AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟೋಬಿ’ಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ: ಸಹಾಯಕರು ಹೇಳಿದ ಶೆಟ್ರ ಮೂಗಿನ ಕತೆ

Raj B Shetty: 'ಟೋಬಿ' ಸಿನಿಮಾಕ್ಕಾಗಿ ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡಿದ್ದಾರೆ. ಮೂಗು ಗಾಯವಾಗಿ ನೋವಿನಲ್ಲೇ ಚಿತ್ರೀಕರಣವನ್ನೂ ಮಾಡಿದ್ದಾರೆ.

'ಟೋಬಿ'ಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ: ಸಹಾಯಕರು ಹೇಳಿದ ಶೆಟ್ರ ಮೂಗಿನ ಕತೆ
ರಾಜ್ ಬಿ ಶೆಟ್ಟಿ
Follow us
ಮಂಜುನಾಥ ಸಿ.
|

Updated on:Jul 13, 2023 | 9:13 PM

ರಾಜ್ ಬಿ ಶೆಟ್ಟಿ (Raj B Shetty) ನಟಿಸಿರುವ ಟೋಬಿ (Toby) ಸಿನಿಮಾ ಇನ್ನೊಂದು ತಿಂಗಳ ತರುವಾಯ ಬಿಡುಗಡೆ ಆಗಲಿದೆ. ಇದೇ ಮೊದಲ ಬಾರಿಗೆ ತಾವು ಮಾಸ್ ಎಲಿವೇಷನ್ ಉಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ. ಸಿನಿಮಾದ ಕತೆಯನ್ನು ಟಿಕೆ ದಯಾನಂದ ಬರೆದಿದ್ದರೆ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ರಾಜ್ ನಟಿಸಿದ್ದು, ಈಗಾಗಲೇ ಟೀಸರ್ ಹಾಗೂ ಪೋಸ್ಟರ್​ಗಳು ಬಿಡುಗಡೆ ಆಗಿ ವೈರಲ್ ಆಗಿವೆ. ಮೂಗಿಗೆ ದೊಡ್ಡ ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿಯ ಚಿತ್ರ ಪೋಸ್ಟರ್​ನಲ್ಲಿ ಗಮನ ಸೆಳೆದಿದೆ. ರಾಜ್ ಬಿ ಶೆಟ್ಟಿ, ಟೋಬಿಗಾಗಿ ನಿಜವಾಗಿಯೇ ಮೂಗು ಚುಚ್ಚಿಸಿಕೊಂಡಿದ್ದರಂತೆ. ಆ ವಿಡಿಯೋವನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಸಾಮಾನ್ಯ ಮೂಗುತಿಗಳಿಗಿಂತಲೂ ಗಾತ್ರದಲ್ಲಿ ದೊಡ್ಡದಾದ ಮೂಗುತಿಯನ್ನು ರಾಜ್ ಬಿ ಶೆಟ್ಟಿ ಚುಚ್ಚಿಸಿಕೊಂಡಿದ್ದಾರೆ. ಮೂಗು ಚುಚ್ಚಿಸಿಕೊಳ್ಳದೆ ನಕಲಿ ಮೂಗುತಿಯನ್ನು ಇಟ್ಟುಕೊಳ್ಳಬಹುದಿತ್ತು, ಆದರೆ ಆ ನೋವು ಗೊತ್ತಾಗಲೆಂದೇ ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡು ನಿಜವಾದ ಮೂಗುತಿ ಧರಿಸಿದ್ದಾರೆ. ಹಾಗಾಗಿ ಸಾಮಾನ್ಯ ಮೂಗುತಿ ಧರಿಸಲು ಮೂಗಿಗೆ ಮಾಡುವ ಛೇದನಕ್ಕಿಂತಲೂ ದೊಡ್ಡದಾಗಿ ಮಾಡಬೇಕಾಯ್ತಂತೆ. ಮೊದಲು ಮೂಗು ಚುಚ್ಚಿದಾಗ ರಾಜ್ ಬಿ ಶೆಟ್ಟ ಆರಾಮವಾಗಿದ್ದರಾದರೂ ಬಳಿಕ ಮೂಗು ಚುಚ್ಚಿದ ಸ್ಥಳದಲ್ಲಿ ಗಾಯವಾಗಿ ನೋವು ಶುರುವಾಯ್ತಂತೆ.

