AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೃಜನ್ ಅವರನ್ನು ಚಿಕ್ಕೆಜಮಾನರು ಎಂದು ಕರೆಯುತ್ತಿದ್ದ ರಾಜ್​ಕುಮಾರ್; ಕಾರಣ ಏನು?

Srujan Lokesh: ರವಿಶಂಕರ್ ಗೌಡ ಕೂಡ ‘ಜಿಎಸ್​ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಮೆಚ್ಚುಗೆ ಪಡೆದಿದೆ. ಸಿನಿಮಾ ಹೇಗಿದೆ ಎಂದು ನೋಡಲು ನವೆಂಬರ್ 28ರವರೆಗೆ ಕಾಯಬೇಕು. ಈ ಚಿತ್ರದ ಪ್ರಚಾರದ ವೇಳೆ ರವಿಶಂಕರ್ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ.

ಸೃಜನ್ ಅವರನ್ನು ಚಿಕ್ಕೆಜಮಾನರು ಎಂದು ಕರೆಯುತ್ತಿದ್ದ ರಾಜ್​ಕುಮಾರ್; ಕಾರಣ ಏನು?
Rajkumar
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 28, 2025 | 8:15 AM

Share

ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ‘ಜಿಎಸ್​ಟಿ’ ಸಿನಿಮಾ ನವೆಂಬರ್ 28ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹಾರರ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ ಎಂಬುದು ವಿಶೇಷ. ಈ ಸಿನಿಮಾ ಪ್ರಚಾರಕ್ಕಾಗಿ ಸೃಜನ್ ಅವರು ಸಾಕಷ್ಟು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದಾರೆ.

ರವಿಶಂಕರ್ ಗೌಡ ಕೂಡ ‘ಜಿಎಸ್​ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಮೆಚ್ಚುಗೆ ಪಡೆದಿದೆ. ಸಿನಿಮಾ ಹೇಗಿದೆ ಎಂದು ನೋಡಲು ನವೆಂಬರ್ 28ರವರೆಗೆ ಕಾಯಬೇಕು. ಈ ಚಿತ್ರದ ಪ್ರಚಾರದ ವೇಳೆ ರವಿಶಂಕರ್ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ.

‘ರಾಜ್​ಕುಮಾರ್ ಅವರು ಸೃಜನ್​ನ ಚಿಕ್ಕ ಯಜಮಾನರೇ ಎಂದು ಕರೆಯುತ್ತಿದ್ದರು. ಅಣ್ಣಾವ್ರಿಗೆ ಆಶ್ರಯ ಕೊಟ್ಟ ಕುಟುಂಬ ಅದು. ಅದಕ್ಕೆ ಆ ಕುಟುಂಬದ ಮೇಲೆ ಅಷ್ಟು ಗೌರವ’ ಎಂದರು. ‘ನಮ್ಮ ತಾತ (ಸುಬ್ಬಯ್ಯ ನಾಯ್ಡು) ನಾಟಕ ಕಂಪನಿಯಲ್ಲಿ ರಾಜ್​ಕುಮಾರ್ ಕೆಲಸ ಮಾಡುತ್ತಿದ್ದರು’ ಎಂದು ಸೃಜನ್ ಹೇಳಿದ್ದಾರೆ.

ರಾಜ್​ಕುಮಾರ್ ಅವರು ಎಲ್ಲರಿಗೂ ಸಾಕಷ್ಟು ಗೌರವ ಕೊಡುತ್ತಿದ್ದರು. ಹಿರಿಯರು ಹಾಗೂ ಕಿರಿಯರು ಎಂದು ಅವರಿಗೂ ಬೇಧಭಾವ ತೋರಿಸಿಲ್ಲ. ಈ ಕಾರಣದಿಂದಲೇ ಅವರು ಸಾಕಷ್ಟು ಇಷ್ಟ ಆಗುತ್ತಿದ್ದರು. ರಾಜ್​ಕುಮಾರ್ ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಇತರ ಕಲಾವಿದರನ್ನು ಅವರು ಸಾಕಷ್ಟು ಗೌರವದಿಂದ ಕಾಣುತ್ತಿದ್ದರು.

ಇದನ್ನೂ ಓದಿ: ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಪ್ರಾಮಾಣಿಕ ಮಾತು

ಚಿತ್ರರಂಗಕ್ಕೆ ಸಾಕಷ್ಟು ವಿಲನ್​ಗಳನ್ನು ನೀಡಿದ ಕೊಡುಗೆ ಕೂಡ ರಾಜ್​ಕುಮಾರ್​ಗೆ ಇದೆ. ನಾಟಕ ಕಂಪನಿಯಿಂದ ಬಂದ ಅವರು ನಂತರ ಸೂಪರ್ ಸ್ಟಾರ್ ಆದರು. ಅವರು ನಿಧನ ಹೊಂದಿ ಸಾಕಷ್ಟು ವರ್ಷಗಳು ಕಳೆದರೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಈಗಲೂ ಆಗುತ್ತಿದೆ. ಇದು ಅವರ ಸಾಧನೆಗೆ ಹಿಡಿದ ಕೈಗನ್ನಡಿ ಆಗಿದೆ. ಪರಭಾಷಾ ಕಲಾವಿದರೂ ಕೂಡ ಅವರಿಗೆ ಸಾಕಷ್ಟು ಗೌರವ ನೀಡುತ್ತಿದ್ದರು. ಅವರ ಕುಟುಂಬ ರಾಜಕೀಯದಲ್ಲಿ ಈಗಲೂ ಆ್ಯಕ್ಟಿವ್ ಆಗಿದೆ. 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:14 am, Fri, 28 November 25

Follow Us
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್