
ನಟ ಯಶ್ ಹಾಗೂ ರಾಧಿಕಾ ಪಂಡಿತ್ (Radhika Pandit) ದಂಪತಿ ಎಲ್ಲರಿಗೂ ಮಾದರಿ. ಒಬ್ಬರ ಮೇಲೆ ಮತ್ತೊಬ್ಬರು ಮುನಿಸಿ ತೋರಿಸಿದ್ದನ್ನು ಸಾರ್ವಜನಿಕವಾಗಿ ಯಾರೂ ನೋಡಿಲ್ಲ. ಒಬ್ಬರಿಗೊಬ್ಬರು ಸಮಯ ಕೊಟ್ಟು ಕೊಳ್ಳುತ್ತಾರೆ. ಈಗ ಈ ದಂಪತಿ ವೆಕೇಶನ್ಗೆ ತೆರಳಿದ್ದಾರೆ. ಈ ಸಂದರ್ಭದ ಫೋಟೋನ ರಾಧಿಕಾ ಹಂಚಿಕೊಂಡಿದ್ದಾರೆ. ರಾಧಿಕಾ ಅವರು ಯಶ್ನ ಬಿಗಿದಪ್ಪಿ ಕುಳಿತು ಬಿಟ್ಟಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.
ಯಶ್ ಹಾಗೂ ರಾಧಿಕಾ ಪಂಡಿತ್ ಅವರದ್ದು ಪ್ರೇಮ ವಿವಾಹ. ಎಂಗೇಜ್ಮೆಂಟ್ಗೆ ಮೊದಲು ಇವರು ಪ್ರೀತಿ ಮಾಡುತ್ತಿದ್ದರು ಎನ್ನುವ ಗುಸುಗುಸು ಇತ್ತಾದರೂ ಎಲ್ಲಿಯೂ ಒಂದು ದಿನ ಸುತ್ತಾಡಿ ಸುದ್ದಿ ಆದವರಲ್ಲ. 2016ರ ಆಗಸ್ಟ್ 12ರಂದು ನಿಶ್ಚಿತಾರ್ಥ ಮಾಡಿಕೊಂಡ ಇವರು ಅದೇ ವರ್ಷ ಡಿಸೆಂಬರ್ 9ರಂದು ವಿವಾಹ ಆದರು. ಇವರ ದಾಂಪತ್ಯಕ್ಕೆ 9 ವರ್ಷ ತುಂಬುತ್ತಾ ಬಂದಿದೆ. ಆದಾಗ್ಯೂ ಇಬ್ಬರಿಗೂ ಪ್ರೀತಿ ಕಡಿಮೆ ಆಗಿಲ್ಲ.
ರಾಧಿಕಾ ಪಂಡಿತ್ ಹಾಗೂ ಯಶ್ ವೆಕೇಶನ್ಗೆ ತೆರಳಿದ್ದಾರೆ. ಯಶ್ ಅವರು ಇಷ್ಟು ದಿನ ‘ಟಾಕ್ಸಿಕ್‘ ಹಾಗೂ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು. ಈ ಕಾರಣದಿಂದ ಬ್ರೇಕ್ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇಬ್ಬರೂ ಎಲ್ಲಿಯೂ ಹೊರಗೆ ತೆರಳಿ ಸುತ್ತಾಡಲು ಸಾಧ್ಯ ಆಗಿರಲಿಲ್ಲ. ಆದರೆ, ಈಗ ಇವರು ಬಿಡುವು ಮಾಡಿಕೊಂಡು ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ಕ್ಲಿಕ್ಕಿಸಿದ ಫೋಟೋ ಇದು. ‘ಈ ಜೋಡಿಗೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ’ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು, ಲವ್ ಇನ್ ದಿ ಏರ್’ ಎಂದು ಹೇಳಿದ್ದಾರೆ.
ಕೆಲವು ವರದಿಗಳ ಪ್ರಕಾರ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಅಮೆರಿಕಕ್ಕೆ ತೆರಳಿದ್ದಾರಂತೆ. ಅಲ್ಲಿ ಇಬ್ಬರೂ ಹಾಯಾಗಿ ಸುತ್ತಾಡುತ್ತಿದ್ದಾರೆ. ಯಶ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅವರು ಏರ್ಪೋರ್ಟ್ಗೆ ಬರುತ್ತಿದ್ದಂತೆ ಪಾಪರಾಜಿಗಳು ಮುಗಿಬಿದ್ದು ವಿಡಿಯೋ ಹಾಗೂ ಫೋಟೋ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಅಮ್ಮ ಬೇರೆ, ಮಗ ಬೇರೆ, ಅವನ ಅನಿಸಿಕೆ ನನಗೆ ಬೇಕಿಲ್ಲ: ಖಡಕ್ ಆಗಿ ಹೇಳಿದ ಯಶ್ ತಾಯಿ ಪುಷ್ಪ
ಯಶ್ ‘ಟಾಕ್ಸಿಕ್’ ಶೂಟ್ ಭರದಿಂದ ಸಾಗಿದೆ. ಈ ಶೂಟಿಂಗ್ನ ಒಂದು ಹಂತಕ್ಕೆ ಪೂರ್ಣಗೊಳಿಸಿ ಅವರು ‘ರಾಮಾಯಣ’ ಕೆಲಸಗಳಲ್ಲಿ ಬ್ಯುಸಿ ಆದರು. ಎರಡೂ ಸಿನಿಮಾಗೆ ಯಶ್ ಅವರೇ ನಿರ್ಮಾಪಕರು ಅನ್ನೋದು ವಿಶೇಷ. ಈ ಎರಡೂ ಸಿನಿಮಾಗಳು ಮುಂದಿನ ವರ್ಷ ತೆರೆಗೆ ಬರಲಿವೆ. ಯಶ್ ಕೊನೆಯದಾಗಿ ಕಾಣಿಸಿಕೊಂಡಿದ್ದು, 2022ರಲ್ಲಿ ರಿಲೀಸ್ ಆದ ‘ಕೆಜಿಎಫ್ 2’ ಚಿತ್ರದಲ್ಲಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.