ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2022ರ (IPL 2022) ಫೈನಲ್ ಪಂದ್ಯ ನಡೆಯುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಿದರು. ಅದರಲ್ಲಿ ರಣವೀರ್ ಸಿಂಗ್ ದೇಶದ ಹಲವು ಪ್ರಸಿದ್ಧ ಗೀತೆಗಳಿಗೆ ಹೆಜ್ಜೆ ಹಾಕಿದ್ದು ಎಲ್ಲರ ಮನಗೆದ್ದಿದೆ. ವಿಶೇಷವೆಂದರೆ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರದ ‘ವೈಲೆನ್ಸ್ ವೈಲೆನ್ಸ್’ ಡೈಲಾಗ್ಗೆ ಅಭಿನಯಿಸುತ್ತಾ ಅಬ್ಬರಿಸಿದ ರಣವೀರ್ ಸಿಂಗ್ ನಂತರ ‘ಧೀರ ಧೀರ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನ ನೆರೆದಿದ್ದ ಮೈದಾನದಿಂದ ರಣವೀರ್ ಸಿಂಗ್ ನೃತ್ಯಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ‘ಕೆಜಿಎಫ್ ಚಾಪ್ಟರ್ 2’ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ವಿಡಿಯೋ ಇಲ್ಲಿದೆ:
ಹೆಮ್ಮೆಯ ಕ್ಷಣ PROUD MOMENT ?#IPL2022 #KGFChapter2#ನಮ್ಮHombale #ನಮ್ಮRCB@RCBTweets @hombalefilms
@TheNameIsYash @prashanth_neel @VKiragandur @duttsanjay @TandonRaveena @SrinidhiShetty7 @HombaleGroup @bhuvangowda84 @RaviBasrur @ChaluveG— #KGFChapter2 – Box Office Monster ? (@KGFTheFilm) May 29, 2022
ಹಲವು ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ ರಣವೀರ್:
ರಣವೀರ್ ಸಿಂಗ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹಾಡಿಗೆ ಮಾತ್ರವಲ್ಲದೇ ಹಲವು ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾರೆ. ಐಪಿಎಲ್ ಧ್ವಜವನ್ನು ಹಿಡಿದು ಪ್ರವೇಶಿಸಿದ ರಣವೀರ್ ‘ಐನ್ವಯ್ ಐನ್ವಯ್’, ‘ರಾಮ್ ಭಾಯ್’ ಮೊದಲಾದ ತಮ್ಮ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದರು. ಬಂಗಾಳಿ ಹಾಗೂ ರಾಜಸ್ತಾನಿ ಹಾಡುಗಳಿಗೂ ನಟ ಹೆಜ್ಜೆ ಹಾಕಿದರು. ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದ ‘ಘೂಮರ್ ಘೂಮರ್’, ಆರ್ಆರ್ಆರ್ ಚಿತ್ರದ ‘ನಾಟು ನಾಟು’, ‘ಮಾಸ್ಟರ್’ನ ‘ವಾಥಿ ಕಮಿಂಗ್’ ಹಾಡುಗಳಿಗೂ ನಟ ಭರ್ಜರಿ ಸ್ಟೆಪ್ ಹಾಕಿದರು.
ಎಲ್ಲರ ಮನಗೆದ್ದ ಎಆರ್ ರೆಹಮಾನ್:
ತಮ್ಮ ಸೂಪರ್ ಹಿಟ್ ಹಾಡುಗಳ ಮೂಲಕ ಎ.ಆರ್.ರೆಹಮಾನ್ ಕೂಡ ರಂಜಿಸಿದರು. ಅವರ ಪ್ರಸಿದ್ಧ ‘ವಂದೆ ಮಾತರಂ’ ಗೀತೆ ಹಾಗೂ ‘ಜೈ ಹೊ’ ಗೀತೆಗಳಿಗೆ ಎಲ್ಲರೂ ತಲೆದೂಗಿದರು.
Vande Mataram ?? @arrahman‘s magical performance will touch your hearts. #TATAIPL | #GTvRR pic.twitter.com/ixvjn9vlRT
— IndianPremierLeague (@IPL) May 29, 2022
ಮೈದಾನದಲ್ಲಿ ಉಪಸ್ಥಿತರಿದ್ದ ಅಕ್ಷಯ್ ಕುಮಾರ್:
ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಫೈನಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದಾರೆ. ನೆರೆದಿರುವ ಅಭಿಮಾನಿಗಳಿಗೆ ಅಕ್ಷಯ್ ಕೈಬೀಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
Video: BOSS #AkshayKumar sir waiving at fans during #IPL2022 final today. pic.twitter.com/R7MNK1bTba
— Akshay Kumar 24×7 (@Akkistaan) May 29, 2022
ಐಪಿಎಲ್ 2022ರ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ಮುಖಾಮುಖಿಯಾಗಿವೆ. ಫೈನಲ್ ಪಂದ್ಯದ ವೇಳೆ ಅತ್ಯಂತ ದೊಡ್ಡ ಟಿ-ಶರ್ಟ್ ಪ್ರದರ್ಶಿಸಲಾಗಿದೆ. ಇದು ಗಿನ್ನೆಸ್ ದಾಖಲೆಯನ್ನೂ ಬರೆದಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 pm, Sun, 29 May 22