ಸ್ಟಾರ್ ಆಗುವುದಕ್ಕೂ ಮೊದಲು ಈ ಕಲಾವಿದರು ಮಾಡುತ್ತಿದ್ದ ಕೆಲಸಗಳೇನು ಗೊತ್ತಾ?

ಯಶ್, ವಿಜಯ್ ಸೇತುಪತಿ, ವಿಜಯ್ ದೇವರಕೊಂಡ ಸೇರಿ ಅನೇಕರು ಈ ಸಾಲಿನಲ್ಲಿದ್ದಾರೆ. ಹಾಗಾದರೆ, ಸಿನಿಮಾ ರಂಗಕ್ಕೆ ಬರೋದಕ್ಕೂ ಮೊದಲು ಪರಭಾಷೆಯ ಈ ಸ್ಟಾರ್​ಗಳು ಏನು ಮಾಡುತ್ತಿದ್ದರು? ಅವರ ಜೀವನ ಹೇಗಿತ್ತು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಟಾರ್ ಆಗುವುದಕ್ಕೂ ಮೊದಲು ಈ ಕಲಾವಿದರು ಮಾಡುತ್ತಿದ್ದ ಕೆಲಸಗಳೇನು ಗೊತ್ತಾ?
ಸ್ಟಾರ್ ಆಗುವುದಕ್ಕೂ ಮೊದಲು ಈ ಕಲಾವಿದರು ಮಾಡುತ್ತಿದ್ದ ಕೆಲಸಗಳೇನು ಗೊತ್ತಾ?
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 30, 2023 | 9:53 AM

ಚಿತ್ರರಂಗದಲ್ಲಿ ಸ್ಟಾರ್ ಆದರೆ ಅವರನ್ನು ಆರಾಧಿಸುವವರ ದೊಡ್ಡ ಬಳಗವೇ ಸಿಗುತ್ತದೆ. ಅನೇಕರು ಜೀರೋದಿಂದ ಹೀರೋ ಆಗಿದ್ದಾರೆ. ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಅನೇಕರು ಬೇರೆ ಬೇರೆ ರೀತಿಯ ಕೆಲಸ ಮಾಡಿದ್ದರು. ಚಿತ್ರರಂಗದಲ್ಲಿ ಗುರುತಿಸಿಕೊಂಡ ಬಳಿಕ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಿದೆ. ಈ ಸಾಲಿನಲ್ಲಿ ಯಶ್ (Yash), ವಿಜಯ್ ಸೇತುಪತಿ, ವಿಜಯ್ ದೇವರಕೊಂಡ (Vijay Devarakonda) ಸೇರಿ ಅನೇಕರಿದ್ದಾರೆ. ಹಾಗಾದರೆ, ಸಿನಿಮಾ ರಂಗಕ್ಕೆ ಬರೋದಕ್ಕೂ ಮೊದಲು ಪರಭಾಷೆಯ ಈ ಸ್ಟಾರ್​ಗಳು ಏನು ಮಾಡುತ್ತಿದ್ದರು? ಅವರ ಜೀವನ ಹೇಗಿತ್ತು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ವಿಜಯ್ ಸೇತುಪತಿ

ವಿಜಯ್ ಸೇತುಪತಿ ಅವರು ತಮಿಳು ಹಾಗೂ ಹಿಂದಿಯಲ್ಲಿ ಫೇಮಸ್ ಆಗಿದ್ದಾರೆ. ‘ಜವಾನ್’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಅವರು ಸಿನಿಮಾ ರಂಗಕ್ಕೆ ಕಾಲಿಡುವುದಕ್ಕೂ ಮೊದಲು ದುಬೈನಲ್ಲಿ ಅಕೌಟಂಟ್ ಆಗಿದ್ದರು. ಅವರು ಮಾಡಿದ್ದ 10 ಲಕ್ಷ ರೂಪಾಯಿ ಲೋನ್ ತೀರಿಸಲು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಸ್ಟಾರ್ ಕಲಾವಿದನಾಗಿ ಬೆಳೆದರು.

