‘ನನಗೂ ಕುಟುಂಬ ಇದೆ’; ಆ ಒಂದು ವಿಚಾರಕ್ಕೆ ರಶ್ಮಿಕಾ ಮಂದಣ್ಣ ಬೇಸರ

ದೀಪಿಕಾ ಪಡುಕೋಣೆ ಅವರ 8 ಗಂಟೆ ಕೆಲಸದ ನೀತಿಯನ್ನು ರಶ್ಮಿಕಾ ಮಂದಣ್ಣ ಬಲವಾಗಿ ಬೆಂಬಲಿಸಿದ್ದಾರೆ. ಕಾರ್ಪೊರೇಟ್ ವಲಯದಂತೆ ಸಿನಿಮಾ ರಂಗದಲ್ಲೂ 5 ದಿನ, 9 ಗಂಟೆ ಕೆಲಸದ ವ್ಯವಸ್ಥೆ ಜಾರಿಗೆ ಬರಬೇಕು ಎಂದು ರಶ್ಮಿಕಾ ಪ್ರತಿಪಾದಿಸಿದ್ದಾರೆ. ಇದರಿಂದ ಕಲಾವಿದರು, ತಂತ್ರಜ್ಞರಿಗೆ ಕುಟುಂಬ, ವೈಯಕ್ತಿಕ ಜೀವನಕ್ಕೆ ಸಮಯ ಸಿಗುತ್ತದೆ ಎಂಬುದು ಅವರ ವಾದ.

‘ನನಗೂ ಕುಟುಂಬ ಇದೆ’; ಆ ಒಂದು ವಿಚಾರಕ್ಕೆ ರಶ್ಮಿಕಾ ಮಂದಣ್ಣ ಬೇಸರ
ರಶ್ಮಿಕಾ

Updated on: Oct 31, 2025 | 3:22 PM

ದೀಪಿಕಾ ಪಡುಕೋಣೆ ಅವರು ಸಿನಿಮಾ ರಂಗದಲ್ಲಿ ಕೇವಲ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಷರತ್ತಿಗೆ ಒಪ್ಪಿದರೆ ಮಾತ್ರ ಅವರು ಸಿನಿಮಾ ಮಾಡಲು ಒಪ್ಪುತ್ತಾರೆ. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಕೆಲವರು ದೀಪಿಕಾ ಅವರನ್ನು ಟೀಕಿಸಿದ್ದರು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಅವರು 8 ಗಂಟೆ ಕೆಲಸದ ನಿಯಮ ಚಿತ್ರರಂಗಕ್ಕೆ ಬರಬೇಕು ಎಂಬುದನ್ನು ಪ್ರತಿಪಾದಿಸಿದ್ದಾರೆ.

ವಾರದಲ್ಲಿ ಐದು ದಿನ ಒಂಭತ್ತು ಗಂಟೆ ಕೆಲಸ ಮಾಡೋ ನಿಯಮ ಕಾರ್ಪೋರೇಟ್ ಜಗತ್ತಿನಲ್ಲಿ ಇದೆ. ಇದರಿಂದ ಸಾಕಷ್ಟು ಸಮಯ ಸಿಗುತ್ತದೆ. ಕುಟುಂಬಕ್ಕೆ ಒಂದಷ್ಟು ಸಮಯ ನೀಡಬಹುದು. ಆದರೆ, ಚಿತ್ರರಂಗದಲ್ಲಿ ಈ ನಿಯಮ ಸಹಾಯಕ್ಕೆ ಬರೋದಿಲ್ಲ. ಕೆಲವೊಮ್ಮೆ ಬೆಳಿಗ್ಗೆ ಆರಂಭ ಆದ ಶೂಟ್ ಮಧ್ಯರಾತ್ರಿವರೆಗೂ ಸಾಗುತ್ತದೆ. ಅಲ್ಲಿನ ಕೆಲಸದ ಶೈಲಿಯೇ ಹಾಗೆ. ಇದಕ್ಕೆ ಒಗ್ಗಿಕೊಳ್ಳಲೇಬೇಕು. ಈಗ ರಶ್ಮಿಕಾ ಅವರು ದೀಪಿಕಾನ ಬೆಂಬಲಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ
‘ಗಿಲ್ಲಿಗೆ ಕಳಪೆ ಕೊಡಬೇಕು’; ಮೊದಲೇ ಪ್ಲ್ಯಾನ್ ಮಾಡಿದ ಅಶ್ವಿನಿ, ರಿಷಾ
ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ
ಗಿಲ್ಲಿಗೂ ಚಿಕ್ಕಪ್ಪನಿದ್ದಾನೆ, ಅವರದ್ದೂ ಒಂದು ಕತೆ ಇದೆ ಕೇಳಿ
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ರಶ್ಮಿಕಾ ಮಾತು


