಮಾಪತಿ.

ಸಿನಿಮಾದ ಪ್ರಚಾರ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿರುವ ಉಮಾಪತಿ ಶ್ರೀನಿವಾಸ್, ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್ ಬಗ್ಗೆ ಹಲವರು ಸುಳ್ಳು ಹೇಳುತ್ತಾರೆ. 200-300 ಕೋಟಿ ಎಲ್ಲ ಕಲೆಕ್ಷನ್ ಆಗುವುದೇ ಇಲ್ಲ. ಅದರಲ್ಲಿ ಅರ್ಧ ಆದರೂ ಸಹ ನಿರ್ಮಾಪಕನ ಅದೃಷ್ಟ. ಸ್ಟಾರ್ ನಟರ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ನಾನು ಸಹ ನಿಜವಾದ ಕಲೆಕ್ಷನ್ ಹೇಳಿಕೊಳ್ಳುವುದಿಲ್ಲ. ಮಾರ್ಕೆಟ್​ನಿಂದ ಲಾಭ ವಾಪಸ್ ಪಡೆದುಕೊಳ್ಳುವುದು ಬಹಳ ಕಷ್ಟದ ಕೆಲಸ ಎಂದಿದ್ದಾರೆ.

ಇದನ್ನೂ ಓದಿ:ಶಿವಣ್ಣನ ಜೊತೆ ಸಿನಿಮಾ ಘೋಷಿಸಿದ ಉಮಾಪತಿ, ಆ ಹೆಸರು ಬೇಡವೆಂದ ಶಿವಣ್ಣ

ತಾವು ಈ ವರೆಗೆ ಮಾಡಿರುವ ಯಾವ ಸಿನಿಮಾದಲ್ಲಿಯೂ ನಷ್ಟ ಮಾಡಿಕೊಂಡಿಲ್ಲ ಎಂದ ಉಮಾಪತಿ, ‘ಹೆಬ್ಬುಲಿ’ ಸಿನಿಮಾ ಮಾಡಿದಾಗ ಒಂದು 6.50 ಕೋಟಿ ಕೊಟ್ಟು ಒಂದು ಬಿಲ್ಡಿಂಗ್ ಖರೀದಿಸಿದೆ. ಅದರ ಮೌಲ್ಯ ಈಗ 15 ಕೋಟಿ ಇದೆ. ‘ರಾಬರ್ಟ್’ ಸಿನಿಮಾ ಮಾಡಿದಾಗ ಅದರ ನೆನಪಿಗೆ ಸ್ಥಳ ಖರೀದಿ ಮಾಡಿದೆ. ಆಗ ಅದಕ್ಕೆ ಸುಮಾರು 17-18 ಕೋಟಿ ಖರ್ಚು ಮಾಡಿದ್ದೆ. ಅದರ ಮೌಲ್ಯ ಈಗ ಸುಮಾರು 50-60 ಕೋಟಿ ಆಗಿದೆ. ‘ಮದಗಜ’ ಸಿನಿಮಾದ ಬಳಿಕ ಎರಡು ಪ್ರಾಪರ್ಟಿ ಖರೀದಿ ಮಾಡಿದೆ ಅದಕ್ಕೆ ಸುಮಾರು 10 ಕೋಟಿ ಖರ್ಚು ಮಾಡಿದೆ. ಅದರ ಮೌಲ್ಯ ಈಗ 20 ಕೋಟಿ ಇದೆ’ ಎಂದಿದ್ದಾರೆ ಉಮಾಪತಿ.

ಸಿನಿಮಾ ರಂಗದಲ್ಲಿ ಬುದ್ಧಿವಂತಿಕೆ ಹಾಗು ಶಿಸ್ತು ಇಲ್ಲದೇ ಇದ್ದರೆ ಬದುಕುವುದು ಕಷ್ಟ ಎಂಬುದನ್ನು ಮೊದಲೇ ಅರಿತುಕೊಂಡೆ. ಇಲ್ಲಿ ಹಣ ಹೂಡಬೇಕು, ಹಣ ಎತ್ತಿಕೊಳ್ಳಬೇಕು. ಯಾವುದೇ ಇತರೆ ವಿಷಯಗಳ ಕಡೆಗೆ ಗಮನ ಹರಿಸಿದರೆ ಪತನ ಆರಂಭವಾಗುತ್ತದೆ. ಗ್ಲಾಮರ್ ಲೋಕದ ಗ್ಲಾಮರ್​ಗೆ ನಾವು ಸೋತೆವೆಂದರೆ ನಮ್ಮ ಪತನ ಶುರುವಾದಂತೆಯೇ. ಹಾಗಾಗಿ ಶಿಸ್ತಿನಿಂದ ವ್ಯವಹಾರ ಮಾಡಬೇಕು, ಯೋಜನೆಗಳನ್ನು ಹಾಕಿಕೊಂಡು ಅದಕ್ಕೆ ತಕ್ಕಂತೆ ಕೆಲಸಗಳನ್ನು ಮಾಡಬೇಕು’ ಎಂದು ಅನುಭವ ಹಂಚಿಕೊಂಡಿದ್ದಾರೆ ಉಮಾಪತಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?