ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ಟಾಲಿವುಡ್​ ಅಂಗಳದಲ್ಲಿ ಹೀಗೊಂದು ಸುದ್ದಿ

ರಶ್ಮಿಕಾ ಅವರ ಆ್ಯಟಿಟ್ಯೂಡ್ ಅನೇಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದಿಂದ ಹೊರಗಿಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಮಧ್ಯೆ ತೆಲುಗು ಮಾಧ್ಯಮಗಳಲ್ಲಿ ರಶ್ಮಿಕಾ ಬಗ್ಗೆ ಕೆಲ ಸುದ್ದಿ ಪ್ರಕಟವಾಗಿದೆ.

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ಟಾಲಿವುಡ್​ ಅಂಗಳದಲ್ಲಿ ಹೀಗೊಂದು ಸುದ್ದಿ
ರಶ್ಮಿಕಾ
TV9kannada Web Team

| Edited By: Rajesh Duggumane

Nov 25, 2022 | 9:45 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna)  ಅವರು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ರಶ್ಮಿಕಾ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದು ‘ಕಿರಿಕ್​ ಪಾರ್ಟಿ’ (Kirik Party) ಸಿನಿಮಾ. ಇದನ್ನು ನಿರ್ಮಾಣ ಮಾಡಿದ್ದು ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಃ ಸ್ಟುಡಿಯೋಸ್​’. ಮೊದಲ ಸಿನಿಮಾ ಬಗ್ಗೆ ಕೇಳಿದಾಗ ರಶ್ಮಿಕಾ ಪ್ರೊಡಕ್ಷನ್ ಹೌಸ್ ಹೆಸರನ್ನು ಹೇಳದೆ ಆ್ಯಟಿಟ್ಯೂಡ್ ತೋರಿಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ಜರ್ನಿ ಬಗ್ಗೆ ವಿವರಿಸಿದ್ದರು. ಮಾಡೆಲ್ ಆಗಿ ಬಣ್ಣದ ಬದುಕು ಆರಂಭಿಸಿದೆ, ಪೇಪರ್​ನಲ್ಲಿ ಫೋಟೋ ಬಂತು ಎಂಬಿತ್ಯಾದಿ ವಿಚಾರಗಳನ್ನು ಅವರು ಹೇಳಿಕೊಂಡಿದ್ದರು. ಆ ಬಳಿಕ ಮೊದಲ ಸಿನಿಮಾ ಆಫರ್ ಬಂತು ಎನ್ನುವಾಗ ಅವರು ನಿರ್ಮಾಣ ಸಂಸ್ಥೆಯ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಬದಲಿಗೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದರು. ರಶ್ಮಿಕಾ ಬಗ್ಗೆ ಈಗ ಅಪಸ್ವರ ಕೇಳಿ ಬಂದಿದೆ.

ರಶ್ಮಿಕಾ ಅವರ ಆ್ಯಟಿಟ್ಯೂಡ್ ಅನೇಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದಿಂದ ಹೊರಗಿಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಮಧ್ಯೆ ತೆಲುಗು ಮಾಧ್ಯಮಗಳಲ್ಲಿ ರಶ್ಮಿಕಾ ಬಗ್ಗೆ ಕೆಲ ಸುದ್ದಿ ಪ್ರಕಟವಾಗಿದೆ. ‘ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲು ಕನ್ನಡ  ಚಿತ್ರರಂಗ ಮುಂದಾಗಿದೆ’ ಎಂದು ಬಾಲಿವುಡ್ ಹಂಗಾಮ ಟ್ವೀಟ್​ ಒಂದನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದು ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Rishab Shetty: ರಶ್ಮಿಕಾ ಮಂದಣ್ಣ ಧಿಮಾಕಿಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ; ಇಲ್ಲಿದೆ ವೈರಲ್ ವಿಡಿಯೋ

ರಶ್ಮಿಕಾ ಮಂದಣ್ಣ ಸದ್ಯದ ಮಟ್ಟಿಗಂತೂ ಕನ್ನಡಕ್ಕೆ ಬರುವುದು ಅನುಮಾನವೇ. 2021ರಲ್ಲಿ ತೆರೆಗೆ ಬಂದ ‘ಪೊಗರು’ ಚಿತ್ರವೇ ಕೊನೆ. ಅದಾದ ಬಳಿಕ ಅವರ ಯಾವ ಕನ್ನಡ ಚಿತ್ರಗಳೂ ತೆರೆಗೆ ಬಂದಿಲ್ಲ. ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಬಾಲಿವುಡ್​ನತ್ತ ಮುಖ ಮಾಡಿದ್ದಾರೆ. ‘ಪುಷ್ಪ 2’, ‘ವಾರಿಸು’ ಸೇರಿ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

ಇನ್ನಷ್ಟು ಸಿನಿಮಾ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada