ಕನ್ನಡಿಗರ ಬಗ್ಗೆ ರಶ್ಮಿಕಾ ಮಂದಣ್ಣ ಕಾಳಜಿ, ನೀಡಿದರು ಸಲಹೆ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ನೀಡಿದ್ದ ಕೆಲ ಹೇಳಿಕೆಗಳಿಂದ ಕನ್ನಡಿಗರು ನಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ವಿಪರೀತ ಟ್ರೋಲಿಂಗ್ ಸಹ ನಟಿಯ ಮೇಲೆ ನಡೆದಿತ್ತು. ಇದೀಗ ರಶ್ಮಿಕಾ ತಮ್ಮ ಕನ್ನಡಿಗ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ಕನ್ನಡಿಗರ ಪರ ತಮ್ಮ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚುತ್ತಿದ್ದಾರೆ. ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ವೃತ್ತಿ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ತಲುಪಿದ್ದು ಅಲ್ಲಿಯೂ ಸಹ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ತೆಲುಗಿನಲ್ಲೂ ಸಹ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ತಮಿಳಿನಲ್ಲೂ ರಶ್ಮಿಕಾಗೆ ಬೇಡಿಕೆ ಇದೆ. ಆದರೆ ನಟಿಯ ಕೆಲ ಹೇಳಿಕೆಗಳಿಂದಾಗಿ ಈ ಹಿಂದೆ ಕನ್ನಡಿಗರು ರಶ್ಮಿಕಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ ಇದೀಗ ರಶ್ಮಿಕಾ ಕನ್ನಡಿಗರ ಪರ ತಮ್ಮ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ನಟನೆಯ ತೆಲುಗು ಸಿನಿಮಾ ‘ಗರ್ಲ್ಫ್ರೆಂಡ್’ ನವೆಂಬರ್ 7ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರದಲ್ಲಿ ರಶ್ಮಿಕಾ ತೊಡಗಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುವ ರಶ್ಮಿಕಾ, ಅಭಿಮಾನಿಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಸಂವಾದವೊಂದನ್ನು ಮಾಡಿದ್ದಾರೆ. ಈ ವೇಳೆ ಹಲವರು ರಶ್ಮಿಕಾಗೆ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ರಶ್ಮಿಕಾ ಉತ್ತರ ನೀಡಿದ್ದಾರೆ.
ಈ ವೇಳೆ ಅಭಿಮಾನಿಯೊಬ್ಬ ಕನ್ನಡದ ಅಭಿಮಾನಿಗಳಿಗಾಗಿ ಏನಾದರೂ ಹೇಳಿ ಎಂದಿದ್ದಾನೆ, ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರ ನೀಡಿರುವ ರಶ್ಮಿಕಾ, ‘ನೀವು ನನ್ನ ಮನಸ್ಸಲ್ಲಿದ್ದೀರಿ, ನನ್ನ ಯೋಚನೆಗಳಲ್ಲಿ ಇದ್ದೀರಿ, ನೀವು ಸದಾ ಸಂತೋಷವಾಗಿ, ಪಾಸಿಟಿವ್ ಆಗಿ, ಆರೋಗ್ಯವಾಗಿ, ಖುಷಿಯಾಗಿ ಇರಬೇಕೆಂಬುದೇ ನನ್ನ ಆಸೆ. ಜೊತೆಗೆ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಿ ಹೊರಗೆ ವೈರಲ್ ಜ್ವರಗಳು ಹರಡುತ್ತಿವೆ ಮತ್ತು ಟ್ರಾಫಿಕ್ನಲ್ಲಿ ರಸ್ತೆಗಳಲ್ಲಿಯೂ ಸಹ ಜಾಗರೂಕರಾಗಿ ಇರಿ’ ಎಂದಿದ್ದಾರೆ ನಟಿ ರಶ್ಮಿಕಾ.
ಇದನ್ನೂ ಓದಿ:‘ಇದು ವಿಶೇಷ ರಿಂಗ್’; ಕೈಯಲ್ಲಿರೋ ಉಂಗುರದ ಗುಟ್ಟು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
ಅದೇ ಸಂವಾದದಲ್ಲಿ ಮತ್ತೊಬ್ಬ ಅಭಿಮಾನಿ, ‘ನೀವು ಕನ್ನಡ ಸಿನಿಮಾನಲ್ಲಿ ನಟಿಸುತ್ತಿದ್ದೀರ’ ಎಂದು ಪ್ರಶ್ನೆ ಕೇಳಿದ್ದಾನೆ, ಅದಕ್ಕೆ ರಶ್ಮಿಕಾ, ಇಲ್ಲ ಎಂದು ತಲೆ ಆಡಿಸಿದ್ದಾರೆ. ಆ ಮೂಲಕ ತಾವು ಕನ್ನಡ ಸಿನಿಮಾನಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ. ಅದೇ ಸಂವಾದದಲ್ಲಿ ರಶ್ಮಿಕಾ ಅವರು ತಮ್ಮ ‘ಗರ್ಲ್ಫ್ರೆಂಡ್’ ಸಿನಿಮಾ ಬಗ್ಗೆ, ‘ಥಮ’ ಸಿನಿಮಾ ಬಗ್ಗೆ, ಅಲ್ಲು ಅರ್ಜುನ್ ಬಗ್ಗೆ, ತಮ್ಮ ಹೊಸ ಪರ್ಫ್ಯೂಮ್ ಕಂಪೆನಿ ಬಗ್ಗೆ ಇನ್ನೂ ಹಲವು ವಿಷಯಗಳ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ಗರ್ಲ್ಫ್ರೆಂಡ್’ ಸಿನಿಮಾನಲ್ಲಿ ಕನ್ನಡಿಗ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಹಾಡುಗಳು ಗಮನ ಸೆಳೆದಿವೆ. ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




