AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saami Saami: ಅಲ್ಲು ಅರ್ಜುನ್​ ಪಂಚೆ ಹಿಡಿದು ರಶ್ಮಿಕಾ ಬಿಂದಾಸ್​ ಡ್ಯಾನ್ಸ್​; ಹೇಗಿದೆ ‘ಸಾಮಿ ಸಾಮಿ..’ ಹಾಡು?

Allu Arjun | Rashmika Mandanna: ‘ಸಾಮಿ ಸಾಮಿ’ ಹಾಡನ್ನು ವರದರಾಜ್​ ಚಿಕ್ಕಬಳ್ಳಾಪುರ ಅವರು ಬರೆದಿದ್ದಾರೆ. ಸಾಹಿತ್ಯಕ್ಕೆ ಹೊಂದುವಂತೆ ಡಿಫರೆಂಟ್ ಸ್ಟೆಪ್​ಗಳನ್ನು ನೃತ್ಯ ನಿರ್ದೇಶಕ ಶೇಖರ್​ ವಿ.ಜೆ. ಹೇಳಿಕೊಟ್ಟಿದ್ದಾರೆ. ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

Saami Saami: ಅಲ್ಲು ಅರ್ಜುನ್​ ಪಂಚೆ ಹಿಡಿದು ರಶ್ಮಿಕಾ ಬಿಂದಾಸ್​ ಡ್ಯಾನ್ಸ್​; ಹೇಗಿದೆ ‘ಸಾಮಿ ಸಾಮಿ..’ ಹಾಡು?
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ
TV9 Web
| Edited By: |

Updated on: Oct 28, 2021 | 1:58 PM

Share

ಈಗಂತೂ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಅಷ್ಟರಮಟ್ಟಿಗೆ ಅವರ ಜನಪ್ರಿಯತೆ ಹೆಚ್ಚಿದೆ. ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ನಟಿಸಿರುವ ‘ಪುಷ್ಪ’ ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದೆ. ಈಗಾಗಲೇ ಈ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಒಂದೊಂದೇ ಹಾಡು ಬಿಡುಗಡೆ ಮಾಡುತ್ತ ಚಿತ್ರದ ಮೇಲಿನ ಕ್ರೇಜ್​ ಹೆಚ್ಚಿಸಲಾಗುತ್ತಿದೆ. ಈಗ ‘ಸಾಮಿ ಸಾಮಿ..’ ಸಾಂಗ್​ ರಿಲೀಸ್​ ಆಗಿದ್ದು, ಅಭಿಮಾನಿಗಳನ್ನು ಸೆಳೆದುಕೊಳ್ಳುತ್ತಿದೆ. ಈ ಹಾಡಿನಲ್ಲಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್​ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್​ ಗೆಟಪ್​ ಸಂಪೂರ್ಣ ಡಿಫರೆಂಟ್​ ಆಗಿದೆ. ರಶ್ಮಿಕಾ ಕೂಡ ಹಳ್ಳಿ ಹುಡುಗಿ ರೀತಿ ಕಾಣಿಸಿಕೊಂಡಿದ್ದಾರೆ. ಆದರೂ ಗ್ಲಾಮರ್​ ಏನೂ ಕಮ್ಮಿ ಇಲ್ಲ. ಈಗ ಬಿಡುಗಡೆ ಆಗಿರುವ ‘ಸಾಮಿ ಸಾಮಿ..’ ಹಾಡಿನಲ್ಲಿ ಅವರು ಕಲರ್​ಫುಲ್ ಆಗಿ ಮಿಂಚಿದ್ದಾರೆ. ಕಥಾನಾಯಕಿಗೆ ಕಥಾನಾಯಕನ ಮೇಲಿರುವ ಪ್ರೀತಿ ಎಂಥದ್ದು ಎಂಬುದನ್ನು ಈ ಹಾಡಿನ ಸಾಹಿತ್ಯ ವಿವರಿಸುತ್ತಿದೆ. ಅದಕ್ಕೆ ತಕ್ಕಂತೆಯೇ ಇಬ್ಬರೂ ಭರ್ಜರಿಯಾರಿ ಡ್ಯಾನ್ಸ್​ ಮಾಡಿದ್ದಾರೆ.

‘ಮೊಣಕಾಲ್​ ಮೇಲ್​ ಗಂಟಾ, ಪಂಚೆ ನೀ ಕಟ್ಟಿ ನಿಂತ್ರೆ, ಈ ಪಂಚಪ್ರಾಣವೇ ಹೋಗದೆ ಸಾಮಿ..’ ಎಂಬ ಡಿಫರೆಂಟ್​ ಸಾಲುಗಳನ್ನು ಹೊಂದಿರುವ ಈ ಗೀತೆಯನ್ನು ವರದರಾಜ್​ ಚಿಕ್ಕಬಳ್ಳಾಪುರ ಅವರು ಬರೆದಿದ್ದಾರೆ. ಇಂಥ ಸಾಹಿತ್ಯಕ್ಕೆ ಹೊಂದುವಂತೆ ಡಿಫರೆಂಟ್ ಸ್ಟೆಪ್​ಗಳನ್ನು ನೃತ್ಯ ನಿರ್ದೇಶಕ ಶೇಖರ್​ ವಿ.ಜೆ. ಹೇಳಿಕೊಟ್ಟಿದ್ದಾರೆ. ಅಲ್ಲು ಅರ್ಜುನ್​ ಪಂಚೆ ಹಿಡಿದು ರಶ್ಮಿಕಾ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿರುವುದು ಗಮನ ಸೆಳೆಯುತ್ತಿವೆ. ಈವರೆಗಿನ ಎಲ್ಲ ಸಿನಿಮಾಗಳಿಗಿಂತಲೂ ‘ಪುಷ್ಪ’ದಲ್ಲಿ ಅವರ ಹಾವ-ಭಾವ ಭಿನ್ನವಾಗಿದೆ.

ತೆಲುಗಿನ ಜೊತೆಗೆ ಕನ್ನಡ, ಮಲಯಾಳಂ, ತಮಿಳಿನಲ್ಲೂ ಈ ಹಾಡು ಬಿಡುಗಡೆ ಆಗಿದೆ. ಕನ್ನಡ ವರ್ಷನ್​ಗೆ ಅನನ್ಯಾ ಭಟ್​ ಧ್ವನಿ ನೀಡಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ತೆಲುಗು ವರ್ಷನ್​ ಗೀತೆ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಹಾಡಿಗೆ ದೇವಿ ಶ್ರೀ ಪ್ರಸಾಸ್​ ಸಂಗೀತ ನೀಡಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

(ಸಾಮಿ ಸಾಮಿ ಕನ್ನಡ ವರ್ಷನ್​ ಹಾಡು)

‘ಪುಷ್ಪ’ ಸಿನಿಮಾದಲ್ಲಿ ಡಾಲಿ ಧನಂಜಯ, ಫಹಾದ್ ಫಾಸಿಲ್​, ಜಗಪತಿ ಬಾಬು, ಪ್ರಕಾಶ್​ ರಾಜ್​ ಮುಂತಾದವರು ನಟಿಸಿದ್ದಾರೆ. ಡಿ.17ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿರುವ ಈ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ತುಂಬಾ ಕಿರಿಕಿರಿ ಮಾಡಿದ್ರೆ ರಶ್ಮಿಕಾ ಹೀಗೆ ಒದಿತಾರೆ; ವಿಡಿಯೋ ಸಮೇತ ವಿವರಿಸಿದ ನಟಿ

ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿ

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