2025ರ ಕ್ರಿಸ್​​ಮಸ್​ಗೆ ಡೇಟ್ ಲಾಕ್ ಮಾಡಿದ ‘ಕೆಜಿಎಫ್ 3’? ರಾಕಿಭಾಯ್​ ಕಡೆಯಿಂದ ಗುಡ್​ನ್ಯೂಸ್​?

| Updated By: ಮದನ್​ ಕುಮಾರ್​

Updated on: Sep 29, 2023 | 6:45 PM

‘ಕೆಜಿಎಫ್ 2’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಕಥೆ ಇನ್ನೂ ಬಾಕಿ ಇದೆ ಎಂಬುದನ್ನು ತಿಳಿಸಲಾಗಿತ್ತು. ‘ಕೆಜಿಎಫ್ 3’ ಬರಲಿದೆ ಎಂಬುದನ್ನು ತೋರಿಸಲಾಗಿತ್ತು. ಅದನ್ನು ಹೇಗೆ ತೆರೆಮೇಲೆ ತರಲಾಗುತ್ತದೆ? ಆ ಚಿತ್ರದ ಕಥೆ ಎಲ್ಲಿಂದ ಆರಂಭ ಆಗುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿವೆ. ಈ ಮಧ್ಯೆ 3ನೇ ಚಾಪ್ಟರ್ ಬಗ್ಗೆ ಸುದ್ದಿ ಹರಿದಾಡಿದೆ.

2025ರ ಕ್ರಿಸ್​​ಮಸ್​ಗೆ ಡೇಟ್ ಲಾಕ್ ಮಾಡಿದ ‘ಕೆಜಿಎಫ್ 3’? ರಾಕಿಭಾಯ್​ ಕಡೆಯಿಂದ ಗುಡ್​ನ್ಯೂಸ್​?
ಯಶ್​​
Follow us on

2022ರ ಏಪ್ರಿಲ್ 14ರಂದು ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಯಿತು. ಇದಾದ ಬಳಿಕ ಯಶ್ (Yash) ಅವರ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಅವರ ಮುಂದಿನ ಸಿನಿಮಾ (Yash Next Movie) ಯಾವುದು ಇರಬಹುದು ಎನ್ನುವ ಕುತೂಹಲ ಸದ್ಯಕ್ಕಂತೂ ತಣಿಯುವ ಸೂಚನೆ ಸಿಕ್ಕಿಲ್ಲ. ಹೀಗಿರುವಾಗಲೇ ‘ಕೆಜಿಎಫ್ 3’ (KGF 3) ಬಗ್ಗೆ ಚರ್ಚೆ ಶುರುವಾಗಿದೆ. ಈ ಸಿನಿಮಾ 2025ರ ಕ್ರಿಸ್​ಮಸ್​ಗೆ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಈ ವಿಚಾರದ ಬಗ್ಗೆ ನಿರ್ಮಾಣ ಸಂಸ್ಥೆಯ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ. ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ ‘ಕೆಜಿಎಫ್ 3’ ಸಿನಿಮಾದ ಶೂಟಿಂಗ್ 2024ರ ಕೊನೆಯಲ್ಲಿ ಆರಂಭ ಆಗುವ ನಿರೀಕ್ಷೆ ಇದೆ. 2025ರ ಡಿಸೆಂಬರ್ ವೇಳೆಗೆ ಸಿನಿಮಾ ತೆರೆಗೆ ಬರಲಿದೆಯಂತೆ. ಈ ವಿಚಾರ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ‘ಸಲಾರ್’ ರಿಲೀಸ್ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಆಗುವ ನಿರೀಕ್ಷೆ ಇದೆ.

‘ಕೆಜಿಎಫ್ 2’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಕಥೆ ಇನ್ನೂ ಬಾಕಿ ಇದೆ ಎಂಬುದನ್ನು ತಿಳಿಸಲಾಗಿತ್ತು. ‘ಕೆಜಿಎಫ್ 3’ ಸಿನಿಮಾ ಬರಲಿದೆ ಎಂಬುದನ್ನು ತೋರಿಸಲಾಗಿತ್ತು. ಅದನ್ನು ಹೇಗೆ ತೆರೆಮೇಲೆ ತರಲಾಗುತ್ತದೆ, ಈ ಚಿತ್ರದ ಕಥೆ ಎಲ್ಲಿಂದ ಆರಂಭ ಆಗುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಇವೆ. ಇದಕ್ಕೆ ಉತ್ತರ ಸಿಗೋದು ಯಾವಾಗ ಎಂಬುದು ತಿಳಿದಿಲ್ಲ. ಈ ಮಧ್ಯೆ ಮೂರನೇ ಚಾಪ್ಟರ್ ಬಗ್ಗೆ ಸುದ್ದಿ ಹರಿದಾಡಿದೆ.

ಇದನ್ನೂ ಓದಿ: ಯಶ್​, ರಾಧಿಕಾ ಪಂಡಿತ್​ಗೆ ಲೈಫ್​ ನೀಡಿದ ‘ಮೊಗ್ಗಿನ ಮನಸು’ ಸಿನಿಮಾಗೆ ಈಗ 15 ವರ್ಷ

ಸದ್ಯ ಯಶ್ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ಈಗಾಗಲೇ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾಡೋದು ಫೈನಲ್ ಆಗಿದೆ ಎಂದು ವರದಿ ಆಗಿದೆ. ಆದರೆ, ನಿರ್ಮಾಣ ಮಾಡುವವರು ಯಾರು? ಸಿನಿಮಾ ಸೆಟ್ಟೇರೋದು ಯಾವಾಗ ಎಂಬಿತ್ಯಾದಿ ವಿಚಾರಗಳು ಪ್ರಶ್ನೆಯಾಗೇ ಉಳಿದಿವೆ.

ಇದನ್ನೂ ಓದಿ: ‘ಸಲಾರ್’ ಟೀಸರ್​ನಿಂದ ‘ಕೆಜಿಎಫ್ 2’ ಚಿತ್ರಕ್ಕೆ ಲಿಂಕ್ ಕೊಟ್ಟ ಪ್ರಶಾಂತ್ ನೀಲ್; ಇವುಗಳನ್ನು ಗಮನಿಸಿದ್ರಾ?

‘ಸಲಾರ್’ ಸಿನಿಮಾ ಕೆಲಸದಲ್ಲಿ ‘ಹೊಂಬಾಳೆ ಫಿಲ್ಮ್ಸ್’ ಬ್ಯುಸಿ ಇದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಈ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಡಿಸೆಂಬರ್ 22ರಂದು ಚಿತ್ರ ಬಿಡುಗಡೆ ಆಗಲಿದೆ. ಚಿತ್ರ ಮುಗಿದ ಬಳಿಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.