
ರಾಜ್ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ಇಂದು ನಮ್ಮ ಜೊತೆಗೆ ಇದ್ದಿದ್ದರೆ 96ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ರಾಜ್ಕುಮಾರ್ ಅವರು ನಿಧನ ಹೊಂದುವಾಗ ಅವರಿಗೆ 76 ವರ್ಷ ವಯಸ್ಸು. ರಾಜ್ಕುಮಾರ್ ಅವರು ನಿಧನ ಹೊಂದಿದರೂ ಅವರ ಆದರ್ಶಗಳು ಇಂದಿಗೂ ಪಾಲಿಸ್ಪಡುತ್ತಿವೆ. ರಾಜ್ಕುಮಾರ್ ಅವರ ಅಪರೂಪದ ಸಂದರ್ಶನಗಳು ಈಗಲೂ ಲಭ್ಯ. ಅವರು ಹೇಳಿದ ಒಂದು ಅಪರೂಪದ ವಿಚಾರ ಇದೆ.
ರಾಜ್ಕುಮಾರ್ ನಟಿಸಿದ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’. ಈ ಚಿತ್ರವು 1954ರ ಮೇ 7ರಂದು ತೆರೆಗೆ ಬಂತು. ಅಂದರೆ, ಈ ಸಿನಿಮಾ ರಿಲೀಸ್ ಆಗಿ 70 ವರ್ಷಗಳು ಕಳೆದು ಹೋಗಿವೆ. ಈ ಸಿನಿಮಾದಲ್ಲಿ ನಟಿಸೋ ಮೊದಲು ರಾಜ್ಕುಮಾರ್ ಅವರು ‘ಗುಬ್ಬಿ ವೀರಣ್ಣ’ ನಾಟಕ ಕಂಪನಿಯಲ್ಲಿ ಬಣ್ಣ ಹಚ್ಚುತ್ತಿದ್ದರು.
ರಾಜ್ಕುಮಾರ್ ಅವರು ಕಣ್ಣಪ್ಪನಾಗಿ ನಟಿಸಿದರು. ಈ ಸಿನಿಮಾದ ಶೂಟ್ಗೂ ಮೊದಲು ರಾಜ್ಕುಮಾರ್ಗೆ ಆಡಿಷನ್ ಮಾಡಲಾಯಿತು. ಅವರು ನಟಿಸಿ ತೋರಿಸಿದ್ದರು. ನಾಟಕದಲ್ಲಿ ಪಳಗಿದ್ದರಿಂದ ರಾಜ್ಕುಮಾರ್ಗೆ ಇದು ಕಷ್ಟ ಎನಿಸಲೇ ಇಲ್ಲ. ಆದರೆ, ನಾಟಕದಲ್ಲಿ ಕೈಗಳನ್ನು ಬೀಸಿಕೊಂಡು ಅವರು ನಟಿಸುತ್ತಿದ್ದರು. ಆದರೆ, ಇಲ್ಲಿ ಆ ರೀತಿ ಆಗೋದಿಲ್ಲ ಎಂಬುದು ರಾಜ್ಕುಮಾರ್ ಅವರ ಅಭಿಪ್ರಾಯ ಆಗಿತ್ತು.
ಆಡಿಷನ್ ಕೊಟ್ಟು ಹಲವು ದಿನ ಕಳೆದರೂ ಅವರಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ನಿರ್ದೇಶಕ ಎಚ್.ಎಲ್.ಎನ್ ಸಿಂಹ ಅವರು ಪತ್ರ ಕಳುಹಿಸಿದರು. ನೀವು ಪಾತ್ರಕ್ಕೆ ಆಯ್ಕೆ ಆದಿರಿ ಎಂದು ರಾಜ್ಕುಮಾರ್ಗೆ ಪತ್ರ ಬಂದೇ ಬಿಡ್ತು. ಇದನ್ನು ಕೇಳಿ ರಾಜ್ಕುಮಾರ್ ಖುಷಿ ಆದ್ರು. ಅಲ್ಲಿಂದ ಅವರ ಸಿನಿ ಪಯಣ ಶುರು ಆಯ್ತು ಎನ್ನಬಹುದು.
ಇದನ್ನೂ ಓದಿ: ರಾಜ್ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್ನ ಅಭಿಮಾನಿಗಳೇ ಊಹಿಸಬೇಕು
ರಾಜ್ಕುಮಾರ್ ಎಲ್ಲ ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ, ಪೌರಾಣಿಕ/ ಭಕ್ತಿ ಪ್ರಧಾನ ಪಾತ್ರಗಳಿಗೆ ಹೆಚ್ಚು ಒಲವು ಇತ್ತು. ಅವರು ನಟಿಸಿದ ಮೊದಲ 100 ಸಿನಿಮಾಗಳ ಪೈಕಿ ಬಹುತೇಕವು ಪೌರಾಣಿಕ ಪಾತ್ರಗಳೇ ಅನ್ನೋದು ವಿಶೇಷ. ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ರಾಜ್ಕುಮಾರ್ ಸಿನಿಮಾ ಮಾಡಿದರೆ ಯಶಸ್ಸು ಗ್ಯಾರಂಟಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.