ದುಲ್ಕರ್ ಸಲ್ಮಾನ್

ಮಲಯಾಳಂನ ಸ್ಟಾರ್ ನಟ ಮಮ್ಮೂಟಿ ಮಗ ದುಲ್ಕರ್ ಸಲ್ಮಾನ್. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚೌಕಟ್ಟು ಹಾಕಿಕೊಂಡು ಬದುಕುತ್ತಿಲ್ಲ. ಅವರು ದುಬೈನಲ್ಲಿ ಐಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಎಂಬಿಎ ಕೂಡ ಮಾಡಿದ್ದಾರೆ. ಕೆಲಸ ಬಿಟ್ಟು ಸಿನಿಮಾ ರಂಗಕ್ಕೆ ಸೇರಿದರು.

ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದಿಂದ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಹಲವು ಕೆಲಸಗಳನ್ನು ಮಾಡಿದ್ದರು. ನೀರಿನ ಕ್ಯಾನ್​ಗಳನ್ನು ಮಾರುತ್ತಿದ್ದರು. ಹೋಟೆಲ್​ನಲ್ಲಿ ಅವರು ಕೆಲಸ ಮಾಡಿದ್ದರು. ಡ್ರೈವರ್ ಆಗಿಯೂ ಕೆಲಸ ಮಾಡಿದ್ದರು. ನಂತರ ಸಿನಿಮಾ ರಂಗಕ್ಕೆ ಬಂದರು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದರು. ‘ಕಾಂತಾರ’ ಗೆಲುವಿನಿಂದ ಪ್ಯಾನ್​ ಇಂಡಿಯಾ ಸ್ಟಾರ್ ಆಗಿದ್ದಾರೆ.

ಯಶ್

‘ಕೆಜಿಎಫ್ 2’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದವರು ಯಶ್. ಆ ಬಳಿಕ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಆದಾಗ್ಯೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಯಶ್ ಆರಂಭದಲ್ಲಿ ಬ್ಯಾಕ್​ಸ್ಟೇಜ್​ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಡ್ರೈವರ್ ಆಗಿದ್ದರು. ಯಶ್ ಮೊದಲು ಕಿರುತೆರೆಗೆ ಕಾಲಿಟ್ಟರು. ನಂತರ ಚಿತ್ರರಂಗಕ್ಕೆ ಬಂದು ಮಿಂಚಿದರು.

ರಜನಿಕಾಂತ್

ರಜನಿಕಾಂತ್ ಅವರು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ‘ಜೈಲರ್’ ಸಿನಿಮಾ ಗೆದ್ದ ಬಳಿಕ ಅವರು ಜಯನಗರ ಡಿಪೋಗೆ ಭೇಟಿ ನೀಡಿದ್ದರು. ಈ ಮೂಲಕ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದರು. ರಜನಿಕಾಂತ್​ಗೆ ಮೊದಲಿನಿಂದ ಹೀರೋ ಆಗಬೇಕು ಎಂಬ ಕನಸಿತ್ತು. ಚೆನ್ನೈಗೆ ಹೋಗಿ ಅದನ್ನು ನನಸು ಮಾಡಿಕೊಂಡರು.

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರು ಹ್ಯಾಂಡ್ಸಮ್ ಹಂಕ್ ಎಂದೇ ಫೇಮಸ್. ಅವರು ಹಣಕ್ಕಾಗಿ ಮ್ಯೂಸಿಕ್ ವಿಡಿಯೋ ಮಾಡುತ್ತಿದ್ದರು. ಸ್ಟಾರ್ ಹೀರೋ ಆಗಲು ಅವರು ಸಾಕಷ್ಟು ಕಷ್ಟಪಟ್ಟಿದ್ದರು. ‘ಖುಷಿ’ ಸಿನಿಮಾ ಗೆಲುವಿನ ಖುಷಿಯಲ್ಲಿ ಅವರಿದ್ದಾರೆ.

ಇದನ್ನೂ ಓದಿ: ಸ್ಟಿರಾಯ್ಡ್​ ಬಳಕೆಯಿಂದ ನಟಿ ಸಮಂತಾ ಮುಖದ ಚರ್ಮಕ್ಕೆ ಆಯ್ತು ಹಾನಿ

ಸಮಂತಾ

ಸಮಂತಾ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಅವರು ಹಣಕ್ಕಾಗಿ ವಿವಿಧ ರೀತಿಯ ಕೆಲಸಗಳನ್ನು ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:19 am, Sat, 30 September 23

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು