
ಈಗಿನ ಕಾಲಕ್ಕೆ ಯಾವುದನ್ನೇ ಶೂಟ್ ಮಾಡಬೇಕು ಎಂದರೂ ಸುಲಭ. ಒಂದು ಶಾರ್ಕ್ ಜೊತೆ, ಹಾವಿನ ಜೊತೆ ಹೀರೋ ಸೆಣೆಸಾಡಿದಂತೆ ತೋರಿಸಬೇಕು ಎಂದರೆ ವಿಎಫ್ಎಕ್ಸ್ ಬಳಕೆ ಮಾಡಿದರಾಯಿತು. ‘ಆರ್ಆರ್ಆರ್’ (RRR) ಚಿತ್ರದಲ್ಲಿ ಈ ರೀತಿಯೇ ಅನೇಕ ಪ್ರಾಣಿಗಳನ್ನು ಸೃಷ್ಟಿ ಮಾಡಲಾಗಿದೆ. ಈ ರೀತಿಯ ಸಾಕಷ್ಟು ಉದಾಹರಣೆ ಸಿಗುತ್ತವೆ. ಆದರೆ, ಮೊದಲೆಲ್ಲ ಹೀಗೆ ಇರಲಿಲ್ಲ. ನಿಜವಾದ ಪ್ರಾಣಿಗಳು, ಜಂತುಗಳ ಜೊತೆ ಶೂಟ್ ಮಾಡಬೇಕಿತ್ತು. ರಾಜ್‌ಕುಮಾರ್ ಅಂಥ ರಿಸ್ಕ್ಗಳನ್ನು ತೆಗೆದುಕೊಳ್ಳುತ್ತಿದ್ದರು.
ರಾಜ್‌ಕುಮಾರ್ ಅವರು ಸಿನಿಮಾನ ತುಂಬಾನೇ ಇಷ್ಟಪಡುತ್ತಿದ್ದರು. ಯಾವುದೇ ಶೂಟಿಂಗ್ ಇದ್ದರೂ ನೈಜವಾಗಿ ಮೂಡಿ ಬರುವಂತೆ ಮಾಡೋದು ಅವರ ಆಸೆ. ಈ ಕಾರಣಕ್ಕೆ ಎಂಥ ರಿಸ್ಕ್ ಇದ್ದರೂ ತೆಗೆದುಕೊಳ್ಳುತ್ತಿದ್ದರು. ‘ಒಂದು ಮುತ್ತಿನ ಕಥೆ’ ಸಿನಿಮಾ ಶೂಟ್ ಸಂದರ್ಭದಲ್ಲಿ ನೀರಿನ ಆಳದಲ್ಲಿ ಇಳಿದು ಆ್ಯಕ್ಟ್ ಮಾಡಿದ್ದರು. ಈಗ ರಾಜ್‌ಕುಮಾರ್ ಅವರು ಚೇಳಿನ ಜೊತೆ ಸೆಣೆಸಾಡಿದ ವಿಡಿಯೋ ವೈರಲ್ ಆಗಿದೆ.
ರಾಜ್‌ಕುಮಾರ್ ಅವರ ದೇಹದ ಮೇಲೆ ಚೇಳು ಕುಳಿತುಕೊಳ್ಳುತ್ತದೆ. ನಂತರ ಅದನ್ನು ರಾಜ್‌ಕುಮಾರ್ ಅವರು ತೆಗೆದು ಬೀಸಾಕುತ್ತಾರೆ. ಇದನ್ನು ಅವರು ರಿಯಲ್ ಆಗಿ ಮಾಡಿದ್ದರು. ಇದನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ.
‘ಆವಾಗಿನ ಸಿನಿಮಾದಲ್ಲಿ ರಿಯಲ್ ಹಾವು ಸಿಂಹ ಚಿರತೆ ಆನೆ ಜೊತೆ ಸಿನಿಮಾ ಮಾಡೋರು ಈಗ ಕೇವಲ ಗ್ರಾಫಿಕ್ಸ್’ ಸಿನಿಮಾಗಳು ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ಎಂಪಿ ಶಂಕರ್ ಡೈರೆಕ್ಷನ್ ಸಿನಿಮಾಗಳೆಲ್ಲ ನಿಜವಾದ ಪ್ರಾಣಿಗಳನ್ನು ಬಳಕೆ ಮಾಡುತ್ತಿದ್ದರು. ಟೈಗರ್ ಪ್ರಭಾಕರ್ ಅವರ ‘ಕಾಡಿನ ರಾಜ’ ರೀತಿಯ ಚಿತ್ರಗಳು ಇದಕ್ಕೆ ಉದಾಹರಣೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಜ್‌ಕುಮಾರ್ ಬಳಿ ಇತ್ತು ಒಂದು ದೊಡ್ಡ ಬ್ರಹ್ಮಾಸ್ತ್ರ; ವಿವರಿಸಿದ್ದ ಜಗ್ಗೇಶ್
ರಾಜ್‌ಕುಮಾರ್ ಅವರು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರು ಪ್ರಾಣಿಗಳನ್ನು ಉಳಿಸಿ ಎಂದು ಕೇಳಿಕೊಳ್ಳಲು ‘ಗಂಧದಗುಡಿ’ ಸಿನಿಮಾ ಮಾಡಿದರು. ಆ ಸಂದರ್ಭದಲ್ಲಿ ನಿಜವಾದ ಕಾಡಿಗೆ ತೆರಳಿ ಶೂಟ್ ಮಾಡಲಾಗಿತ್ತು. ಈಗಿನ ಕಾಲದಲ್ಲಿ ಆಗಿದ್ದರೆ ಸೆಟ್ಗಳ ನಿರ್ಮಾಣ ಮಾಡಿ ಸಿನಿಮಾ ಶೂಟ್ ಮಾಡಲಾಗುತ್ತಿತ್ತೇನೋ. ಆದರೆ, ಆಗಿನ ಕಾಲದಲ್ಲಿ ಆ ರೀತಿ ಮಾಡಿರಲಿಲ್ಲ ಅನ್ನೋದು ವಿಶೇಷ. ರಾಜ್‌ಕುಮಾರ್ ಇಲ್ಲ ಎಂಬ ನೋವ ಅನೇಕರನ್ನು ಕಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.