Rakkasapuradhol First Half Review: ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಫಸ್ಟ್ ಹಾಫ್ ಹೇಗಿದೆ?

ಟ್ರೇಲರ್ ಮೂಲಕ ಗಮನ ಸೆಳೆದ ‘ರಕ್ಕಸಪುರದೋಳ್’ ಸಿನಿಮಾ ಈಗ ತೆರೆಕಂಡಿದೆ. ಕೌತುಕಭರಿತ ಕಥೆ ಈ ಸಿನಿಮಾದಲ್ಲಿ ಇದೆ. ಈ ಚಿತ್ರದ ಶೀರ್ಷಿಕೆಯೇ ಬಹಳ ಇಂಟರೆಸ್ಟಿಂಗ್ ಆಗಿದೆ. ರಾಜ್ ಬಿ. ಶೆಟ್ಟಿ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರದ ಫಸ್ಟ್ ಹಾಫ್ ವಿಮರ್ಶೆ ಇಲ್ಲಿದೆ.

Rakkasapuradhol First Half Review: ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಫಸ್ಟ್ ಹಾಫ್ ಹೇಗಿದೆ?
Raj B Shetty
Edited By:

Updated on: Feb 06, 2026 | 11:44 AM

ರಾಜ್ ಬಿ. ಶೆಟ್ಟಿ (Raj B Shetty) ಅವರ ಸಿನಿಮಾ ಎಂದರೆ ಖಂಡಿತವಾಗಿಯೂ ಏನಾದರೂ ವಿಶೇಷತೆ ಇರುತ್ತದೆ ಎಂಬ ಭರವಸೆ ಅಭಿಮಾನಿಗಳಿಗೆ ಇದೆ. ಅವರು ನಟಿಸಿದ ‘ರಕ್ಕಸಪುರದೋಳ್’ ಸಿನಿಮಾ ಇಂದು (ಫೆಬ್ರವರಿ 6) ಬಿಡುಗಡೆ ಆಗಿದೆ. ರವಿ ಸಾರಂಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರವಿ ವರ್ಮಾ ಅವರು ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಮೂಲಕ ‘ರಕ್ಕಸಪುರದೋಳ್’ (Rakkasapuradhol) ಸಿನಿಮಾ ಬಹಳ ನಿರೀಕ್ಷೆ ಮೂಡಿಸಿತ್ತು. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಮರ್ಡರ್ ಮಿಸ್ಟರಿ ಕಥೆ ಈ ಸಿನಿಮಾದಲ್ಲಿ ಇದೆ. ‘ರಕ್ಕಸಪುರದೋಳ್’ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಅದಕ್ಕೆ ಉತ್ತರ ಇಲ್ಲಿದೆ..

  1. ಸಸ್ಪೆನ್ಸ್ ಮೂಲಕವೇ ರಕ್ಕಸಪುರದೋಳ್ ಸಿನಿಮಾದ‌ ಕಥೆ ಶುರು ಆಗುತ್ತದೆ. ಜೊತೆಗೆ ಕಾಮಿಡಿ ದೃಶ್ಯಗಳು ಕೂಡ ಇದೆ.
  2. ರಾಜ್ ಬಿ. ಶೆಟ್ಟಿ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಪೊಲೀಸ್ ಆದರೂ ಆ ಪಾತ್ರ ಬಹಳ ಡಿಫರೆಂಟ್ ಆಗಿದೆ.
  3. ಸಿದ್ದಯ್ಯ ಸ್ವಾಮಿ ಹಾಡಿನಲ್ಲಿ ಅರ್ಜುನ್ ಜನ್ಯ ಅವರು ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಬಳಿಕ ಕುತೂಹಲ ಹೆಚ್ಚುತ್ತದೆ.
  4. ರಕ್ಕಸಪುರದೋಳ್ ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಹಾರರ್ ಎಲಿಮೆಂಟ್ ಕೂಡ ಇದೆ. ಕೊಳ್ಳಿ ದೆವ್ವದ ಕಥೆ ಹೇಳಲಾಗಿದೆ.
  5. ಸರಣಿ ಕೊಲೆ ನಡೆಯುತ್ತದೆ. ಸೀರಿಯಲ್ ಕಿಲ್ಲರ್ ಯಾರು ಎಂಬ ಕುತೂಹಲ‌ ಪ್ರತಿ ಹಂತದಲ್ಲೂ ಹೆಚ್ಚುತ್ತಾ ಸಾಗುತ್ತದೆ
  6. ಈ ಸಿನಿಮಾದ ಮೊದಲಾರ್ಧದಲ್ಲೇ ಸಾಕಷ್ಟು ಟ್ವಿಸ್ಟ್‌ಗಳಿವೆ. ಕೊಲೆ ಮಾಡಿದ್ದು ಮನುಷ್ಯನಾ ಅಥವಾ ದೆವ್ವನಾ ಎಂಬ ಕೌತುಕ ಮೂಡುತ್ತೆ.
  7. ಸಖತ್ ಥ್ರಿಲ್ಲಿಂಗ್ ಕಥೆ ಆದ್ದರಿಂದ ಈ ಸಿನಿಮಾದ ಮೊದಲಾರ್ಧ ಪಟಪಟನೆ ಸಾಗುತ್ತದೆ. ಇಂಟರ್‌ವಲ್ ವೇಳೆಗೆ ಮಹತ್ವದ ಟ್ವಿಸ್ಟ್.
  8. ಹಲವು ಪಾತ್ರದ ಮೇಲೆ ಕೊಲೆಯ ಅನುಮಾನ ಮೂಡುತ್ತದೆ. ಕೊಲೆಗಾರ ಸಿಕ್ಕೇ ಬಿಟ್ಟ ಎಂಬಷ್ಟರಲ್ಲಿ ಹೊಸ ಟ್ವಿಸ್ಟ್ ಬರುತ್ತದೆ.
  9. ರಾಜ್ ಬಿ. ಶೆಟ್ಟಿ ಅವರಿಗೆ ಇದೊಂದು ಡಿಫರೆಂಟ್ ಸಿನಿಮಾ. ಅವರ ಆಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ಮೂಡಿಬಂದಿದೆ.
  10. ಮೂಢನಂಬಿಕೆ ವರ್ಸಸ್ ವಿಜ್ಞಾನ ಎಂಬ ಕಾನ್ಸೆಪ್ಟ್ ಮೇಲೆ ರಕ್ಕಸಪುರದೋಳ್ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.