ರಚಿತಾ ರಾಮ್ ಸಿನಿ ಬದುಕಿಗೆ 12 ವರ್ಷ; ವೇದಿಕೆ ಮೇಲೆ ಬಾಯ್ತುಂಬ ಹಾರೈಸಿದ ದರ್ಶನ್  

Rachita Ram: ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳು ಪೂರ್ಣಗೊಂಡ ಸಂಭ್ರಮದಲ್ಲಿ ಇದ್ದಾರೆ. ಈ ವೇಳೆ ದರ್ಶನ್ ಅವರು ವಿಶೇಷ ಶುಭಾಶಯ ಸಂದೇಶವನ್ನು ಕಳುಹಿಸಿದ್ದಾರೆ. "ಭರ್ಜರಿ ಬ್ಯಾಚುಲರ್ಸ್" ಕಾರ್ಯಕ್ರಮದಲ್ಲಿ ಈ ಸಂದೇಶ ಪ್ರಸಾರವಾಯಿತು. ರಚಿತಾ ಅವರಿಗೆ ದರ್ಶನ್ ಅವರ ಮೇಲೆ ಅಪಾರ ಗೌರವ ಇದೆ.

ರಚಿತಾ ರಾಮ್ ಸಿನಿ ಬದುಕಿಗೆ 12 ವರ್ಷ; ವೇದಿಕೆ ಮೇಲೆ ಬಾಯ್ತುಂಬ ಹಾರೈಸಿದ ದರ್ಶನ್  
ರಚಿತಾ-ದರ್ಶನ್

Updated on: May 14, 2025 | 8:44 AM

ನಟಿ ರಚಿತಾ ರಾಮ್ (Rachita Ram) ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 12 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಸಿನಿಮಾ ರಂಗದ ಜರ್ನಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಹೀಗಿರುವಾಗಲೇ ರಚಿತಾ ರಾಮ್​ಗೆ ದರ್ಶನ್ ಕಡೆಯಿಂದಲೂ ವಿಶೇಷ ವಿಷ್ ಸಿಕ್ಕಿದೆ. ಇದನ್ನು ಕೇಳಿ ದರ್ಶನ್ ಅವರು ಸೂಪರ್ ಹ್ಯಾಪಿ ಆಗಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.

ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಬುಲ್​ ಬುಲ್’ ಸಿನಿಮಾ ಮೂಲಕ. ದರ್ಶನ್ ನಟನೆಯ ಈ ಚಿತ್ರ ಎಲ್ಲರ ಗಮನ ಸೆಳೆಯಿತು. ಈ ಸಿನಿಮಾ ಮೂಲಕ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಅವರಿಗೆ ಡಿಂಪಲ್ ಕ್ವೀನ್ ಹೆಸರಿನ ಟೈಟಲ್ ಕೂಡ ಈ ಚಿತ್ರದಿಂದ ಸಿಕ್ಕಿತು. ರಚಿತಾ ಅವರು ದರ್ಶನ್​ನ ಆರಾಧಿಸುತ್ತಾರೆ. ಮೊದಲ ಚಿತ್ರಕ್ಕೆ ಅವಕಾಶ ಕೊಟ್ಟವರು ಎನ್ನುವ ಕಾರಣಕ್ಕೆ ಅವರ ಮೇಲೆ ವಿಶೇಷ ಪ್ರೀತಿ ಇದೆ.

ಇದನ್ನೂ ಓದಿ
ಅನುಷ್ಕಾ-ವಿರಾಟ್ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ; ವಿಶೇಷತೆ ಏನು?
ಉಪೇಂದ್ರ ನಿರ್ದೇಶನಕ್ಕೆ ನಾನು ದೊಡ್ಡ ಫ್ಯಾನ್ ಎಂದ ರಜನಿ ಸಿನಿಮಾ ಡೈರೆಕ್ಟರ್
ಪವನ್ ಕಲ್ಯಾಣ್ ಹಳೆಯ ಚಿತ್ರಕ್ಕೆ ಕೊನೆಗೂ ಬಂತು ರಿಲೀಸ್ ಭಾಗ್ಯ
ರಶ್ಮಿಕಾ ಮಂದಣ್ಣ ಹೀರೋ ಜೊತೆ ತೆಲುಗು ಸಿನಿಮಾ ಘೋಷಿಸಿದ ಸಪ್ತಮಿ ಗೌಡ

ರಚಿತಾ ರಾಮ್ ಅವರು ಸದ್ಯ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೇ ಮೇಲೆ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಅವರು ಚಿತ್ರರಂಗದಲ್ಲಿ 12 ವರ್ಷ ಕಳೆದ ಸಂಭ್ರಮವನ್ನು ಆಚರಿಸಲಾಯಿತು. ‘ಇದು ಆರ್ಡಿನರ್ ಸುಳಿ ಅಲ್ಲ’ ಎಂದು ರಚಿತಾ ಡಿಂಪಲ್​ನ ರವಿಚಂದ್ರನ್ ಹೊಗಳಿದರು. ಆ ಬಳಿಕ ಅವರಿಗೆ ಸಿಕ್ಕಿತು ಸರ್​ಪ್ರೈಸ್.

ದರ್ಶನ್ ಅವರು ರಚಿತಾಗೆ ಕಳುಹಿಸಿದ ಧ್ವನಿ ಸಂದೇಶವನ್ನು ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಪ್ರಸಾರ ಮಾಡಲಾಯಿತು. ‘ನಮ್ಮ ಬುಲ್ ಬುಲ್ ಎಲ್ಲರನ್ನು ಹೀಗೆ ರಂಜಿಸುತ್ತಿರಲಿ’ ಎಂದು ದರ್ಶನ್ ಅವರು ಹಾರೈಸಿದ್ದಾರೆ. ಈ ಸಂದೇಶ ಕೇಳಿ ರಚಿತಾ ರಾಮ್ ಅವರು ಸಖತ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ರಚಿತಾ ರಾಮ್ ಸಿನಿಮಾ ಜರ್ನಿಗೆ 12 ವರ್ಷ; ಫ್ಯಾನ್ಸ್ ಸಂಭ್ರಮ

ದರ್ಶನ್ ಅವರು ಸದ್ಯ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ. ದರ್ಶನ್ ಅವರು ಬೆನ್ನು ನೋವಿನ ಮಧ್ಯೆ ಸಿನಿಮಾ ಶೂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:43 am, Wed, 14 May 25