18 ವರ್ಷಗಳ ಬಳಿಕ ರಿಲೀಸ್​ಗೆ ‘ರಕ್ತ ಕಾಶ್ಮೀರ’ ರೆಡಿ; 10 ನಿಮಿಷದ ಹಾಡಲ್ಲಿ 15 ಹೀರೋಗಳು

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ 'ರಕ್ತ ಕಾಶ್ಮೀರ' ಸಿನಿಮಾ 18 ವರ್ಷಗಳ ನಂತರ ಬಿಡುಗಡೆಗೆ ಸಿದ್ಧವಾಗಿದೆ. ಉಪೇಂದ್ರ ಮತ್ತು ರಮ್ಯಾ ನಟಿಸಿರುವ ಈ ಚಿತ್ರ ಭಯೋತ್ಪಾದನೆ, ದೇಶಭಕ್ತಿಯನ್ನು ಕುರಿತಾಗಿದೆ. ಕಾಶ್ಮೀರದಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾದಲ್ಲಿ 15 ನಾಯಕರು ಒಂದು ಹಾಡಿನಲ್ಲಿ ಬರುತ್ತಾರೆ ಅನ್ನೋದು ವಿಶೇಷ.

18 ವರ್ಷಗಳ ಬಳಿಕ ರಿಲೀಸ್​ಗೆ ‘ರಕ್ತ ಕಾಶ್ಮೀರ’ ರೆಡಿ; 10 ನಿಮಿಷದ ಹಾಡಲ್ಲಿ 15 ಹೀರೋಗಳು
ರಕ್ತ ಕಾಶ್ಮೀರ

Updated on: Oct 30, 2025 | 12:48 PM

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು 2007ರಲ್ಲಿ ‘ರಕ್ತ ಕಾಶ್ಮೀರ’ (Rakta Kashmir) ಹೆಸರಿನ ಸಿನಿಮಾ ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದರು. ಆದರೆ, ಸಿನಿಮಾಗೆ ರಿಲೀಸ್ ಭಾಗ್ಯ ಸಿಕ್ಕಿರಲಿಲ್ಲ. ಈ ಚಿತ್ರದಲ್ಲಿ ಉಪೇಂದ್ರ ಹಾಗೂ ರಮ್ಯಾ ಅವರು ನಟಿಸಿದ್ದಾರೆ. ಈ ಚಿತ್ರದ ಬಹುತೇಕ ಶೂಟ್ ಆಗಿದ್ದು ಕಾಶ್ಮೀರದಲ್ಲಿ. ಭಯೋತ್ಪಾದನೆಯ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈಗ ಸಿನಿಮಾಗೆ ಕೊನೆಗೂ ರಿಲೀಸ್ ಭಾಗ್ಯ ಸಿಗುತ್ತಿದೆ. 18 ವರ್ಷಗಳ ಬಳಿಕ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ.

‘ರಕ್ತ ಕಾಶ್ಮೀರ’ ಸಿನಿಮಾನ ರಿಲೀಸ್ ಮಾಡಲು ರಾಜೇಂದ್ರ ಸಿಂಗ್ ಬಾಬು ಆಸಕ್ತಿ ತೋರಿಸಿದ್ದಾರೆ. ಇದು ಮಕ್ಕಳನ್ನೇ ಇಟ್ಟುಕೊಂಡು ಮಾಡಿದ ಸಿನಿಮಾ. ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ರಮ್ಯಾ ಕೂಡ ನಟಿಸಿದ್ದಾರೆ. ಆಗಿನ ಕಾದಲ್ಲೇ ಸಿನಿಮಾಗೆ 6 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ. ವಿಶೇಷ ಎಂದರೆ ಈ ಚಿತ್ರಕ್ಕಾಗಿ ಉಪ್ಪಿ ಅವರು ಯಾವುದೇ ಸಂಭಾವನೆ ಪಡೆದಿಲ್ಲವಂತೆ.

