Ravi Basrur: ಚಿತ್ರರಂಗಕ್ಕೆ ಎಂಟ್ರಿ ಪಡೆದ ರವಿ ಬಸ್ರೂರು ಪುತ್ರ ಪವನ್; ‘ಕ್ಲಿಕ್​’ ಸಿನಿಮಾದ ವಿಶೇಷತೆ ಏನು?

|

Updated on: May 30, 2023 | 7:17 PM

Ravi Basrur son Pawan Basrur: ಶಶಿಕಿರಣ್ ಅವರು ‘ಶರಣ್ಯ ಫಿಲ್ಮಂಸ್’ ಮೂಲಕ ‘ಕ್ಲಿಕ್’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ರವಿ ಬಸ್ರೂರು ಅವರ ಮಗ ಪವನ್ ಬಸ್ರೂರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾನೆ.

Ravi Basrur: ಚಿತ್ರರಂಗಕ್ಕೆ ಎಂಟ್ರಿ ಪಡೆದ ರವಿ ಬಸ್ರೂರು ಪುತ್ರ ಪವನ್; ‘ಕ್ಲಿಕ್​’ ಸಿನಿಮಾದ ವಿಶೇಷತೆ ಏನು?
ಪವನ್​ ಬಸ್ರೂರ್​
Follow us on

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದವರ ಮಕ್ಕಳು ಕೂಡ ಈ ಕ್ಷೇತ್ರದ ಬಗ್ಗೆ ಆಕರ್ಷಿತರಾಗುತ್ತಾರೆ. ಅದಕ್ಕೆ ಅನೇಕ ಉದಾಹರಣೆಗಳು ಇವೆ. ನಟ-ನಟಿಯರ ಮಕ್ಕಳು ಮಾತ್ರವಲ್ಲದೇ ತಂತ್ರಜ್ಞರ ಮಕ್ಕಳು ಕೂಡ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಾರೆ. ಅಂಥವರ ಸಾಲಿಗೆ ಲೇಟೆಸ್ಟ್​ ಆಗಿ ಸೇರ್ಪಡೆ ಆಗಿರುವುದು ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರ ಪುತ್ರ ಮಾಸ್ಟರ್​ ಪವನ್​ ಬಸ್ರೂರು. ‘ಉಗ್ರಂ’, ‘ಮಫ್ತಿ’, ‘ಕೆಜಿಎಫ್: ಚಾಪ್ಟರ್​ 2’ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ಗಾಯಕರಾಗಿಯೂ, ನಿರ್ಮಾಪಕರಾಗಿಯೂ ಸ್ಯಾಂಡಲ್​ವುಡ್​ಗೆ ಚಿರಪರಿತ. ಪರಭಾಷೆಯ ಚಿತ್ರಗಳಿಗೂ ಸಂಗೀತ ನಿರ್ದೇಶಕರಾಗಿ (Music Director) ಕೆಲಸ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು (Pawan Basrur) ಈಗ ಬಾಲ ನಟನಾಗಿ ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ಪಡೆದಿರುವುದು ವಿಶೇಷ. ‘ಕ್ಲಿಕ್​’ ಸಿನಿಮಾದಲ್ಲಿ ಪವನ್​ ಬಸ್ರೂರು ನಟಿಸಿದ್ದಾನೆ.

ಶಶಿಕಿರಣ್​ ನಿರ್ದೇಶನ, ನಿರ್ಮಾಣದಲ್ಲಿ ‘ಕ್ಲಿಕ್​’:

ಚಿತ್ರರಂಗಕ್ಕೆ ಪ್ರತಿ ದಿನ ಹೊಸಬರ ಎಂಟ್ರಿ ಆಗುತ್ತಲೇ ಇರುತ್ತದೆ. ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ ಅವರು ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ‘ಶರಣ್ಯ ಫಿಲ್ಮಂಸ್’ ಮೂಲಕ ‘ಕ್ಲಿಕ್’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ರವಿ ಬಸ್ರೂರ್ ಅವರ ಮಗ ಪವನ್ ಬಸ್ರೂರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾನೆ. ಮಾಸ್ಟರ್ ಪವನ್ ಜೊತೆಯಲ್ಲಿ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನ್ ಸೇರಿದಂತೆ ಹಲವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಖುಷ್ಬೂನ ತುಂಬಾನೇ ಕಾಡಿಸಿದ್ರು ಕನ್ನಡದ ಈ ಬಾಲ ನಟ

‘ಕ್ಲಿಕ್​’ ಸಿನಿಮಾದಲ್ಲಿನ ಮೆಸೇಜ್​ ಏನು?

ಸಮಾಜದಲ್ಲಿ ಬಹುತೇಕ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ನಮ್ಮ ಮುಂದೆ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆಯ ಸುತ್ತ ಸಾಗುವ ಈ ಚಿತ್ರಕ್ಕೆ ಯುವ ನಿರ್ದೇಶಕ ಶಶಿಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಹ ನಿರ್ದೇಶಕರಾಗಿ ವೀರು ಸಾಥ್ ನೀಡಿದ್ದಾರೆ. ಬೆಂಗಳೂರು, ಬಿಡದಿ, ರಾಮನಗರ, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಇದನ್ನೂ ಓದಿ: ‘ಪುಷ್ಪ’ ಸಂಗೀತ ನಿರ್ದೇಶಕನ ಹೊರಗಿಟ್ಟು ರವಿ ಬಸ್ರೂರ್​​ಗೆ ಅವಕಾಶ ನೀಡಿದ ಸಲ್ಮಾನ್ ಖಾನ್

ಈಗಾಗಲೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಕ್ಲಿಕ್’ ಸಿನಿಮಾಗೆ ಆಕಾಶ್ ಪರ್ವ ಹಾಗೂ ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ವಿನಯ್ ಕುಮಾರ್ ಸಂಕಲನ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ‘ಕ್ಲಿಕ್​’ ಸಿನಿಮಾವನ್ನು ತೆರೆಗೆ ತರುಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸದ್ಯದಲ್ಲೇ ರಿಲೀಸ್​ ಡೇಟ್​ ಘೋಷಣೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.