ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು?

ರಾಜ್ ಕುಮಾರ್ ಅವರು ತಮ್ಮ ಭಕ್ತಿಯಿಂದ ಪ್ರಸಿದ್ಧರಾಗಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಅವರು ಮಂತ್ರಾಲಯದ ಗರ್ಭಗುಡಿಯಲ್ಲಿ ರಾತ್ರಿ ಕಳೆದರು ಎಂಬುದು ವಿಶೇಷ. ಈ ಚಿತ್ರವು ಅವರ ನೆಚ್ಚಿನ ಚಿತ್ರವಾಗಿತ್ತು ಮತ್ತು ದೊರೆ ಭಗವಾನ್ ಅವರ ಸಹಾಯದಿಂದ ನಿರ್ಮಾಣಗೊಂಡಿತು .

ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು?
ರಾಜ್​ಕುಮಾರ್
Updated By: ರಾಜೇಶ್ ದುಗ್ಗುಮನೆ

Updated on: Apr 24, 2025 | 7:35 AM

ರಾಜ್​ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 23) ಜನ್ಮದಿನ. ಅವರು ಹುಟ್ಟಿದ್ದು ಹಾಗೂ ನಿಧನರಾಗಿದ್ದು ಒಂದೇ ತಿಂಗಳಲ್ಲಿ. 1929ರ ಏಪ್ರಿಲ್ 24ರಂದು ರಾಜ್​ಕುಮಾರ್ ಅವರು ಸಿಂಗನಲ್ಲೂರು ಪುಟ್ಟಸ್ವಾಮಿ ಮುತ್ತುರಾಜ್ ಆಗಿ ಜನಿಸಿದರು. ದೊಡ್ಡ ಗಾಜನೂರು ಅವರು ಜನಿಸಿದ ಸ್ಥಳ. ರಾಜ್​ಕುಮಾರ್ ಅವರು ನಟಿಸಿದ ಸಿನಿಮಾ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ. ಏಕೆಂದರೆ ಅವರ ಪ್ರತಿ ಚಿತ್ರಗಳಲ್ಲೂ ಒಂದು ಸಂದೇಶ ಇರುತ್ತಿತ್ತು. ಪ್ರತಿ ಸಿನಿಮಾಗಳ ಹಿಂದೆ ಒಂದು ಅಚ್ಚರಿಯ ಕಥೆ ಕೂಡ ಇರುತ್ತಿತ್ತು.

ರಾಜ್​ಕುಮಾರ್ ಅವರು ಪೌರಾಣಿಕ ಪಾತ್ರಗಳ ಮೂಲಕ ಗಮನ ಸೆಳೆದವರು. ಈ ಪಾತ್ರಗಳಲ್ಲಿ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ರಾಜ್​ಕುಮಾರ್ ಅವರನ್ನು ಜನರು ಹೆಚ್ಚು ಇಷ್ಟಪಟ್ಟಿದ್ದು ಇದೇ ಕಾರಣಕ್ಕೆ ಎಂದೇ ಹೇಳಬಹುದು. 1966ರಲ್ಲಿ ರಿಲೀಸ್ ಆದ ‘ಮಂತ್ರಾಲಯ ಮಹಾತ್ಮೆ’ ಅವರ ವಿಶೇಷ ಚಿತ್ರಗಳಲ್ಲಿ ಒಂದು.

‘ಮಂತ್ರಾಲಯ ಮಹಾತ್ಮೆ’ ಸಿನಿಮಾಗೆ ಟಿವಿ ಸಿಂಗ್ ಠಾಕೂರ್ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಾಜ್​ಕುಮಾರ್ ಅವರು ರಾಘವೇಂದ್ರ ಸ್ವಾಮಿ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಫೇವರಿಟ್ ಚಿತ್ರ. ಈ ಸಿನಿಮಾನ ಮಾತ್ರ ರಾಜ್​ಕುಮಾರ್ ಅವರು ನೋಡಿ ಎಂದು ಅಭಿಮಾನಿಗಳ ಬಳಿ ಕೋರುತ್ತಿದ್ದರಂತೆ. ಈ ಸಿನಿಮಾ ಅವರಿಗೆ ಅಷ್ಟು ಹತ್ತಿರ ಆಗಿತ್ತು ಎಂದೇ ಹೇಳಬಹುದು.

ಇದನ್ನೂ ಓದಿ
ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
ರಾಜ್​ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್ ಏನು?
‘ಸೀತಾ ರಾಮ’ ಧಾರಾವಾಹಿ: ಅಶೋಕ್​ಗೆ ಗೊತ್ತಾಗಿ ಹೋಯ್ತು ಸಿಹಿಯ ಆತ್ಮದ ಕಥೆ

ರಾಜ್​ಕುಮಾರ್ ಒಮ್ಮೆ ಮಂತ್ರಾಲಯಕ್ಕೆ ತೆರಳಿದ್ದರು. ಅಲ್ಲಿ ಅವರು ರಾತ್ರಿ ಮಲಗುತ್ತೇನೆ ಎನ್ನುವ ಕೋರಿಕೆ ಇಟ್ಟರು. ಗರ್ಭಗುಡಿಯಲ್ಲಿ ಮಲಗಲು ಅವಕಾಶ ನೀಡಲಾಯಿತು. ಮುಂಜಾನೆ ಅವರು ಎದ್ದು ನೇರವಾಗಿ ಮನೆಗೆ ಬಂದರು. ದೊರೆ ಭಗವಾನ್ ಬಳಿ ಬಂದ ರಾಜ್​ಕುಮಾರ್, ನಾನು ರಾಘವೇಂದ್ರ ಸ್ವಾಮಿಗಳ ಬಗ್ಗೆ ಸಿನಿಮಾ ಮಾಡ್ತೀನಿ, ನೀವು ಮಾಡಿ ಎಂದು ಕೇಳಿದರು. ಆ ಬಳಿಕ ಸಿನಿಮಾ ಆಯಿತು.

ಇದನ್ನೂ ಓದಿ: ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು

ರಾಜ್​ಕುಮಾರ್ ಅವರು ತುಂಬಾನೇ ಶ್ರದ್ಧೆ ಹಾಗೂ ಭಕ್ತಿಯಿಂದ ಆ ಚಿತ್ರ ಮಾಡಿದರು ಎಂದೇ ಹೇಳಬಹುದು. ದೊರೈ-ಭಗವಾನ್ ಈ ಸಿನಿಮಾದ ನಿರ್ಮಾಣದಲ್ಲಿ ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದರು. ಇವರ ಮೇಲುಸ್ತುವಾರಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾ ರಿಲೀಸ್ ಆಗಿ 70 ವರ್ಷಗಳು ಕಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Thu, 24 April 25