‘ನಾವು ಅತಿಯಾಗಿ ಕೆಲಸ ಮಾಡುತ್ತೇವೆ ಎಂಬ ಅಂಶವನ್ನು ವೈಭವೀಕರಿಸುವುದು ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಅತಿಯಾಗಿ ಕೆಲಸ ಮಾಡುತ್ತೇನೆ. ಅದನ್ನು ಮಾಡಬೇಡಿ. ಅದು ಸೂಕ್ತವಲ್ಲ. ನಿಮಗೆ ಅನುಕೂಲಕರವಾದರೆ ಮಾತ್ರ ಮಾಡಿ. ನಿಮಗೆ ಸರಿ ಎನಿಸಿದ್ದನ್ನು ಮಾಡಿ. ದಿನದ 8-9 ಗಂಟೆಯನ್ನು ನಿಮಗಾಗಿ ಪಡೆಯಿರಿ. ಮುಂದಿನ ವರ್ಷಗಳಲ್ಲಿ ಅದು ಸಹಾಯ ಮಾಡಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ನಟಿಸಿದ್ದ ಸಿನಿಮಾದ ಸೀಕ್ವೆಲ್​​​ನಲ್ಲಿ ರಶ್ಮಿಕಾ, ಶೂಟಿಂಗ್ ಶುರು

‘ಕೆಲಸದ ಸಮಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾನು ಸಾಕಷ್ಟು ಕೆಲಸ ಮಾಡುತ್ತೇನೆ. ನನಗಾಗಿ  ನಾನು ಮಾಡುತ್ತೇನೆ. ಕಲಾವಿದರು ಮಾತ್ರವಲ್ಲ, ನಿರ್ದೇಶಕರು, ಲೈಟ್​ಮೆನ್, ಮ್ಯೂಸಿಕ್ ಹೀಗೆ ಎಲ್ಲರೂ ಸಾಕಷ್ಟು ಕೆಲಸ ಮಾಡುತ್ತಾರೆ. ನಮಗೂ ಕೆಲಸದ ಬರಬೇಕು. ಐದು ದಿನ ಒಂಭತ್ತು ಗಂಟೆ ಕೆಲಸ ಮಾಡುವಂತೆ ಆಗಬೇಕು. ನಮಗೂ ಕುಟುಂಬ ಇದೆ. ಅದರ ಮೇಲೆ ಫೋಕಸ್ ಮಾಡಬೇಕು. ವರ್ಕೌಟ್ ಮಾಡಬೇಕು, ನಿದ್ರಿಸಬೇಕು. ನಂತರ ನಾನು ಆಗ ಇದನ್ನೆಲ್ಲ ಮಾಡಿಲ್ಲ ಎಂದು ಮುಂದೆ ಬೇಸರ ಮಾಡಿಕೊಳ್ಳಬಾರದು’ ಎಂದಿದ್ದಾರೆ ರಶ್ಮಿಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:20 pm, Fri, 31 October 25