ಸಿನಿಮಾ ಚೆನ್ನಾಗಿರಲು ಮುಖ್ಯವಾಗಿ ಬೇಕಾಗಿದ್ದು ಏನು? ರಾಜ್‌ಕುಮಾರ್ ಮಾತು ಈಗಲೂ ಪ್ರಸ್ತುತ
ಡಾ. ರಾಜ್‌ಕುಮಾರ್ ಅವರು ಸಿನಿಮಾದ ಗುಣಮಟ್ಟದ ಬಗ್ಗೆ ನೀಡಿದ ಸಂದರ್ಶನ ಈಗಲೂ ಪ್ರಸ್ತುತ. ಕಥೆ, ಸ್ವಂತಿಕೆ ಮತ್ತು ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದಿದ್ದ ಅವರ ಮಾತುಗಳು ಇಂದಿಗೂ ದಿಕ್ಸೂಚಿ. ತಂತ್ರಜ್ಞಾನ ಎಷ್ಟೇ ಬೆಳೆದರೂ, ಸಿನಿಮಾದ ಆತ್ಮ ಕಥೆಯೇ. ಕಥೆಯಿಲ್ಲದ ಸಿನಿಮಾ ಗೆಲ್ಲಲ್ಲ ಎಂದು ಅವರು ಹೇಳಿದ್ದು, ಕನ್ನಡ ಚಿತ್ರರಂಗಕ್ಕೆ ಮಾರ್ಗದರ್ಶನವಾಗಿದೆ.

ರಾಜ್‌ಕುಮಾರ್ (Rajkumar) ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು. ಮೊದಲು ಸಿನಿಮಾ ಕೆಲಸಗಳು ಮದ್ರಾಸ್ನಲ್ಲಿ ನಡೆಯುತ್ತಿದ್ದವು ಮತ್ತು ರಾಜ್‌ಕುಮಾರ್ ಅವರು ಅಲ್ಲಿಯೇ ಇದ್ದರು. ಕಪ್ಪು ಬಿಳುಪಿನಿಂದ ಆರಂಭ ಆದ ಸಿನಿಮಾ ಜರ್ನಿ, ಕಲರ್ ಸಿನಿಮಾವರೆಗೆ ಬಂದಿತ್ತು ಎಂಬುದು ವಿಶೇಷ. ಅವರ ಹಳೆಯ ಸಂದರ್ಶನ ಒಂದು ಈಗ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಅವರು ಸಿನಿಮಾದಲ್ಲಿ ಏನು ಮುಖ್ಯ ಎಂಬ ಬಗ್ಗೆ ಮಾತನಾಡಿದ್ದರು. ಅವರು ಹೇಳಿದ ಮಾತು ಈಗಲೂ ಪ್ರಸ್ತುತವಾಗಿದೆ.
‘ಇತ್ತೀಚೆಗೆ ಸಿನಿಮಾ ಗುಣಮಟ್ಟ ಕಡಿಮೆ ಆಗಿದೆ ಎಂಬ ಮಾತಿದೆ’ ಎಂದು ರಾಜ್‌ಕುಮಾರ್ ಅವರಿಗೆ ಸಂದರ್ಶಕರು ಕೇಳಿದರು. ಇದಕ್ಕೆ ರಾಜ್‌ಕುಮಾರ್ ಅವರು ತಮ್ಮದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ದರು. ‘ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳು ತುಂಬಾನೇ ಚೆನ್ನಾಗಿದೆ ಎನ್ನುತ್ತಿದ್ದರು. ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದ ಮಾತು ಇದು’ ಎಂದಿದ್ದರು ರಾಜ್‌ಕುಮಾರ್. ರಾಜ್‌ಕುಮಾರ್ ಅವರು ಆ ಮಯದಲ್ಲಿ ಮದ್ರಾಸ್ನಲ್ಲಿದ್ದರು. ಮದರಾಸ್ನಲ್ಲಿ ಹೇಳುತ್ತಿದ್ದ ಮಾತು ಇದಾಗಿತ್ತಂತೆ.
‘ಸಿನಿಮಾಗಳ ಗುಣಮಟ್ಟ ಕಡಿಮೆ ಇದೆ ಎಂದು ಅನೇಕರು ಹೇಳುತ್ತಾರೆ. ಜನರಿಗೆ ಇಷ್ಟ ಆಗೋದನ್ನು ಮಾಡಬೇಕು ಎನ್ನುವುದಕ್ಕಿಂತ, ಸ್ವಂತಿಕೆ ಮುಖ್ಯ. ನನ್ನ ತಾಯಿ ಭಾಷೆಗೆ ಪ್ರಾಮುಖ್ಯತೆ ಕೊಡಬೇಕು’ ಎಂದು ರಾಜ್‌ಕುಮಾರ್ ಅವರು ಹೇಳಿದ್ದರು.
ಸಿನಿಮಾದಲ್ಲಿ ಕಥೆ ಎಂಬುದು ತುಂಬಾನೇ ಮುಖ್ಯ ಆಗುತ್ತದೆ’ ಎಂದು ರಾಜ್‌ಕುಮಾರ್ ಅಭಿಪ್ರಾಯ ಹೊರಹಾಕಿದ್ದರು. ಕಥೆ ಎಂಬುದು ಕಣ್ಣುಗಳಿದ್ದಂತೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಕಣ್ಣು ಊನ ಆಗಿಬಿಟ್ಟರೆ ಸಿನಿಮಾ ಚೆನ್ನಾಗಿರೋದಿಲ್ಲ ಎಂದು ಅವರು ಹೇಳುತ್ತಿದ್ದರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇತ್ತೀಚೆಗೆ ತಂತ್ರಜ್ಞಾನ ಮುಂದುವರಿದಿದೆ. ಹಾಗಂತ ಬಂದ ಸಿನಿಮಾಗಳೆಲ್ಲ ಹಿಟ್ ಆಗುತ್ತಿಲ್ಲ. ಈ ಬಗ್ಗೆ ರಾಜ್‌ಕುಮಾರ್ ಅಭಿಪ್ರಾಯ ಹೊರಹಾಕಿದ್ದರು. ರಾಜ್‌ಕುಮಾರ್ ಅವರ ಪ್ರಕಾರ, ತಂತ್ರಜ್ಞಾನ ಉತ್ತಮವಾಗಿರುವುದರಿಂದ ಕಥೆ ಚೆನ್ನಾಗಿ ಮಾಡಿದರೆ ಸಿನಿಮಾನ ಗೆಲ್ಲಿಸಬಹುದು ಎಂಬ ಅಭಿಪ್ರಾಯ ಅವರದ್ದಾಗಿತ್ತು.
ಇದನ್ನೂ ಓದಿ: ಸೃಜನ್ ಅವರನ್ನು ಚಿಕ್ಕೆಜಮಾನರು ಎಂದು ಕರೆಯುತ್ತಿದ್ದ ರಾಜ್‌ಕುಮಾರ್; ಕಾರಣ ಏನು?
ರಾಜ್‌ಕುಮಾರ್ ಅಗಲಿ ಎರಡು ದಶಕ ಕಳೆಯುತ್ತಾ ಬಂದಿದೆ. ಅವರ ಮಕ್ಕಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರಾಜ್‌ಕುಮಾರ್ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗುತ್ತಿದ್ದಾರೆ ಎನ್ನುವುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Wed, 3 December 25



