AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಎಲ್ಲಿದೆ ಅಂತ ಗೊತ್ತಿಲ್ಲ: ರಶ್ಮಿಕಾ ಹೀಗೆ ಹೇಳಿದ್ದು ನಿಜವೇ? ಆಪ್ತರು ಹೇಳೋದು ಏನು?

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಆರಂಭ ಆದಾಗಿನಿಂದ ಹಲವು ವಿವಾದಗಳು ಶುರುವಾಗಿವೆ. ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಮೇಲೆ ಶಾಸಕ ರವಿಕುಮಾರ್ ಗೌಡ ಗಣಿಗ ಕೆಲವು ಆರೋಪ ಮಾಡಿದ್ದರು. ಅವುಗಳ ಬಗ್ಗೆ ನಟಿಯ ಆಪ್ತ ಮೂಲಗಳು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ.

ಕರ್ನಾಟಕ ಎಲ್ಲಿದೆ ಅಂತ ಗೊತ್ತಿಲ್ಲ: ರಶ್ಮಿಕಾ ಹೀಗೆ ಹೇಳಿದ್ದು ನಿಜವೇ? ಆಪ್ತರು ಹೇಳೋದು ಏನು?
Rashmika
ಮದನ್​ ಕುಮಾರ್​
|

Updated on: Mar 03, 2025 | 10:47 PM

Share

ಅನೇಕ ಕಾರಣಗಳಿಗಾಗಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಕನ್ನಡಿಗರು ಟ್ರೋಲ್ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ‘ನಾನು ಹೈದರಾಬಾದ್​ನವಳು’ ಎಂದು ಹೇಳಿದ್ದು ಅನೇಕರ ಕೋಪಕ್ಕೆ ಕಾರಣ ಆಗಿತ್ತು. ಇನ್ನು, ಅವರು ಕಳೆದ ಬಾರಿಯ ಬೆಂಗಳೂರು ಫಿಲ್ಮ್ ಫೆಸ್ಟಿವಲ್​ಗೆ ಬರಲು ನಿರಾಕರಿಸಿದ್ದು ಎಂದು ಶಾಸಕ ರವಿಕುಮಾರ್ ಗೌಡ ಹೇಳಿದ್ದಾರೆ. ಆದರೆ ರವಿಕುಮಾರ್ ಹೇಳಿಕೆ ನಿಜವಲ್ಲ ಎಂದು ರಶ್ಮಿಕಾ ಅವರ ಆಪ್ತ ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಶಾಸಕ ರವಿಕುಮಾರ್ ಗೌಡ ಗಣಿಗ ಅವರು ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ್ದರು. ‘ರಶ್ಮಿಕಾ ಮಂದಣ್ಣ ಅವರನ್ನು ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದಾಗ, ನಾನು ಹೈದರಾಬಾದ್​ನಲ್ಲಿ ಇದ್ದೇನೆ. ಕರ್ನಾಟಕ ಎಲ್ಲಿ ಇದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಬಳಿ ಸಮಯ ಇಲ್ಲ. ನಾನು ಬರಲ್ಲ ಅಂತ ಹೇಳಿದ್ದರು. ನಮ್ಮ ಶಾಸಕರೊಬ್ಬರು ಅವರ ಮನೆಗೆ ಹೋಗಿ ಹತ್ತಾರು ಬಾರಿ ಕರೆದರೂ ಕೂಡ ಇಷ್ಟು ಉದ್ಧಟತನದಿಂದ ಕನ್ನಡದ ಬಗ್ಗೆ ಮಾತನಾಡುತ್ತಾರೆ ಎಂದರೆ ಇವರಿಗೆ ಬುದ್ಧಿ ಕಲಿಸಬೇಕೋ ಬೇಡವೋ’ ಎಂದು ರವಿಕುಮಾರ್ ಗಣಿಗ ಹೇಳಿದ್ದರು.

ಈ ಹೇಳಿಕೆಗೆ ಸಂಬಂಧಿಸಿದಂತೆ ರಶ್ಮಿಕಾ ಮಂದಣ್ಣ ಅವರ ಆಪ್ತ ಮೂಲಗಳು ಪ್ರತಿಕ್ರಿಯೆ ನೀಡಿವೆ ಎಂದು ‘ಹಿಂದುಸ್ತಾನ್ ಟೈಮ್ಸ್’ ವರದಿ ಪ್ರಕಟಿಸಿದೆ. ‘ರಶ್ಮಿಕಾ ಅವರು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಲು ನಿರಾಕರಿಸಿದ್ದು ಮತ್ತು ಕರ್ನಾಟಕದ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ ಎಂಬುದು ಸಂಪೂರ್ಣ ಸುಳ್ಳು. ಚಿತ್ರೋತ್ಸವಕ್ಕೆ ಯಾರೋ ಆಹ್ವಾನ ನೀಡಿದರು ಎಂಬುದರಲ್ಲೂ ಸತ್ಯವಿಲ್ಲ’ ಎಂದು ನಟಿಯ ಆಪ್ತರು ಹೇಳಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ
Image
‘ನನ್ನ ತಂಗಿಗೆ ಸವಲತ್ತು ಸಿಗಬಾರದು’; ರಶ್ಮಿಕಾ ಮಂದಣ್ಣ ಹೀಗೆ ಅಂದಿದ್ಯಾಕೆ?
Image
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
Image
‘ನಾನು ಹೈದರಾಬಾದ್​ನವಳು’ ಎಂದು ಹೆಮ್ಮೆಯಿಂದ ಹೇಳಿದ ರಶ್ಮಿಕಾ
Image
‘ಎಲ್ಲರಿಗೂ ಆ ವಿಚಾರ ಗೊತ್ತಿದೆ’; ಮದುವೆ ಬಗ್ಗೆ ನೇರವಾಗಿ ಮಾತನಾಡಿದ ರಶ್ಮಿಕಾ

ಇದನ್ನೂ ಓದಿ: ತೆಲುಗಿನಲ್ಲೂ ಧೂಳೆಬ್ಬಿಸಲಿದೆ ‘ಛಾವ’ ಸಿನಿಮಾ; ರಶ್ಮಿಕಾ ಅಭಿಮಾನಿಗಳಿಗೆ ಖುಷಿ

ಇತ್ತೀಚೆಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಕೂಡ ರಶ್ಮಿಕಾ ವಿರುದ್ಧ ಗರಂ ಆಗಿ ಮಾತನಾಡಿದ್ದರು. ‘ಇತ್ತೀಚೆಗೆ ನಾನು ಒಂದು ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದೆ. ಅದರಲ್ಲಿ ಅಪ್ಪಟ ಕನ್ನಡದ ಹೆಣ್ಣುಮಗಳು ರಶ್ಮಿಕಾ ಮಂದಣ್ಣ ತಾನು ಆಂಧ್ರ ಪ್ರದೇಶದವಳು ಎಂದು ಹೇಳಿಕೆ ನೀಡಿದಳು. ನೀವು ಒಂದಷ್ಟು ಚಿಗುರಿದ ಬಳಿಕ, ನಿಮಗೆ ಬೇರೆ ಬೇರೆ ಭಾಷೆಯಲ್ಲಿ ಅವಕಾಶ ಸಿಕ್ಕ ತಕ್ಷಣ ಕನ್ನಡದ ನಾಡನ್ನು ಮರೆಯುತ್ತೀರಿ’ ಎಂದು ನಾರಾಯಣ ಗೌಡ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.