ನಟ ಯಶ್ (Yash) ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ‘ಕೆಜಿಎಫ್ 2’ ಸರಣಿಯಲ್ಲಿ ನಟಿಸಿದ ನಂತರ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಕೆಲ ತಿಂಗಳ ಹಿಂದೆ ತೆರೆಗೆ ಬಂದ ‘ಕೆಜಿಎಫ್ 2’ ಚಿತ್ರದಿಂದ ಯಶ್ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಸದ್ಯ ಯಶ್ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit) ಅವರ ಜತೆ ಯಶ್ ಯುರೋಪ್ ಸುತ್ತಾಡುತ್ತಿದ್ದಾರೆ. ಅಲ್ಲಿಯೂ ಯಶ್ಗೆ ಫ್ಯಾನ್ಸ್ ಎದುರಾಗಿದ್ದಾರೆ. ಈ ಖುಷಿಯನ್ನು ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಕೆಜಿಎಫ್’ ಸರಣಿಯ ಸಿನಿಮಾಗಳಲ್ಲಿ ಯಶ್ ಅವರ ಮ್ಯಾನರಿಸಂ ಸಖತ್ ಇಷ್ಟವಾಗಿತ್ತು. ರಾಕಿ ಆಗಿ ಅವರು ಮಿಂಚಿದ್ದರು. ಈ ಕಾರಣಕ್ಕೆ ಅವರ ಜನಪ್ರಿಯತೆ ಹೆಚ್ಚಿದೆ. ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಇನ್ನೇನು ‘ಯಶ್ 19’ ಚಿತ್ರ ಘೋಷಣೆ ಆಗಬೇಕು ಎನ್ನುವಾಗ ಅವರು ವಿದೇಶಕ್ಕೆ ಹಾರಿದರು. ಸದ್ಯ ಯಶ್ ಇಟಲಿಯಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಲು ಒಂದು ಕಾರಣ ಇದೆ.
ಯಶ್ ಬಂದಿರುವ ವಿಚಾರ ಅಲ್ಲಿನ ಹೋಟೆಲ್ ಮಂದಿಗೆ ಗೊತ್ತಾಗಿದೆ. ಯಶ್ ಆ ಸಂದರ್ಭದಲ್ಲಿ ಹೊರಗೆ ತೆರಳಿದ್ದರು. ಕೆಲಸದ ಅವಧಿ ಮುಗಿದರೂ ಯಶ್ ಬರುವವರೆಗೆ ಅವರು ಕಾದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಪ್ರೀತಿಯನ್ನು ನೋಡಿ ಯಶ್ ಸಂತಸ ಹೊರಹಾಕಿದ್ದಾರೆ. ಅವರು ತೋರಿದ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ‘ಕೆಜಿಎಫ್ 2’ ಎದುರು ಬರದೆ ನಾವು ಬದುಕಿದೆವು; ಆಮಿರ್ ಖಾನ್ಗೂ ಭಯ ಹುಟ್ಟಿಸಿದ್ದ ಯಶ್ ಚಿತ್ರದ ಅಬ್ಬರ
ಅಭಿಮಾನಿಗಳ ಜತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಯಶ್ ಟ್ವೀಟ್ ಮಾಡಿದ್ದಾರೆ. ‘ನಿಮ್ಮ ಪ್ರೀತಿ ಗಡಿಯನ್ನು ಮೀರಿದೆ. ನಾನು ಅದನ್ನು ಮುಕ್ತ ತೋಳುಗಳಿಂದ ಸ್ವೀಕರಿಸುತ್ತೇನೆ. ಇಟಲಿ ಹಾಗೂ ಬಾಂಗ್ಲಾದೇಶದ ಅಭಿಮಾನಿಗಳನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕೆಲಸ ಮುಗಿದ ನಂತರವೂ ನನಗಾಗಿ ಕಾದಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ ಯಶ್.
Your love for me reaches beyond borders, I accept it with open arms…
A huge thank you to these wonderful fans I met from Italy and Bangladesh for staying post working hours and making it special for us .❤️ pic.twitter.com/eAkMDalBwg— Yash (@TheNameIsYash) July 29, 2022
ನರ್ತನ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಚಿತ್ರದ ಕೆಲಸ ವಿಳಂಬ ಆಗುವ ಬಗ್ಗೆ ನರ್ತನ್ ಇತ್ತೀಚೆಗೆ ಸೂಚನೆ ನೀಡಿದ್ದರು. ಯಶ್ ಅವರು ಭಾರತಕ್ಕೆ ಮರಳಿದ ನಂತರದಲ್ಲಿ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಸಿಗುವ ಸಾಧ್ಯತೆ ಇದೆ.