Sign In

By signing in or creating an account, you agree with Associated Broadcasting Company's Terms & Conditions and Privacy Policy.

Kantara: ಜನಮೆಚ್ಚಿದ ‘ಕಾಂತಾರ’ ಬಗ್ಗೆ ರಶ್ಮಿಕಾ ಮೌನ; ಮೊದಲ ಚಿತ್ರದ ನಿರ್ದೇಶಕರನ್ನೇ ಮರೆತ್ರಾ ಕಿರಿಕ್​ ಪಾರ್ಟಿ ನಟಿ?

Rashmika Mandanna | Rishab Shetty: ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದ ‘ಕಿರಿಕ್​ ಪಾರ್ಟಿ’ ಚಿತ್ರದಿಂದಲೇ ರಶ್ಮಿಕಾ ಮಂದಣ್ಣ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿತ್ತು. ಮೊದಲ ಸಿನಿಮಾದಲ್ಲೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು.

Kantara: ಜನಮೆಚ್ಚಿದ ‘ಕಾಂತಾರ’ ಬಗ್ಗೆ ರಶ್ಮಿಕಾ ಮೌನ; ಮೊದಲ ಚಿತ್ರದ ನಿರ್ದೇಶಕರನ್ನೇ ಮರೆತ್ರಾ ಕಿರಿಕ್​ ಪಾರ್ಟಿ ನಟಿ?
ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Oct 18, 2022 | 12:32 PM

ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಪ್ರತಿಷ್ಠೆ ಹೆಚ್ಚಿದೆ. ‘ಕೆಜಿಎಫ್​: ಚಾಪ್ಟರ್​ 2’, ‘777 ಚಾರ್ಲಿ’ ಮುಂತಾದ ಸಿನಿಮಾಗಳಿಂದ ಎಲ್ಲರೂ ಚಂದನವನದ ಕಡೆಗೆ ತಿರುಗಿ ನೋಡುವಂತಾಗಿದೆ. ಈಗ ‘ಕಾಂತಾರ’ (Kantara) ಸಿನಿಮಾ ಎಲ್ಲ ಕಡೆ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಅವರನ್ನು ಪರಭಾಷೆಯ ನಟ-ನಟಿಯರು, ತಂತ್ರಜ್ಞರು ಮನಸಾರೆ ಹೊಗಳಿದ್ದಾರೆ. ಪ್ರಭಾಸ್​, ಅನುಷ್ಕಾ ಶೆಟ್ಟಿ ಮುಂತಾದ ಸ್ಟಾರ್​ ಕಲಾವಿದರು ಭೇಷ್​ ಎಂದಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈ ಚಿತ್ರದ ಬಗ್ಗೆ ಏನೂ ಮಾತನಾಡಿಲ್ಲ. ಅದೇಕೋ ಗೊತ್ತಿಲ್ಲ, ಅವರು ಮೌನವಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸಿನಿಮಾ ಜರ್ನಿ ಆರಂಭ ಮಾಡಿದ್ದೇ ಕನ್ನಡ ಚಿತ್ರರಂಗದಿಂದ. ಬಳಿಕ ಅವರಿಗೆ ಪರಭಾಷೆಯಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕವು ಎಂಬುದು ಬೇರೆ ಮಾತು. ರಶ್ಮಿಕಾ ನಟಿಸಿದ್ದ ಚೊಚ್ಚಲ ಸಿನಿಮಾ ‘ಕಿರಿಕ್​ ಪಾರ್ಟಿ’ಗೆ ನಿರ್ದೇಶನ ಮಾಡಿದ್ದು ಇದೇ ರಿಷಬ್​ ಶೆಟ್ಟಿ. ಈಗ ರಿಷಬ್​ ಬಹುಬೇಡಿಕೆಯ ಸ್ಟಾರ್​ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ಇಷ್ಟೆಲ್ಲ ಆದರೂ ತಮ್ಮ ಚೊಚ್ಚಲ ಸಿನಿಮಾದ ನಿರ್ದೇಶಕನ ಯಶಸ್ಸಿನ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸಾರ್ವಜನಿಕವಾಗಿ ಅಥವಾ ಸೋಶಿಯಲ್​ ಮೀಡಿಯಾದಲ್ಲಿ ಈವರೆಗೂ ಏನನ್ನೂ ಮಾತನಾಡದೇ ಇರುವುದು ಕೌತುಕಕ್ಕೆ ಕಾರಣ ಆಗಿದೆ.

‘ಕಾಂತಾರ’ ಸಿನಿಮಾ ಈಗ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ಬೇರೆ ಭಾಷೆಗಳಿಗೆ ಡಬ್​ ಆಗಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಿಂದಿಯಲ್ಲಿ ರಿಲೀಸ್​ ಆದ ಬಳಿಕ ಉತ್ತರ ಭಾರತದಲ್ಲಿನ ಸಿನಿಪ್ರಿಯರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ಚಿತ್ರವನ್ನು ಎಂಜಾಯ್​ ಮಾಡುತ್ತಿದ್ದಾರೆ. ಎಲ್ಲ ಭಾಷೆಗಳಿಂದ ಭರ್ಜರಿ ಕಲೆಕ್ಷನ್​ ಆಗುತ್ತಿದೆ. ಇಷ್ಟಾದರೂ ರಶ್ಮಿಕಾ ಮಂದಣ್ಣ ಕಡೆಯಿಂದ ಈ ಕನ್ನಡ ಸಿನಿಮಾದ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ
Image
Kantara: ‘ಕಾಂತಾರ’ ಚಿತ್ರದಿಂದ ಅಲ್ಲು ಅರ್ಜುನ್​ ತಂದೆಗೆ ಭಾರಿ ಲಾಭ; ಎಷ್ಟಕ್ಕೆ ನಡೆಯಿತು ತೆಲುಗು ವ್ಯವಹಾರ?
Image
Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Image
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Image
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದ ‘ಕಿರಿಕ್​ ಪಾರ್ಟಿ’ ಚಿತ್ರದಿಂದ ರಶ್ಮಿಕಾ ಮಂದಣ್ಣ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿತ್ತು. ಮೊದಲ ಸಿನಿಮಾದಲ್ಲೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಈಗ ಅವರು ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಶೈನ್ ಆಗುತ್ತಿದಾರೆ. ಬಾಲಿವುಡ್​ ಸಿನಿಮಾಗಳಲ್ಲೂ ನಟಿಸುತ್ತಾ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅಮಿತಾಭ್​ ಬಚ್ಚನ್​ ಜೊತೆ ಅವರು ನಟಿಸಿದ ‘ಗುಡ್​ಬೈ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಚಿತ್ರ ಕಲೆಕ್ಷನ್​ ಮಾಡಲಿಲ್ಲ.

‘ಕಾಂತಾರ’ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಮಾತನಾಡಲೇ ಬೇಕು ಎಂಬ ನಿಯಮವೇನೂ ಇಲ್ಲ. ಅದು ಅವರ ಆಯ್ಕೆಗೆ ಬಿಟ್ಟ ವಿಚಾರ. ಆದರೆ, ತಮ್ಮ ಚೊಚ್ಚಲ ಚಿತ್ರದ ನಿರ್ದೇಶಕರಿಗೆ ಈಗ ಇಷ್ಟು ದೊಡ್ಡ ಗೆಲುವು ಸಿಕ್ಕಿರುವಾಗ ಸೌಜನ್ಯಕ್ಕಾದರೂ ಒಮ್ಮೆ ಅಭಿನಂದನೆ ಸಲ್ಲಿಸಬಹುದಿತ್ತು ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !