‘ಅಬ್ಬಾ, ಇದು ತುಂಬಾ ನೋವುಂಟು ಮಾಡುತ್ತೆ’; ಬಣ್ಣದ ಲೋಕದ ಕಷ್ಟ ತೆರೆದಿಟ್ಟ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Dec 21, 2021 | 5:46 PM

ಹೀರೋಯಿನ್​ಗಳು ತಮ್ಮ ಬ್ಯೂಟಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದಕ್ಕಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಾರೆ. ಬ್ಯೂಟಿ ಪಾರ್ಲರ್​ಗೆ ತೆರಳಿ ನಾನಾ ರೀತಿಯ ಪ್ರಕ್ರಿಯೆಗೆ ಒಳಗಾಗುತ್ತಾರೆ. ರಶ್ಮಿಕಾ ಮಂದಣ್ಣ ಕೂಡ ಇದಕ್ಕೆ ಹೊರತಾಗಿಲ್ಲ.

‘ಅಬ್ಬಾ, ಇದು ತುಂಬಾ ನೋವುಂಟು ಮಾಡುತ್ತೆ’; ಬಣ್ಣದ ಲೋಕದ ಕಷ್ಟ ತೆರೆದಿಟ್ಟ ನಟಿ
ರಶ್ಮಿಕಾ
Follow us on

ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಪುಷ್ಪ’ ಸಿನಿಮಾದ (Pushpa Movie) ಗೆಲುವಿನ ಖುಷಿಯಲ್ಲಿದ್ದಾರೆ. ಚಿತ್ರಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನೋಡಿ ಅನೇಕರು ರಶ್ಮಿಕಾ ಪಾತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈಗ ರಶ್ಮಿಕಾ ಇನ್​​ಸ್ಟಾಗ್ರಾಮ್​​ನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ನಟ/ನಟಿಯರ ಬದುಕು ತುಂಬಾನೇ ಅದ್ಭುತವಾಗಿ ಕಾಣುತ್ತದೆ. ನಾವೂ ಅವರಂತೆ ಆಗಬೇಕು ಎಂದು ಅನೇಕರು ಬಯಸುತ್ತಾರೆ. ಆದರೆ, ಹೀರೋಯಿನ್​ ಆಗೋದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ತುಂಬಾನೇ ಕಷ್ಟಪಡಬೇಕಾಗುತ್ತದೆ. ಈ ಮಾತನ್ನು ರಶ್ಮಿಕಾ ಮಂದಣ್ಣ ಹೆಳಿದ್ದಾರೆ.

ಹೀರೋಯಿನ್​ಗಳು ತಮ್ಮ ಬ್ಯೂಟಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದಕ್ಕಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಾರೆ. ಬ್ಯೂಟಿ ಪಾರ್ಲರ್​ಗೆ ತೆರಳಿ ನಾನಾ ರೀತಿಯ ಪ್ರಕ್ರಿಯೆಗೆ ಒಳಗಾಗುತ್ತಾರೆ. ರಶ್ಮಿಕಾ ಮಂದಣ್ಣ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಹೀರೋಯಿನ್​ ಆದ ನಂತರದಲ್ಲಿ ತಮ್ಮ ಫಿಟ್​ನೆಸ್​ ಹಾಗೂ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಒಳ್ಳೆಯ ಪಾರ್ಟ್​ ಮಾತ್ರ ನೋಡಿ ನೀವು ನಟರಾಗಲು ಬಯಸುತ್ತೀರಾ? ಬೇಡ. ಆದರೆ, ಇದರಲ್ಲಿ ಬಹಳ ವಿಚಾರ ಇದೆ. ಉದಾಹರಣೆ ನೀವು ಹಲವು ಬಾರಿ ಲೇಸರ್ ಪ್ರಕ್ರಿಯೆಗೆ ಒಳಪಡಬೇಕು. ಅಬ್ಬಾ, ಇದು ತುಂಬಾ ನೋವುಂಟುಮಾಡುತ್ತದೆ’ ಎಂದು ರಶ್ಮಿಕಾ ಕೈ ಚಿತ್ರ ಹಾಕಿಕೊಂಡಿದ್ದಾರೆ.

ವಿಜಯ್​ ದೇವರಕೊಂಡ  ಹಾಗೂ ರಶ್ಮಿಕಾ ಮಂದಣ್ಣ ಬೆಸ್ಟ್ ಫ್ರೆಂಡ್ಸ್​​. ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಇವರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇಬ್ಬರೂ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡ ಉದಾಹರಣೆ ಕೂಡ ಇದೆ. ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಮುಂಬೈ ಹೋಟೆಲ್​ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಬಿಡುವು ಮಾಡಿಕೊಂಡು ಒಂದು ಕಡೆ ಸೇರಿದ್ದಾರೆ. ಇಬ್ಬರೂ ಮುಂಬೈನಲ್ಲಿ ಒಟ್ಟಾಗಿ ಊಟ ಸವಿದಿದ್ದಾರೆ.

ಇದನ್ನೂ ಓದಿ:  ರಶ್ಮಿಕಾ ಜತೆ ತೆರೆಹಂಚಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಧನಂಜಯ

ತೆಲುಗು ಬಿಗ್​ ಬಾಸ್​ ಫಿನಾಲೆ; ವೇದಿಕೆ ಮೇಲೆ ರಶ್ಮಿಕಾ, ರಾಜಮೌಳಿ, ಆಲಿಯಾ ಭಟ್​, ರಣಬೀರ್​ ಕಪೂರ್