ಪ್ರತಿ ಸಿನಿಮಾದಲ್ಲೂ ಒಂದು ಹೈಲೈಟ್ ಅನ್ನೋದು ಇರುತ್ತದೆ. ಅದೇ ರೀತಿ, ಈ ಚಿತ್ರದಲ್ಲೂ ಒಂದು ವಿಶೇಷತೆ ಇದೆ.  ಹತ್ತು ನಿಮಿಷದ ಸಾಂಗ್ ಸಿನಿಮಾದಲ್ಲಿ ಇದ್ದು, ಒಟ್ಟು 15 ಹೀರೋಗಳು ಬರುತ್ತಾರೆ ಎಂಬುದು ವಿಶೇಷ. ನಮ್ಮನ್ನು ಅಗಲಿಹೋದ ವಿಷ್ಣುವರ್ಧನ್, ಅಂಬರೀಷ್, ಪುನೀತ್ ಇರುತ್ತಾರೆ ಎಂಬುದು ಮತ್ತೊಂದು ವಿಶೇಷ.

ಇದನ್ನೂ ಓದಿ
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ
‘ನನ್ನ ಮತ್ತು ಅವರ ಮಧ್ಯೆ ಯಾರೂ ಬರಬೇಡಿ’; ಅಶ್ವಿನಿಗೆ ಎಚ್ಚರಿಸಿದ ರಕ್ಷಿತಾ
ಸೇಡು ತೀರಿಸಿಕೊಳ್ಳಲು ತಮ್ಮದೇ ತಂಡದ ರಾಶಿಕಾಗೆ ಮಣ್ಣು ಮುಕ್ಕಿಸಿದ ಗಿಲ್ಲಿ ನಟ
ಸಾಯುವುದಕ್ಕೂ ಸರಿಯಾಗಿ ಒಂದು ವರ್ಷ ಮೊದಲು ಅಪ್ಪು ಮಾಡಿದ ಒಳ್ಳೆಯ ಕೆಲಸ ನೋಡಿ

‘15 ಹೀರೋಗಳನ್ನು ಇಟ್ಟುಕೊಂಡು ಒಟ್ಟು 6 ದಿನ ಶೂಟ್ ಮಾಡಲಾಯಿತು. ಎಲ್ಲರೂ ಚೆನ್ನಾಗಿ ಇದ್ದರು. ಇದೊಂದು ಸಾಧನೆಯೇ ಸರಿ. ಇನ್ಯಾರ ಬಳಿಯೂ ಇದನ್ನು ಮಾಡಲು ಸಾಧ್ಯವಿಲ್ಲ’ ಎಂದು ರಾಜೇಂದ್ರ ಸಿಂಗ್ ಬಾಬು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ರಮ್ಯಾ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೆಮ್ಮೆ ಹೊರಹಾಕಿದ್ದಾರೆ. ‘ರಮ್ಯಾ ತುಂಬಾ ಚೆನ್ನಾಗಿ ನಮಗೆ ಸಿನಿಮಾ ಮಾಡಿ ಕೊಟ್ಟರು. ಕಾಶ್ಮೀರದಲ್ಲಿ ಶೂಟ್ ಮಾಡುವಾಗ 15 ಮಕ್ಳಳನ್ನು ರಮ್ಯಾನೇ ನೋಡಿಕೊಂಡರು. ರಮ್ಯಾ ಅವರ ಬಳಿ ಪ್ರತಿಭೆ ಇದೆ. ಅವರು ಇನ್ನಷ್ಟು ಸಿನಿಮಾ ಮಾಡಬೇಕು. ರಾಣಿ ಚೆನ್ನ ಭೈರಾದೇವಿ ಸಿನಿಮಾ ಮಾಡಬೇಕು ಎಂದಿದ್ದೇನೆ. ಈ ಪಾತ್ರವನ್ನು ರಮ್ಯಾಗೆ ನೀಡುವ ಉದ್ದೇಶ ಇದೆ’ ಎನ್ನುತ್ತಾರೆ ಅವರು.

ಇದನ್ನೂ ಓದಿ: ರಮ್ಯಾ, ಉಪೇಂದ್ರ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ

‘ದೇಶಭಕ್ತಿಯ ಚಿತ್ರ ಇದು. ಈ ಸಿನಿಮಾದಲ್ಲಿ ಒಂದು ಇಲಿ ಬರುತ್ತದೆ. ಇಡೀ ಸಿನಿಮಾ ಉದ್ದಕ್ಕೂ ಅದು ಕಾಣಿಸಿಕೊಳ್ಳುತ್ತದೆ. ವಿಎಫ್​ಎಕ್ಸ್ ಮೂಲಕ ಆ ಇಲಿ ರಚಿಸಲಾಗಿದೆ’ ಎಂದು ಅವರು ಹೇಳಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:47 pm, Thu, 30 October 25