ಕಿರುತೆರೆಯಲ್ಲಿ ಫೇಮಸ್ ಆದ ಗಗನಾ ಕುಂಚಿ ಈಗ ಸಿನಿಮಾ ನಾಯಕಿ; ಒಟ್ಟಿಗೆ ಎರಡು ಚಿತ್ರ ಒಪ್ಪಿಕೊಂಡ ನಟಿ

ಸುಗಮ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿವೆ ಮೊದಲ ಚಿತ್ರಕ್ಕೆ (ಪ್ರೊಡಕ್ಷನ್ ನಂಬರ್ 1) ಗುರುಕುಮಾರ್ ಪಿ. ನಿರ್ದೇಶನ ಮಾಡುತ್ತಿದ್ದಾರೆ. ಇವರು ತೆಲುಗಿನಲ್ಲಿ ‘ವಾಲ್ತೇರು ವೀರಯ್ಯ’ ಹಾಗೂ ‘ವೆಂಕಿಮಾಮ’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಕಿರುತೆರೆಯಲ್ಲಿ ಫೇಮಸ್ ಆದ ಗಗನಾ ಕುಂಚಿ ಈಗ ಸಿನಿಮಾ ನಾಯಕಿ; ಒಟ್ಟಿಗೆ ಎರಡು ಚಿತ್ರ ಒಪ್ಪಿಕೊಂಡ ನಟಿ
ಗಗನಾ ಕುಂಚಿ
Follow us
ರಾಜೇಶ್ ದುಗ್ಗುಮನೆ
|

Updated on: Sep 30, 2023 | 12:38 PM

‘ಗಟ್ಟಿಮೇಳ’, ‘ದೊಡ್ಮನೆ ಸೊಸೆ’ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ನಟಿ ಗಗನಾ ಕುಂಚಿ (Gagana Kunchi) ಅವರು ಈಗ ಹಿರಿತೆರೆಗೆ ಕಾಲಿಡಲು ರೆಡಿ ಆಗಿದ್ದಾರೆ. ಒಟ್ಟಿಗೆ ಎರಡೆರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಎರಡೂ ಚಿತ್ರಗಳನ್ನು ಸುಗಮ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಗಗನಾ ದೊಡ್ಡ ಪರದೆಗೆ ಕಾಲಿಡುತ್ತಿರುವ   ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರಿಗೆ ಶುಭಾಶಯ ಕೋರಲಾಗುತ್ತಿದೆ. ಶೀಘ್ರವೇ ಸಿನಿಮಾ ಕೆಲಸಗಳು ಆರಂಭ ಆಗಲಿವೆ.

ಸುಗಮ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿವೆ ಮೊದಲ ಚಿತ್ರಕ್ಕೆ (ಪ್ರೊಡಕ್ಷನ್ ನಂಬರ್ 1) ಗುರುಕುಮಾರ್ ಪಿ. ನಿರ್ದೇಶನ ಮಾಡುತ್ತಿದ್ದಾರೆ. ಇವರು ತೆಲುಗಿನಲ್ಲಿ ‘ವಾಲ್ತೇರು ವೀರಯ್ಯ’ ಹಾಗೂ ‘ವೆಂಕಿಮಾಮ’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಎರಡನೇ ಚಿತ್ರವನ್ನು (ಪ್ರೊಡಕ್ಷನ್ ನಂಬರ್ 2) ವಿಜಯ್ ಆರ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ‘ಜೈ ಭೀಮ್’ ಸೇರಿ ಕೆಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಗಗನಾ ಕುಂಚಿ ಅವರಿಗೆ ಚಿತ್ರರಂಗದ ನಂಟು ತುಂಬಾನೇ ಹಳೆಯದು. ಅವರು ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2009ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ಕಾಲಚಕ್ರ’ ಸೀರಿಯಲ್​ನಲ್ಲಿ ಅವರು ನಟಿಸಿದ್ದರು. ಆ ಬಳಿಕ ರಮೇಶ್ ಅರವಿಂದ್ ನಟನೆಯ ‘ಹೆಂಡ್ತೀರ ದರ್ಬಾರ್’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದರು. ಚಿಂಟು ಟಿವಿಯಲ್ಲಿ ಆರು ವರ್ಷ ನಿರೂಪಕಿಯಾಗಿದ್ದರು. ನಂತರ ‘ದೊಡ್ಮನೆ ಸೊಸೆ’ (2017) ಧಾರಾವಾಹಿಯಲ್ಲಿ ನಟಿಸಿ ನಾಯಕಿ ಆದರು. ತಮಿಳಿನ ‘ಸುಬ್ರಹ್ಮಣ್ಯಪುರಂ’, ಕನ್ನಡದ ‘ಮಹಾದೇವಿ’, ‘ಗಟ್ಟಿಮೇಳ’ ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ಟಿಆರ್​ಪಿ ರೇಸ್​ನಲ್ಲಿ ಮತ್ತೆ ಟ್ರ್ಯಾಕ್​ಗೆ ಮರಳಿದ ‘ಭಾಗ್ಯಲಕ್ಷ್ಮೀ’; ಮೊದಲ ಸ್ಥಾನದಲ್ಲಿ ಯಾವ ಧಾರಾವಾಹಿ?

ಗಗನಾ ನಟನೆಗೆ ಮಾತ್ರ ಸೀಮಿತ ಆಗಿಲ್ಲ. ಮಾಡೆಲಿಂಗ್ ಲೋಕದಲ್ಲೂ ಅವರಿಗೆ ಬೇಡಿಕೆ ಇದೆ. ‘ಮಿಸ್‍ ಕರ್ನಾಟಕ ಇಂಟರ್ ನ್ಯಾಷನಲ್‍’ ಸ್ಪರ್ಧೆಯ ಮೊದಲ ರನ್ನರ್ ಅಪ್‍ ಆಗಿದ್ದರು. ಈಗ ಅವರು ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಲು ರೆಡಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಇದಕ್ಕೆ ಅವರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಅವರನ್ನು ಮೆಚ್ಚಿಕೊಂಡ ಜನರು ಸಿನಿಮಾದಲ್ಲೂ ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ಅಭಿಮಾನಿಗಳದ್ದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