ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗಬೇಕಾ? ಕಿಚ್ಚ ಸುದೀಪ್​ ಹೇಳಿದ್ದಿಷ್ಟು..

ರೇಣುಕಾ ಸ್ವಾಮಿಯ ಕೊಲೆ ಕೇಸ್​ನಲ್ಲಿ ದರ್ಶನ್​ ಎ2 ಆಗಿದ್ದು, ಚಿತ್ರರಂಗದಲ್ಲಿ ಈ ಬಗ್ಗೆ ಹಲವು ಬಗೆಯ ಚರ್ಚೆ ಶುರುವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ದರ್ಶನ್​ ಬ್ಯಾನ್​ ಆಗಬೇಕು ಎಂಬ ಒತ್ತಾಯ ಕೆಲವರಿಂದ ಕೇಳಿಬಂದಿದೆ. ಈ ಕುರಿತು ಕಿಚ್ಚ ಸುದೀಪ್​ ಅವರ ಅನಿಸಿಕೆ ಏನು? ಈ ವಿಡಿಯೋದಲ್ಲಿದೆ ಉತ್ತರ.

ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗಬೇಕಾ? ಕಿಚ್ಚ ಸುದೀಪ್​ ಹೇಳಿದ್ದಿಷ್ಟು..
ಕಿಚ್ಚ ಸುದೀಪ್​

Updated on: Jun 16, 2024 | 10:25 PM

ಸ್ಟಾರ್​ ನಟನಾಗಿ ಮಿಂಚುತ್ತಿದ್ದ ದರ್ಶನ್​ (Darshan) ಈಗ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿಯ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ದರ್ಶನ್​ ಮತ್ತು ಗ್ಯಾಂಗ್​ ಮೇಲೆ ಇದೆ. ಇದು ಗಂಭೀರ ಪ್ರಕರಣ ಆದ್ದರಿಂದ ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಎಂದು ಕೆಲವರು ಹೇಳುತ್ತಿದ್ದಾರೆ. ದರ್ಶನ್​ ಅವರನ್ನು ಸಿನಿಮಾ ರಂಗದಿಂದ ಬ್ಯಾನ್​ ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಈ ವಿಚಾರದ ಬಗ್ಗೆ ನಟ ಕಿಚ್ಚ ಸುದೀಪ್​ (Kichcha Sudeep) ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ನಾವು ಯಾರೂ ಕಾನೂನು ಅಲ್ಲ. ಯಾರನ್ನೂ ನಾವು ಬ್ಯಾನ್​ ಮಾಡೋಕೆ ಆಗಲ್ಲ. ಈ ಕೇಸ್​ನಿಂದ (ದರ್ಶನ್​) ಹೊರಗಡೆ ಬಂದರೆ ಬ್ಯಾನ್​ ಎಂಬ ಮಾತು ಬರುವುದೇ ಇಲ್ಲವಲ್ಲ. ಬ್ಯಾನ್​ ಎಂಬುದು ಇಲ್ಲಿ ಮುಖ್ಯವಲ್ಲ. ನ್ಯಾಯ ಸಿಗಬೇಕು ಎಂಬುದು ಮುಖ್ಯ. ವಾಣಿಜ್ಯ ಮಂಡಳಿಯಲ್ಲಿ ನಮ್ಮ ಸ್ನೇಹಿತರು ಹಾಗೂ ಹಿರಿಯರು ಕೂತಿದ್ದಾರೆ. ಎಲ್ಲರೂ ಹೋಗಿ ಅವರ ಮೇಲೆ ಒತ್ತಡ ಹಾಕಿದಾಗ ಏನು ಹೇಳೋಕೆ ಆಗತ್ತೆ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ: ‘ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’: ದರ್ಶನ್​ ಕೇಸ್​ಗೆ ಸುದೀಪ್​ ಪ್ರತಿಕ್ರಿಯೆ

‘ಕೆಲವು ತಿಂಗಳ ಹಿಂದೆ ನನ್ನ ಮೇಲೂ ಬ್ಯಾನ್​ ಅಂತ ಹೇಳುತ್ತಿದ್ದರು. ಅದು ಪಾಯಿಂಟ್​ ಅಲ್ಲ. ಏನು ನ್ಯಾಯ ಇದೆಯೋ ಅದನ್ನು ಮಾಡಲಿ. ವಾಣಿಜ್ಯ ಮಂಡಳಿ ಇರುವುದು ಚಿತ್ರರಂಗದ ಪ್ರತಿಯೊಬ್ಬರಿಗೆ ನ್ಯಾಯ ನೀಡುವುದಕ್ಕೇ ಹೊರತು ಬ್ಯಾನ್​ ಎಂಬುದು ನಮ್ಮ ಪದ ಅಲ್ಲ. ವಾಣಿಜ್ಯ ಮಂಡಳಿಯಲ್ಲಿ ಇರುವ ಹಿರಿಯರು ಮತ್ತು ನನ್ನ ಗಮನ ಇರುವುದು ನ್ಯಾಯದ ಬಗ್ಗೆ’ ಎಂದು ಸುದೀಪ್​ ಹೇಳಿದ್ದಾರೆ.

Sudeep reaction on Darshan arrest: ದರ್ಶನ್ ಬ್ಯಾನ್ ಬಗ್ಗೆ ಸುದೀಪ್ ಅಚ್ಚರಿ ಮಾತು | #TV9D

‘ಪೊಲೀಸ್​ನವರು ಹೇಗೆ ಕೆಲಸ ಮಾಡುತ್ತಿದ್ದಾರೆ? ಮಾಧ್ಯಮದವರು ಹೇಗೆ ಕೆಲಸ ಮಾಡುತ್ತಿದ್ದಾರೆ? ನಾಳೆ ಕೋರ್ಟ್​ಗೆ ಹೋದಾಗ ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಅದೇ ಮುಖ್ಯ. ಬ್ಯಾನ್​ ಎಂಬುದೆಲ್ಲ ಸೆಕೆಂಡರಿ. ನೋವು ಅನುಭವಿಸಿದ ವ್ಯಕ್ತಿಗಳು ಮತ್ತು ಕುಟುಂಬದವರಿಗೆ ನ್ಯಾಯ ಸಿಗಬೇಕು. ಎಲ್ಲರ ಗಮನ ಅದರ ಮೇಲಿರಲಿ’ ಎಂಬುದು ಕಿಚ್ಚ ಸುದೀಪ್​ ಅವರ ಮಾತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us