ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿದ ನಂತರ ಬಾಲಿವುಡ್ಗೆ ಕಾಲಿಡೋಕೆ ರಶ್ಮಿಕಾ ಮಂದಣ್ಣ ರೆಡಿ ಆಗಿದ್ದಾರೆ. ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾ ಒಪ್ಪಿಕೊಳ್ಳುವ ಮೂಲಕ ರಶ್ಮಿಕಾ ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳೋಕೆ ಪ್ರಯತ್ನ ನಡೆಸುತ್ತಿದ್ದಾರೆ. ಈಗ ರಶ್ಮಿಕಾ ನಟನೆಯ ಮೊದಲ ಬಾಲಿವುಡ್ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ರಶ್ಮಿಕಾ ಜತೆ ನಟಿಸುತ್ತಿರುವ ಸಿದ್ದಾರ್ಥ್ ಮಲ್ಹೋತ್ರ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ಹಾಗಾದರೆ, ಈ ಸಿನಿಮಾ ತೆರೆಗೆ ಬರುತ್ತಿರುವುದು ಯಾವಾಗ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಶೇರ್ಷಾ’ ಸಿನಿಮಾದಲ್ಲಿ ಸಿದ್ದಾರ್ಥ್ ಸೈನಿಕನಾಗಿ ಮಿಂಚಿದ್ದರು. ಈಗ ಹೊಸ ಸಿನಿಮಾದಲ್ಲಿ ರಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೇಲೆ ಸಿದ್ದಾರ್ಥ್ ಹಾಗೂ ರಶ್ಮಿಕಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಂಗಳವಾರ (ನವೆಂಬರ್ 2) ಸಿದ್ದಾರ್ಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪಾತ್ರದ ಲುಕ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟರ್ನಲ್ಲಿ ಅವರು ಕತ್ತಲೆ ರೂಂನಲ್ಲಿ ಕುಳಿತಿದ್ದು, ಫೋನ್ನಲ್ಲಿ ಮಾತನಾಡುತ್ತಿದ್ದಾರೆ.
Get ready to be a part of India’s greatest covert operation that derailed Pakistan’s illicit Nuclear Ambitions!
Inspired by real events, #MissionMajnu releasing on 13th May 2022 in a cinema near you??@iamRashmika @RonnieScrewvala @amarbutala @RSVPMovies @GBAMedia_Off pic.twitter.com/Hz6pCOL8W5— Sidharth Malhotra (@SidMalhotra) November 2, 2021
‘ಪಾಕಿಸ್ತಾನದ ಅಕ್ರಮ ಪರಮಾಣು ಮಹತ್ವಾಕಾಂಕ್ಷೆಗಳನ್ನು ಹಳಿತಪ್ಪಿಸಿದ ಭಾರತದ ಮಹಾನ್ ರಹಸ್ಯ ಕಾರ್ಯಾಚರಣೆಯ ಭಾಗವಾಗಲು ಸಿದ್ಧರಾಗಿ. ಇದು ನೈಜ ಘಟನೆ ಆಧಾರಿತವಾಗಿದೆ. #MissionMajnu ಮೇ 13, 2022ರಂದು ತೆರೆಗೆ ಬರುತ್ತಿದೆ’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ.
‘ಮಿಷನ್ ಮಜ್ನು’ ನೈಜ ಘಟನೆ ಆಧರಿಸಿ ಸಿದ್ಧಗೊಂಡಿರುವ ಚಿತ್ರವಾದ್ದರಿಂದ ಸಾಕಷ್ಟು ನಿರೀಕ್ಷೆ ಇದೆ. ಸಿದ್ದಾರ್ಥ್ ಪ್ರತಿ ಸಿನಿಮಾಗೂ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ರಶ್ಮಿಕಾ ಅವರ ಪಾತ್ರ ಇನ್ನೂ ಅನಾವರಣಗೊಂಡಿಲ್ಲ. ಅವರ ಲುಕ್ ಸಿನಿಮಾದಲ್ಲಿ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ. ‘ಗುಡ್ಬೈ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ವೇಗವಾಗಿ ಸಾಗುತ್ತಿದೆ. ತೆಲುಗಿನ ಪುಷ್ಪ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: Sreeleela: ಸಿನಿಮಾ ಸೋತರೂ ಶ್ರೀಲೀಲಾಗೆ ಭರ್ಜರಿ ಬೇಡಿಕೆ; ಟಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣಗೆ ಚಿಂತೆ ಶುರು?
Saami Saami: ಅಲ್ಲು ಅರ್ಜುನ್ ಪಂಚೆ ಹಿಡಿದು ರಶ್ಮಿಕಾ ಬಿಂದಾಸ್ ಡ್ಯಾನ್ಸ್; ಹೇಗಿದೆ ‘ಸಾಮಿ ಸಾಮಿ..’ ಹಾಡು?