ಇದನ್ನೂ ಓದಿ: ಟೋಬಿಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ: ಮೂಗುತಿ ಧರಿಸಿದ್ದೇಕೆ?

ಮೂಗುತಿ ಧರಿಸುವ ಪಾತ್ರ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಬರುತ್ತದೆಯಾದ್ದರಿಂದ ಆ ದೃಶ್ಯಗಳ ಚಿತ್ರೀಕರಣ ಕೆಲವು ದಿನಗಳು ನಡೆದವಂತೆ ಪ್ರತಿದಿನವೂ ಚಿತ್ರೀಕರಣಕ್ಕಾಗಿ ಮೂಗಿನ ತೂತನ್ನು ದೊಡ್ಡದು ಮಾಡಿ ಶೆಟ್ಟರಿಗೆ ಮೂಗುತಿ ತೊಡಿಸಬೇಕಾಗಿ ಬಂತಂತೆ. ಇದರಿಂದಾಗಿ ವಿಪರೀತ ನೋವು ಅನುಭವಿಸಿ, ನೋವು ನಿರೋಧಕ ಚುಚ್ಚುಮದ್ದುಗಳನ್ನು ತೆಗೆದುಕೊಂಡೇ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು ರಾಜ್ ಬಿ ಶೆಟ್ಟಿ. ಅಲ್ಲದೆ, ಶೂಟಿಂಗ್ ನಡೆಯುವಾಗ ಶೆಟ್ಟರ ಕೈತಗುಲಿ ಮೂಗುತಿ ಮೂಗಿನ ಹೊಳ್ಳೆ ಹರಿದು ಹೊರಗೆ ಬಿದ್ದಿತ್ತಂತೆ. ಅದನ್ನೂ ತೀವ್ರ ನೋವನ್ನು ಶೆಟ್ರಿಗೆ ನೀಡಿದ್ದಾಗಿ ಅವರ ಸಹಾಯಕ ನಿರ್ದೇಶಕರು ನೆನಪು ಮಾಡಿಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿಗೆ ಮೂಗು ಚುಚ್ಚಿದ, ಆ ನಂತರ ಅವರು ಅನುಭವಿಸಿದ ಕಷ್ಟಗಳು, ಚುಚ್ಚು ಮದ್ದು ತೆಗೆದುಕೊಂಡಿದ್ದು, ನೋವು ಅನುಭವಿಸಿದ್ದರ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. ”ಹುಚ್ಚು ಕಲೆಗೆ ಒಳ್ಳೆಯದು. ಟೋಬಿಯ ಹುಚ್ಚಿನ ಅಭಿವ್ಯಕ್ತಿಸುವಾಗ ಪ್ರಾಮಾಣಿಕ ಪ್ರಯತ್ನದ ಅಗತ್ಯವಿತ್ತು. ಇಲ್ಲಿದೆ ಆ ಪ್ರಯತ್ನದ ಒಂದು ತುಣುಕು” ಎಂಬ ಅಡಿಬರಹದೊಂದಿಗೆ ವಿಡಿಯೋವನ್ನು ರಾಜ್ ಬಿ ಶೆಟ್ಟಿ ಹಂಚಿಕೊಂಡಿದ್ದಾರೆ.

ಸಾಮಾನ್ಯ ವ್ಯಕ್ತಿಯಾಗಿದ್ದು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಹಿಂಸಾತ್ಮಕ ಅವತಾರ ತಾಳುವ ವ್ಯಕ್ತಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಗಮನ ಸೆಳೆದಿದೆ. ಸಿನಿಮಾಕ್ಕೆ ಕತೆಯನ್ನು ಟಿಕೆ ದಯಾನಂದ ಬರೆದಿದ್ದು ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡಿರುವುದು ಬಾಸಿಲ್. ಸಿನಿಮಾಕ್ಕೆ ಸಂಗೀತವನ್ನು ಮಿಧುನ್ ಮುಕುಂದನ್ ನೀಡಿದ್ದಾರೆ. ಸಿನಿಮಾದಲ್ಲಿ ಚೈತ್ರಾ ಆಚಾರ್ ಹಾಗೂ ಸಂಯುಕ್ತಾ ಹೆಗಡೆ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 21 ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Thu, 13 July 23

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